ಬೆಂಗಳೂರು: ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ 17ನೇ ಬಜೆಟ್ ಭಾಷಣದಲ್ಲಿ(Budget Speech) 16 ವರ್ಷದೊಳಗಿನ ಮಕ್ಕಳಿಗೆ ಕರ್ನಾಟಕದಲ್ಲಿ(Karnataka) ಸಾಮಾಜಿಕ ಜಾಲತಾಣವನ್ನು (Social Media) ನಿಷೇಧಿಸುವ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಈಗಾಗಲೇ 13 ವರ್ಷದ ಒಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ನೆರೆ ರಾಜ್ಯ ಚಂದ್ರಬಾಬು ನಾಯ್ಡು ನೇತೃತ್ವದ ಆಂಧ್ರ ಪ್ರದೇಶ ಇದೇ ರೀತಿ ಮುಂದಿನ 90 ದಿನಗಳ ಒಳಗಡೆ 13 ವರ್ಷದ ಒಳಗಡೆ ಇರುವ ಮಕ್ಕಳಿಗೆ ನಿಷೇಧ ಹೇರಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಮದ್ಯ ಪ್ರಿಯರಿಗೆ ಪರೋಕ್ಷ ಟ್ಯಾಕ್ಸ್ ಶಾಕ್
ನಿಷೇಧ ಸಾಧ್ಯವೇ?
ರಾಜ್ಯ ಸರ್ಕಾರಕ್ಕೆ ಸಾಮಾಜಿಕ ಜಾಲತಾಣ ನಿಷೇಧ ಮಾಡುವ ಅಧಿಕಾರ ಇಲ್ಲ. ಸಾಮಾಜಿಕ ಜಾಲತಾಣಗಳ ನಿಯಂತ್ರಣ ಕೇಂದ್ರದ ಅಧೀನದಲ್ಲಿ ಬರುತ್ತದೆ. ಕೇಂದ್ರ ಸರ್ಕಾರದ ವಿಶ್ವಾಸವನ್ನು ಪಡೆದು ಈ ನಿರ್ಧಾರ ಮಾಡಬೇಕು. ಸಾಮಾಜಿಕ ಜಾಲತಾಣ ನಿಷೇಧಕ್ಕೆ ಕಾರಣ, ಉದ್ದೇಶಗಳ ಬಗ್ಗೆ ಚರ್ಚೆ ನಡೆಯಬೇಕು. ಇದನ್ನೂ ಓದಿ: 13 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ – ಆಂಧ್ರ ಸರ್ಕಾರದಿಂದ ಮಹತ್ವದ ಘೋಷಣೆ
ಸರ್ಕಾರದ ಮುಂದಿರುವ ಆಯ್ಕೆಗಳೇನು?
ಶಾಲಾ-ಕಾಲೇಜುಗಳಲ್ಲಿ ಮಾತ್ರ ಸಾಮಾಜಿಕ ಜಾಲತಾಣ ನಿರ್ಬಂಧಿಸಬಹುದು. ಜಾಲತಾಣಗಳ ನಿಷೇಧದ ಬಗ್ಗೆ ಕೇಂದ್ರದ ಜೊತೆ ಚರ್ಚಿಸಿ ಅನುಷ್ಠಾನಗೊಳಿಸಬೇಕು. ಮಕ್ಕಳು ವೆಬ್‌ಸೈಟ್‌ಗೆ ಲಾಗಿನ್ ಆಗೋ ವ್ಯವಸ್ಥೆಗೆ ನಿರ್ಬಂಧ ಹಾಕುವುದು.
ಅಪ್ರಾಪ್ತರು ಸಾಮಾಜಿಕ ಜಾಲತಾಣಗಳಿಗೆ ಪ್ರವೇಶ ಆಗದಂತೆ ನಿಯಮ/ ಕಾನೂನು ಜಾರಿ ಮಾಡುವುದು. ಸಾಮಾಜಿಕ ಜಾಲತಾಣಗಳ ಬಗ್ಗೆ ಮಕ್ಕಳಿಗೆ, ಪೋಷಕರಿಗೂ ಜಾಗೃತಿ ಮೂಡಿಸುವುದು. ತಜ್ಞರು ಒಳಗೊಂಡ ಸಮಿತಿ ರಚಿಸಿ ಸಲಹೆ ಪಡೆಯಬಹುದು.

