ನವದೆಹಲಿ: ಲಂಡನ್‌ನಲ್ಲಿ (London) ರಾಹುಲ್ ಗಾಂಧಿ (Rahul Gandhi) ನೀಡಿದ ಹೇಳಿಕೆ ಇಂದು ಸಂಸತ್ ಅಧಿವೇಶನವನ್ನು (Parliament Session) ಬಲಿ ತೆಗೆದುಕೊಂಡಿದೆ. ಎರಡನೇ ಅವಧಿಯ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಸದನ ಆರಂಭವಾಗುತ್ತಿದ್ದಂತೆ ಗದ್ದಲಕ್ಕೆ ವೇದಿಕೆಯಾಯಿತು.
ರಾಹುಲ್ ಗಾಂಧಿ ಲಂಡನ್‌ನಲ್ಲಿ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಬಿಜೆಪಿ (BJP) ನಾಯಕರು, ರಾಹುಲ್ ಗಾಂಧಿ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಹಾಗೂ ಪಿಯೂಷ್ ಗೋಯಲ್ (Piyush Goyal) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿ ಅಂಡರ್‌ವರ್ಲ್ಡ್ ಡಾನ್‌ಗಳಿಗೆ ತಲೆಬಾಗಿ, ಕೈ ಮುಗಿದಿರೋದು ನಾಚಿಗೇಡಿನ ಸಂಗತಿ: HDK
ಬಿಜೆಪಿಗೆ ತಿರುಗೇಟು ನೀಡುವ ಪ್ರಯತ್ನ ಮಾಡಿದ ಕಾಂಗ್ರೆಸ್ (Congress) ನಾಯಕರು, ಅದಾನಿ ಕಂಪನಿಗಳ ಕುರಿತು ನೀಡಿದ ಹಿಂಡನ್ ಬರ್ಗ್ ಆಧರಿಸಿ ಜಂಟಿ ಸದನ ಸಮಿತಿ ರಚಿಸಬೇಕು. ಗ್ಯಾಸ್ ಸೇರಿದಂತೆ ಅಗತ್ಯ ಬೆಲೆಗಳ ಏರಿಕೆ ಹಾಗೂ ವಿಪಕ್ಷ ನಾಯಕರ ಮೇಲೆ ತನಿಖಾ ಸಂಸ್ಥೆಗಳ ದಾಳಿಯ ಬಗ್ಗೆ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಚುನಾವಣೆ ಖರ್ಚಿಗಾಗಿ ವೈಎಸ್‌ವಿ ದತ್ತಗೆ 101 ರೂ. ನೀಡಿದ ಅಭಿಮಾನಿ
ಸದನ ಆರಂಭವಾಗುತ್ತಿದ್ದಂತೆ ಗದ್ದಲ ಏರ್ಪಟ್ಟ ಹಿನ್ನೆಲೆ ಮಧ್ಯಾಹ್ನ ಎರಡು ಗಂಟೆಗೆ ಕಲಾಪ ಮುಂದೂಡಲಾಯಿತು. ಭೋಜನ ವಿರಾಮದ ಬಳಿಕವೂ ಗದ್ದಲ ಮುಂದುವರಿದ ಕಾರಣ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಇದನ್ನೂ ಓದಿ: ಮಾರ್ಚ್ 17ರಂದು ಸರಕು ಸಾಗಣೆ ವಾಹನಗಳು ಬಂದ್