ಬೆಂಗಳೂರು: ಭ್ರಷ್ಟಾಚಾರ ಆರೋಪವಿದ್ರೂ ಉಪವಲಯ ಅರಣ್ಯಾಧಿಕಾರಿಯಾಗಿದ್ದ ವಿಜಯ್ ಕುಮಾರ್‍ಗೆ ಅರಣ್ಯಾಧಿಕಾರಿಯಾಗಿ ಸರ್ಕಾರದಿಂದ ಬಡ್ತಿ ನೀಡಲಾಗಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.
ಲಂಚ ಹೊಡೆಯೋ ಆ ಅಧಿಕಾರಿಗೆ ಸರ್ಕಾರವೇ ಕೊಡುತ್ತಾ ಪ್ರಮೋಷನ್? ದೂರು ಕೊಟ್ಟರೂ ಆ ಅಧಿಕಾರಿಗೆ ಸರ್ಕಾರವೇ ಕೊಡುತ್ತಾ ರಕ್ಷಣೆ ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.
Advertisement
ಏನಿದು ಆರೋಪ?:
ಮನೆಯ ಕಾಂಪೌಂಡ್‍ನಲ್ಲಿದ್ದ ಹಳೆ ಮರ ತೆರವಿಗೆ ಅನಮತಿ ಕೋರಿ ಬೆಂಗಳೂರಿನ ಶಾಂತಿನಗರದ ನಿವಾಸಿಯೊಬ್ಬರು, ಶ್ರೀನಿವಾಸ್ ಮೂಲಕ ಅರ್ಜಿ ಸಲ್ಲಿಸಿದ್ರು. ಆದ್ರೆ ಅರಣ್ಯಾಧಿಕಾರಿ ವಿಜಯ್ ಕುಮಾರ್ ಎಂಬವರು ಸುಮಾರು 50 ಸಾವಿರ ಆಗುತ್ತೆ ಅಂತ ಹೇಳಿದ್ದರು. ಈ ವೇಳೆ 50 ಸಾವಿರ ನಾವು ನಿಮಗೆ ಏನಕ್ಕೆ ನೀಡಬೇಕೆಂದು ಪ್ರಶ್ನಿಸಿದ್ದೆವು. ಆವಾಗ ಅಧಿಕಾರಿ, ಇಲ್ಲಪ್ಪ ಎಲ್ಲರೂ ಹಣ ತಗೊಳ್ತಾರೆ. ಇದೆಲ್ಲಾ ಮಾಮೂಲಿ ಅಂದರು.
Advertisement
Advertisement
ಇದರಿಂದ ಸಂಶಯಗೊಂಡು ಆಯ್ತು ಅಂದ್ಬಿಟ್ಟು 5 ಸಾವಿರ ಅಡ್ವಾನ್ಸ್ ಕೊಟ್ಟು ಅದರ ವಿಡಿಯೋ ಆಡಿಯೋ ಮಾಡಿದ್ವಿ. ಈ ಬಗ್ಗೆ ಕ್ರಮಕೈಗೊಳ್ಳಿ ಅಂತ ಹೇಳಿದ್ರೂ ಇದೂವೆರೆಗೆ ಯಾರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಲು ಹೋದ್ರೆ ಅವರೇ ನಮ್ಮನ್ನು ಗದರಿಸುತ್ತಾರೆ. ನಮ್ಮ ಕರ್ನಾಟಕದಲ್ಲಿ ಅಧಿಕಾರಿಗಳು ಲಂಚ ತೆಗೆದುಕೊಳ್ತಾರೆ ಅಂತ ಹೇಳೋಕೆ ನಾಚಿಕೆಯಾಗುತ್ತದೆ. ಹೀಗಾಗಿ ವಿಜಯ್ ಕುಮಾರ್ ಅವರ ವಿರುದ್ಧ ದಯವಿಟ್ಟು ಕ್ರಮಕೈಗೊಂಡು ನ್ಯಾಯದೊರಕಿಸಿ ಕೊಡಬೇಕೆಂದು ಮನೆ ಮಾಲೀಕ ಶ್ರೀನಿವಾಸ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ರು.
Advertisement
ಆದ್ರೆ ಉಪವಲಯ ಅರಣ್ಯಾಧಿಕಾರಿ ವಿಜಯ್ ಕುಮಾರ್ ಮಾತ್ರ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಶ್ರೀನಿವಾಸ್ ಈ ರೀತಿ ಮಾಡುತ್ತಿದ್ದಾರೆ ಅಂತ ಹೇಳುವ ಮೂಲಕ ಪ್ರಕರಣವನ್ನು ಅಲ್ಲಗಳೆದಿದ್ದಾರೆ. ಒಟ್ಟಿನಲ್ಲಿ ದುಡ್ಡು ಕೊಟ್ರೆ ಮಾತ್ರ ಕೆಲ್ಸ ಆಗುತ್ತೆ, ಇಲ್ಲಾಂದ್ರೆ ಇಲ್ಲ. ನನಗೊಬ್ಬನಿಗೇ ಅಲ್ಲ ಅಂತ ಹೇಳಿದ್ರು. ಲಂಚಕ್ಕೆ ಕೈಯೊಡ್ಡಿದ ಅಧಿಕಾರಿ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ.