ನವದೆಹಲಿ: ಮೋದಿ 3.0 ಸರ್ಕಾರದ ಮೊದಲ ಹಣಕಾಸು ಬಜೆಟ್ (Union Budget) ಫೆ.1 ಶನಿವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman) ಮಂಡಿಸಲಿದ್ದಾರೆ.
ಈ ಮೂಲಕ ಸತತ 8 ಬಾರಿ ಬಜೆಟ್ ಮಂಡನೆ ಮಾಡಿದ ಶ್ರೇಯಸ್ಸಿಗೆ ಪಾತ್ರರಾಗಲಿದ್ದಾರೆ. ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿ ಬಜೆಟ್ ಮಂಡನೆ ಮಾಡಿದ್ದರು.
ಬಜೆಟ್ ಮಂಡನೆ ಯಾವಾಗ?
ಸೀತಾರಾಮನ್ ಅವರು ಫೆ.1 ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಮಂಡನೆಯನ್ನು ದೂರದರ್ಶನ, ಸಂಸದ್ ವಾಹಿನಿ ಸೇರಿದಂತೆ ಸುದ್ದಿವಾಹಿನಿಗಳ ಟಿವಿಯಲ್ಲಿ ಲೈವ್ ನೋಡಬಹುದು. ಇದನ್ನೂ ಓದಿ: ಮದುವೆ, ವಿಚ್ಛೇದನ, ಆಸ್ತಿ.. ಎಲ್ಲಾ ಧರ್ಮಿಯರಿಗೆ ಒಂದೇ ಕಾನೂನು: ಇಂದಿನಿಂದ ಉತ್ತರಾಖಂಡದಲ್ಲಿ UCC ಜಾರಿ
ವಾರ್ಷಿಕ ಹಣಕಾಸು ಹೇಳಿಕೆ (ಮುಖ್ಯ ಬಜೆಟ್ ದಾಖಲೆ), ಅನುದಾನಗಳ ಬೇಡಿಕೆ (ಡಿಜಿ), ಹಣಕಾಸು ಮಸೂದೆ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ಕೇಂದ್ರ ಬಜೆಟ್ ದಾಖಲೆಗಳು ‘ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್’ ನಲ್ಲಿ ಲಭ್ಯವಿದೆ. ಇದನ್ನೂ ಓದಿ: ಪ್ರಜೆಗಳನ್ನು ಸ್ವೀಕರಿಸಲ್ಲ ಎಂದ ಕೊಲಂಬಿಯಾಗೆ ಶಾಕ್ – ಟ್ರಂಪ್ ಬೆದರಿಕೆ ಮಣಿದು ಈಗ ವಿಮಾನ ರವಾನೆ
ಮಾರ್ಕೆಟ್ ಓಪನ್ ಇರುತ್ತೆ:
ಶನಿವಾರವಾಗಿದ್ದರೂ ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (BSE) ಮತ್ತು ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (NSE) ಎರಡೂ ಸ್ಟಾಕ್ ಮಾರುಕಟ್ಟೆ ತೆರೆದಿರುತ್ತದೆ. ಬೆಳಗ್ಗೆ 9:15 ರಿಂದ ಮಧ್ಯಾಹ್ನ 3:30 ರವರೆಗೆ ವಹಿವಾಟು ನಡೆಯಲಿದೆ.
ಈ ಹಿಂದೆ ಫೆಬ್ರವರಿ 1, 2020 ಮತ್ತು ಫೆಬ್ರವರಿ 28, 2015 ರಂದು ತೆರೆದಿದ್ದವು, ಆ ಸಮಯದಲ್ಲಿ ಎರಡೂ ಶನಿವಾರಗಳಂದು ಬಜೆಟ್ ಮಂಡನೆಯಾಗಿತ್ತು.