ರೈತರಿಗಾಗಿ ಕಿಸಾನ್ ರೈಲು ಚಾಲನೆ- ರೈಲ್ವೇ ಬಜೆಟ್ ಹೈಲೈಟ್ಸ್

Public TV
2 Min Read
nirmala Raliway

-ಬೆಂಗ್ಳೂರು-ಚೆನ್ನೈ ನಡುವೆ ಹೈಸ್ಪೀಡ್ ಟ್ರೈನ್

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್‍ನಲ್ಲಿ ರೈತರಿಗಾಗಿ ‘ಕಿಸಾನ್ ರೈಲು’ಗಳಿಗೆ ಅನುಮೋದನೆ ನೀಡುವ ಬಗ್ಗೆ ಹೇಳಿದ್ದಾರೆ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಮೂಲಕ ಕಿಸಾನ್ ರೈಲು ಚಾಲನೆಗೊಳ್ಳಲಿದೆ. ಈ ಮೂಲಕ ಕೋಲ್ಡ್ ಸಪ್ಲೈ ಚೈನ್ ವ್ಯವಹಾರಗಳಿಗೆ ಅನಕೂಲವಾಗಲಿದೆ. ಬೆಂಗಳೂರು ಮತ್ತು ಚೆನ್ನೈ ನಗರಗಳ ನಡುವೆ ಶೀಘ್ರವೇ ಹೈಸ್ಪೀಡ್ ರೈಲು ಘೋಷಣೆ ಮಾಡಲಾಗುವುದು. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಶೇ.20 ರಷ್ಟು ಹಣ ಕೇಂದ್ರ ಸರ್ಕಾರ ನೀಡಲಿದೆ. ಇದನ್ನೂ ಓದಿ: ಆದಾಯ ತೆರಿಗೆಯಲ್ಲಿ ಭಾರೀ ಕಡಿತ

ಅತಿ ವೇಗವಾಗಿ ಕೆಡುವ ಆಹಾರ ಪದಾರ್ಥಗಳನ್ನು ಕಿಸಾನ್ ರೈಲಿನ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಆಯ್ದ ರೈಲುಗಳಲ್ಲಿ ಶೀತಲಘಟಕದ ವ್ಯವಸ್ಥೆ ಕಲ್ಪಿಸಿ, ಅಲ್ಲಿ ರೈತರ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ರವಾನಿಸುವುದು. ಇದೇ ರೀತಿ ಗೂಡ್ಸ್ ರೈಲುಗಳಿಗೆ ಸಹ ಕಾರ್ಗೋ ವ್ಯಾನ್ ಜೋಡಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇದನ್ನೂ ಓದಿ: ಅಂಗನವಾಡಿ ಮೇಡಂಗೆ ಫೋನ್ ಕೊಟ್ಟರೆ ಎಲ್ಲ ಆಗುತ್ತಾ: ಬಜೆಟ್ ಬಗ್ಗೆ ರೇವಣ್ಣ ವ್ಯಂಗ್ಯ

ಮುಂಬೈ-ಅಹಮದಾಬಾದ್ ನಡುವೆ ಹೈ ಸ್ಪೀಡ್ ರೈಲಿಗೆ ಚಾಲನೆ ನೀಡುವುದು. ಇದರ ಜೊತೆಯಲ್ಲಿಯೇ 550 ರೈಲ್ವೇ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ ಕಲ್ಪಿಸುವುದು. ಈಗಾಗಲೇ ಬಿಜೆಪಿ ಸರ್ರ್ಕಾರ 27 ಸಾವಿರ ಕಿ.ಮೀ. ಮಾರ್ಗವನ್ನು ವಿದ್ಯುದೀಕರಣಗೊಳಿಸಿದೆ. ಪವರ್ ಎನರ್ಜಿಗಾಗಿ ಬಜೆಟ್ ನಲ್ಲಿ 22 ಸಾವಿರ ಕೋಟಿ ರೂ. ಮೀಸಲಿರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದರು. ಅದೇ ರೀತಿ ದೇಶದ ನ್ಯಾಷನಲ್ ಗ್ರಿಡ್ ಪ್ರಾರಂಭಿಸುವುದು. ಇದನ್ನೂ ಓದಿ: ಕೇಂದ್ರ ಬಜೆಟ್ 2020- ಯಾವುದು ಏರಿಕೆ, ಯಾವುದು ಇಳಿಕೆ?

NIRMALA

ರೈಲ್ವೇ ಬಜೆಟ್ ಹೈಲೈಟ್ಸ್
* ಬೆಂಗಳೂರಿಗೆ ಸಬ್ ಅರ್ಬನ್ ರೈಲು ಘೋಷಣೆ. ಶೇ.20 ರಷ್ಟು ಹಣ ಕೇಂದ್ರ ಸರ್ಕಾರ ನೀಡಲಿದೆ.
* ಚೆನ್ನೈ ಬೆಂಗಳೂರು ಎಕ್ಸ್ ಪ್ರೆಸ್ ವೇ ಶೀಘ್ರವೇ ಶೀಘ್ರವೇ ಘೋಷಣೆ.
* ಮುಂಬೈ-ಅಹಮದಬಾದ್ ನಡುವೆ ಹೈಸ್ಪೀಡ್ ರೈಲು ಆರಂಭ ಮಾಡುವುದು
* ರೈಲ್ವೇ ಇಲಾಖೆಯ ಖಾಲಿ ಜಮೀನಿನಲ್ಲಿ ಸೌರ ಶಕ್ತಿ ಉತ್ಪಾದನೆ ಕೇಂದ್ರ ಸ್ಥಾಪನೆ
* ತೇಜಸ್ ಮಾದರಿಯ ರೈಲುಗಳನ್ನು ಪ್ರವಾಸಿ ಸ್ಥಳಗಳಿಗೆ ಸಂಪರ್ಕಿಸುವುದು.
* ಮೂಲಸೌಕರ್ಯ ನಿಧಿಗೆ 100 ಲಕ್ಷ ಕೋಟಿ ಮೀಸಲು
* 550 ರೈಲ್ವೇ ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ
* 27 ಸಾವಿರ ಕಿಮೀ ಮಾರ್ಗ ವಿದ್ಯುದೀಕರಣ ಆಗಿದೆ
* ಪವರ್ ಎನರ್ಜಿಗಾಗಿ ಬಜೆಟ್ ನಲ್ಲಿ 22 ಸಾವಿರ ಕೋಟಿ ರೂ. ಮೀಸಲು
* ನ್ಯಾಶನಲ್ ಗ್ಯಾಸ್ ಗ್ರಿಡ್ ಆರಂಭ
* ದೆಹಲಿ ಮುಂಬೈ ಎಕ್ಸ್ ಪ್ರೆಸ್ ವೇ 2023ಕ್ಕೆ ಮುಕ್ತಾಯ.

Share This Article
Leave a Comment

Leave a Reply

Your email address will not be published. Required fields are marked *