ಇಂದಿನಿಂದ ಅಧಿವೇಶನ – ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಮೈತ್ರಿ ಸಜ್ಜು

Public TV
2 Min Read
KARNATAKA ASSEMBLY SESSION

ಬೆಂಗಳೂರು: ವಿಧಾನ ಮಂಡಲದ ಅಧಿವೇಶನ (Assembly Session 2025) ಇಂದಿನಿಂದ (ಮಾ.3) ಆರಂಭವಾಗಲಿದೆ. ಆಡಳಿತ ವಿಪಕ್ಷಗಳ ನಡುವೆ ಫೈಟ್ ವೇದಿಕೆ ಸಜ್ಜಾಗಿದೆ. ಆಡಳಿತ ಪಕ್ಷದ ವೈಫಲ್ಯ ಎತ್ತಿ ಹಿಡಿದು ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಬಿಜೆಪಿ – ಜೆಡಿಎಸ್‌ (BJP-JDS) ಜಂಟಿ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಿಕೊಂಡಿವೆ.

vidhan soudha session

ಗ್ಯಾರಂಟಿ ಹಣ ಬಿಡುಗಡೆ ವಿಳಂಬ.. ಕೆಪಿಎಸ್‌ಸಿ (KPSC) ಗೊಂದಲ.. ಪರಿಶಿಷ್ಟರ ಹಣ ಗ್ಯಾರಂಟಿ ಬಳಕೆ.. ಗ್ರೇಟರ್ ಬೆಂಗಳೂರು ಬಿಲ್ ಸೇರಿ ಹಲವು ವಿಚಾರ ಮುಂದಿಟ್ಟುಕೊಂಡು ಮುಗಿಬೀಳಲು ತಯಾರಿ ನಡೆಸಿವೆ. ಅಲ್ಲದೇ ರಾಜ್ಯಪಾಲರಿಗೆ ಅಪಮಾನ ಮಾಡುತ್ತಿರುವ ವಿಚಾರ ಮುಂದಿಟ್ಟುಕೊಂಡು ಶಾಸಕರ ಭವನದಿಂದ ಕಾಲ್ನಡಿಗೆ ಮೂಲಕ ವಿಧಾನಸೌಧ ಪ್ರವೇಶಿಸಲು ಬಿಜೆಪಿ‌-ಜೆಡಿಎಸ್‌ ನಿರ್ಧರಿಸಿದ್ದು, ಸದನದ ಒಳಗೆ ಮತ್ತು ಹೊರಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯತಂತ್ರ ರೂಪಿಸಿದೆ.

Vidhana Soudha

ಸೋಮವಾರ (ಇಂದು) ಬೆಳಗ್ಗೆ ರಾಜ್ಯಪಾಲರ ಭಾಷಣದ ನಂತರ ವಿಧಾನಸಭೆ, ವಿಧಾನ ಪರಿಷತ್‌ ಪ್ರತ್ಯೇಕ ಸಮಾವೇಶಗೊಂಡು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸೇರಿದಂತೆ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಿದೆ. ಅಲ್ಲದೇ ಕಲಾಪವನ್ನು ಸುಗಮವಾಗಿ ನಡೆಸುವ ಹಾಗೂ ಉಭಯ ಸದನಗಳ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ಮಧ್ಯಾಹ್ನದ ನಂತರ ಜಂಟಿ ಕಲಾಪ ಸಲಹಾ ಸಮಿತಿ ಸಭೆಯೂ ನಡೆಯಲಿದೆ. ಹಾಗಿದ್ದರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿದಲು ವಿಪಕ್ಷಗಳ ಅಸ್ತ್ರ ಏನಿದೆ? ಇದಕ್ಕೆ ಪ್ರತಿಯಾಗಿ ಕೌಂಟರ್‌ ಕೊಡಲು ಆಡಳಿತದ ಅಸ್ತ್ರಗಳು ಏನಿವೆ ಎಂಬುದನ್ನು ನೋಡೋಣ?

ಅಧಿವೇಶನದಲ್ಲಿ ದೋಸ್ತಿಗಳ ಅಟ್ಯಾಕ್ ಏನು..?

>. ಗ್ಯಾರಂಟಿ ಯೋಜನೆಗಳಿಗೆ ಹಣ ಸರಿಯಾಗಿ ಬಿಡುಗಡೆ ಆಗದೇ ಇರೋ ವಿಚಾರ ಪ್ರಸ್ತಾಪ ಮಾಡುವುದು.
>. ಗ್ಯಾರಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಿದ್ದ SCSP – TSP ಹಣ ಬಳಕೆ ವಿರುದ್ಧ ಹೋರಾಟ ಮಾಡುವುದು.
>. ಕೆಪಿಎಸ್‌ಸಿ ಎಕ್ಸಾಂನಲ್ಲಿ ಆಗಿರೋ ಗೊಂದಲಗಳ ಬಗ್ಗೆ ವಿಷಯ ಪ್ರಸ್ತಾಪ.
>. ಮೈಸೂರಿನ ಉದಯಪುರದಲ್ಲಿ ನಡೆದ ಗಲಭೆ ವಿಚಾರ ಪ್ರಸ್ತಾಪ.
>. ಬಿಜೆಪಿ ಅವಧಿಯಲ್ಲಿ ಪ್ರಾರಂಭ ಮಾಡಿದ್ದ 9 ವಿವಿ ಕ್ಲೋಸ್ ಮಾಡಲು ಮುಂದಾಗಿರೋ ಸರ್ಕಾರದ ನಡೆ ವಿರುದ್ಧ ಹೋರಾಟ.
>. ಗ್ರೇಟರ್ ಬೆಂಗಳೂರು ವಿಧೇಯಕ, ಟನಲ್ ರೋಡ್‌ಗೆ ವಿರೋಧ. ಈ ವಿಷಯ ಅಧಿವೇಶನದಲ್ಲಿ ಪ್ರಸ್ತಾಪ.
>. ಬ್ರ‍್ಯಾಂಡ್ ಬೆಂಗಳೂರು ಅಂದ್ರು ಬೆಂಗಳೂರು ಅಭಿವೃದ್ಧಿ ಆಗದೇ ಇರೋ ವಿಚಾರ ಪ್ರಸ್ತಾಪ.
>. ಶಾಸಕರಿಗೆ ಅನುದಾನ ಬಿಡುಗಡೆ ಮಾಡದೇ ಇರೋ ಬಗ್ಗೆ ವಿಷಯ ಪ್ರಸ್ತಾಪ ಮಾಡಲು ನಿರ್ಧಾರ.

ಸರ್ಕಾರದ ಕೌಂಟರ್ ಅಸ್ತ್ರ?

. ಗ್ಯಾರಂಟಿ ಯೋಜನೆಯಿಂದಾಗಿರೋ ಅನುಕೂಲಗಳ ಬಗ್ಗೆ ಪ್ರಸ್ತಾಪ.
>. ಗ್ಯಾರಂಟಿ ಯೋಜನೆಗೆ ಬಿಡುಗಡೆ ಆಗಿರೋ ಹಣದ ಅಂಕಿ-ಅಂಶಗಳನ್ನ ಇಟ್ಟು ವಿಪಕ್ಷ ಬಾಯಿ ಮುಚ್ಚಿಸೋದು.
>. ಬಿಜೆಪಿಯ ಆಂತರಿಕ ಕಿತ್ತಾಟ ಪ್ರಸ್ತಾಪ ಮಾಡಿ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸುವುದು.
>. ಬಿಜೆಪಿ-ಜೆಡಿಎಸ್ ಅವಧಿಯಲ್ಲಿ SCSP – TSP ಹಣ ಬಳಕೆ ಮಾಡಿಕೊಂಡಿರೋ ಬಗ್ಗೆ ವಿಷಯ ಪ್ರಸ್ತಾಪ ಮಾಡುವುದು.
>. ವಿಪಕ್ಷಗಳ ಕೆಪಿಎಸ್‌ಸಿ ಹೋರಾಟಕ್ಕೆ ಬಿಜೆಪಿ ಅವಧಿಯಲ್ಲಿ ಆಗಿರೋ ಎಕ್ಸಾಂಗಳ ಅಕ್ರಮದ ಬಗ್ಗೆ ಪ್ರಸ್ತಾಪ.
>. ಉದಯಗಿರಿ ಪ್ರಕರಣ ಪ್ರಸ್ತಾಪಕ್ಕೆ ಬಿಜೆಪಿ ಅವಧಿಯಲ್ಲಿ ಆಗಿರೋ ಘಟನೆಗಳನ್ನ ಪ್ರಸ್ತಾಪಿಸಿ ಕೌಂಟರ್.
>. ಗ್ಯಾರಂಟಿ ಹೊರತಾಗಿ ಅಭಿವೃದ್ಧಿ ಆಗಿರೋ ಅಂಕಿ-ಅಂಶಗಳನ್ನ ಬಿಡುಗಡೆ ಮಾಡಿ ವಿಪಕ್ಷಗಳಿಗೆ ಕೌಂಟರ್ ಕೊಡೋದು.

Share This Article