-20 ಸಾವಿರ ಮೌಲ್ಯದ ಸ್ವತ್ತುಗಳು ವಶ
ಕಾರವಾರ : ಮಾಂಸಕ್ಕಾಗಿ ಅಕ್ರಮವಾಗಿ ಎಮ್ಮೆಯನ್ನು ಕಡಿದ 6 ಆರೋಪಿಗಳನ್ನು 90 ಕೆಜಿ ಮಾಂಸ ಸಮೇತ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಇಟಗುಳಿ ಗ್ರಾಮದ ಕಲ್ಕೊಪ್ಪ ಮಜಿರೆಯಲ್ಲಿ ನಡೆದಿದೆ.
Advertisement
ಕಲ್ಕೊಪ್ಪ ಮಜಿರೆಯ ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್, ಅಬ್ದುಲ್ ಮಜಿದ್ ಅಬ್ದುಲ್ ಜಲೀಲ್ ಸಾಬ್, ರಿಯಾಜ್ ಅಹ್ಮದ್ ನಜೀರ್ ಮಹಮ್ಮದ್ ಸಾಬ್ , ಹಭೀಬ ರೆಹಮಾನ್ ಮಹಮ್ಮದ್ ಸಾಬ್, ಅನ್ಸಾರ್ ನಜೀರ್ ಮಹಮ್ಮದ್ ಸಾಬ್ ಹಾಗೂ ಅಬ್ದುಲ್ ಶುಕೂರ್ ಇಸ್ಮಾಯಿಲ್ ಸಾಬ್ ಬಂಧಿತ ಆರೋಪಿಗಳು. ಇವರಲ್ಲಿ ನಜೀರ್ ಅಹಮದ್ ಅಬ್ದುಲ್ ವಾಹಿದ್ ಸಾಬ್ ಎಂಬುವವರ ಮನೆಯ ಹಿಂಬದಿಯ ಕೊಠಡಿಯಲ್ಲಿ ಮಾಂಸವನ್ನು ಕಡಿದು ಮಾರಾಟದ ತಯಾರಿ ನಡೆಸಿದ್ದರು. ಇದನ್ನೂ ಓದಿ: ಪೋಷಕರೇ ಎಚ್ಚರ: ಆಟವಾಡುವಾಗ ಆಯತಪ್ಪಿ 11ನೇ ಮಹಡಿಯಿಂದ ಬಿದ್ದು ಬಾಲಕ ಸಾವು
Advertisement
Advertisement
ಇಂದು ಕಚಿತ ಮಾಹಿತಿ ಮೇಲೆ ದಾಳಿ ಮಾಡಿ ಬಂಧಿಸಿದ ಪೊಲೀಸರು ಆರೋಪಿತ ರಿಂದ ಒಟ್ಟು 90 ಕೆಜಿ 64 ಗ್ರಾಂ ಎಮ್ಮೆಯ ಮಾಂಸವನ್ನು, ನೆಲಕ್ಕೆ ಹಾಸಿದ ತಾಡಪತ್ರೆ, ಕಟ್ಟಿಗೆಯ ಕೊಡ್ಡ, ಚೂರಿ 1, ಡ್ರ್ಯಾಗರ್ 1, ತೂಕಮಾಡುವ ತೂಕದ ಯಂತ್ರ-1, ಪ್ಲಾಸ್ಟಿಕ್ ಬುಟ್ಟಿ 1 ಇತ್ಯಾದಿ ಸೇರಿದಂತೆ ಸುಮಾರು 20,410 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.