ಬಾಗಲಕೋಟೆ: ಬೆಳಂಬೆಳಗ್ಗೆ ಬಾಗಲಕೋಟೆ (Bagalkote) ಜಿಲ್ಲೆಯ ರಬಕವಿ- ಬನಹಟ್ಟಿ (Rabakavi Banahatti) ತಾಲೂಕಿನ ಮಹಾಲಿಂಗಪುರ ಪಟ್ಟಣದ ವಾರ್ಡ್ ನಂಬರ್ 13 ಕೆಂಗೇರಿ ಮಡ್ಡಿಯಲ್ಲಿ ಜೆಸಿಬಿಗಳು ಘರ್ಜಿಸಿವೆ.
ಐದಾರು ವರ್ಷಗಳಿಂದ ಕೆಲ ಕುಟುಂಬಸ್ಥರು ಪಟ್ಟಣದ ಕೆಂಗೇರಿ ಮಡ್ಡಿಯ ಆಶ್ರಯ ಕಾಲೋನಿಯಲ್ಲಿ ವಾಸವಿದ್ದರು. ಆದರೆ ಇಂದು ಜೆಸಿಬಿ ಆಗಮಿಸುತ್ತಿದ್ದಂತೆಯೇ ಸ್ಥಳೀಯರು ಆತಂಕಗೊಂಡಿದ್ದಾರೆ. ಮಾಹಲಿಂಗಪುರ ಪುರಸಭೆ ಹಾಗೂ ತಹಸಿಲ್ದಾರ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆದಿದ್ದು, ಜನ ವಾಸವಿರುವ ಶೆಡ್‌ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಕೃಷಿಹೊಂಡದಲ್ಲಿ ಮುಳುಗಿ ಅಕ್ಕ, ತಂಗಿಯ ದಾರುಣ ಸಾವು
ನಮಗೆ ಯಾವುದೇ ರೀತಿಯ ಸೂಚನೆ ನೀಡದೇ, ನೋಟಿಸ್ ಕೊಡದೇ ಏಕಾಏಕಿ ತೆರವು ಕಾರ್ಯಾಚರಣೆ ಮಾಡಿದ್ದಾರೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.
ಈಗ ತೆರವು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು? ಚುನಾವಣೆ ವೇಳೆ ವೋಟು ಕೇಳಲು ಬರುವ ಜನಪ್ರತಿನಿಧಿಗಳು ಶೆಡ್ ಹಾಕಿಕೊಂಡು ಇಲ್ಲೇ ಇರಿ ಎಂದು ನೋಟಿಸ್ ನೀಡಿದ್ದರು. ಈಗ ಶೆಡ್ ತೆರವು ಮಾಡುವಾಗ ಯಾರೂ ಬರುತ್ತಿಲ್ಲ ಎಂದು ಮಹಿಳೆಯರು ಕಣ್ಣೀರು ಹಾಕಿ ಅಳಲು ತೋಡಿಕೊಳ್ಳುತ್ತಿದ್ದಾರೆ.