ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆದ ಇಂದಿನ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪಂದ್ಯದ ಕೇಂದ್ರ ಬಿಂದುವಾಗಿದ್ದರು. ಬುಮ್ರಾ ಓರ್ವ ವಿಶ್ವದ ಶ್ರೇಷ್ಠ ಬೌಲರ್ ಆಗಿದ್ದು, ಸ್ಪೀಡ್ ಪಿಚ್ ನಲ್ಲಿ ಅವರನ್ನು ಎದುರಿಸೋದು ತುಂಬಾನೇ ಕಷ್ಟ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಮೆಲ್ಬರ್ನ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 86 ರನ್ ನೀಡಿ 9 ವಿಕೆಟ್ ಪಡೆದಿದ್ದರಿಂದ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ನೀಡಲಾಯ್ತು. ಬುಮ್ರಾ ಓರ್ವ ಮ್ಯಾಚ್ ವಿನ್ನರ್ ಆಗಿದ್ದು, ಟೆಸ್ಟ್ ಪಂದ್ಯಗಳನ್ನು ಕಳೆದ 12 ತಿಂಗಳನಿಂದ ಆರಂಭಿಸಿದ್ದಾರೆ ಎಂದು ಊಹಿಸಲು ಸಾಧ್ಯವಿಲ್ಲ. ಸ್ಪೀಡ್ ಪಿಚ್ ಗಳಲ್ಲಿ ಬುಮ್ರಾರನ್ನು ಎದುರಿಸೋದು ತುಂಬಾನೇ ಕಷ್ಟ. ಬುಮ್ರಾಗೆ ಪಂದ್ಯದ ಮೇಲೆ ಹಿಡಿತ ಸಿಕ್ಕರೆ ಎದುರಾಳಿಗಳ ಬೆವರು ಇಳಿಸುತ್ತಾರೆ ಎಂದು ಕೊಹ್ಲಿ ಹಾಡಿ ಹೊಗಳಿದ್ದಾರೆ.
Advertisement
Advertisement
ಬುಮ್ರಾ ತಮ್ಮ ಫಿಟ್ನೆಸ್ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಲ್ಲ. ಪ್ರತಿ ಕೆಲಸವನ್ನು ಅಷ್ಟೇ ಪ್ರಾಮಾಣಿಕತನದಿಂದ ಮಾಡುತ್ತಾರೆ. ಕಷ್ಟದ ಕೆಲಸ ಎಂದು ಬೆನ್ನು ತೋರಿಸುವ ವ್ಯಕ್ತಿ ಬುಮ್ರಾ ಅಲ್ಲ. ಹೀಗಾಗಿ ಬುಮ್ರಾ ಓರ್ವ ಮ್ಯಾಚ್ ವಿನ್ನರ್ ಎಂದು ಹೇಳಬಹದು. ಮುಂದಿನ ಟೆಸ್ಟ್ ಗಾಗಿ ಮತ್ತಷ್ಟು ಕಠಿಣ ಅಭ್ಯಾಸದಲ್ಲಿ ಎಲ್ಲ ಆಟಗಾರರು ತೊಡಗಿಕೊಳ್ಳಲಿದ್ದಾರೆ ಎಂದು ಕೊಹ್ಲಿ ತಿಳಿಸಿದರು.
Advertisement
ಕಪಿಲ್ ದಾಖಲೆ ಮುರಿದ ಬುಮ್ರಾ!: ಆಸ್ಟ್ರೇಲಿಯಾ ಮಣ್ಣಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎಂಬ ಕಪಿಲ್ ದೇವ್ ಹೆಸರಿನಲ್ಲಿದ್ದ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡರು. ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‍ನಲ್ಲಿ ನಡೆದ ಈ ಪಂದ್ಯದಲ್ಲಿ ಬುಮ್ರಾ 86 ರನ್ ನೀಡಿ 9 ವಿಕೆಟ್ ಪಡೆದುಕೊಂಡರೆ, ಕಪಿಲ್ ದೇವ್ ಅವರು 1985ರಲ್ಲಿ ಆಡಿಲೇಡ್ ಕ್ರೀಡಾಂಗಣದಲ್ಲಿ 109 ರನ್ ನೀಡಿ 8 ವಿಕೆಟ್ ಪಡೆದಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv