ನವದೆಹಲಿ: ಅಸಂಘಟಿತ ವಲಯದ ಕಾರ್ಮಿಕ ವರ್ಗಕ್ಕೆ ಹಣಕಾಸು ಸಚಿವ ಪಿಯೂಷ್ ಗೋಯಲ್ ಹೊಸ ಪಿಂಚಣಿ ಯೋಜನೆ ಘೋಷಿಸಿದ್ದು, ಯೋಜನೆಯಡಿ ನಿವೃತ್ತ ಕಾರ್ಮಿಕರಿಗೆ ವಾರ್ಷಿಕ 3 ಸಾವಿರ ರೂ. ಲಭಿಸಲಿದೆ.
ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‍ಧನ್ ಯೋಜನೆ ಅಡಿ 500 ರೂ. ಗಳನ್ನು ಮೀಸಲಿಡಲಾಗಿದ್ದು, 15 ಸಾವಿರಕ್ಕಿಂತ ಕಡಿಮೆ ಆದಾಯ ಇರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆ ಅನ್ವಯ ಆಗಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ 60 ವರ್ಷ ನಂತರ ನಿವೃತ್ತಿ ಹೊಂದಿದ ಅಸಂಘಟಿತ ಕಾರ್ಮಿಕರಿಗೆ ಲಭ್ಯವಾಗಲಿದ್ದು, 10 ಕೋಟಿ ಕಾರ್ಮಿಕರು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.
Highest Ever Growth Of 42% Recorded in Minimum Wages of Labours during last 5 years
Details here: https://t.co/iYddo7YkIW#Budget2019 #BudgetForNewIndia pic.twitter.com/dfH4blKAuk
— PIB India (@PIB_India) February 1, 2019
ಪ್ರಮುಖವಾಗಿ ಅಸಂಘಟಿತ ವಲಯಗಳಾದ ಮನೆಗೆಲಸದವರು, ಮನೆ ನಿರ್ಮಾಣ ಕಾರ್ಮಿಕರು, ರಿಕ್ಷಾ ಓಡಿಸುವವರು, ಚಿಂದಿ ಆಯುವ ಕಾರ್ಮಿಕರಿಗೆ ಲಾಭ ಆಗಲಿದೆ. ಯೋಜನೆಯ ಫಲಾನುಭವಿ ಕಾರ್ಮಿಕರು ತಿಂಗಳಿಗೆ 100 ರೂ. ಪಾವತಿ ಮಾಡಬೇಕಾಗಿದ್ದು, ಸರ್ಕಾರವೂ ಅಷ್ಟೇ ಮೊತ್ತವನ್ನ ಭರಿಸಲಿದೆ. ಅಲ್ಲದೇ ಈ ಯೋಜನೆ ಕಳೆದ 5 ವರ್ಷಗಳಲ್ಲಿ ಜಾರಿಯಾದ ವಿಶ್ವದ 5ನೇ ಅತಿ ದೊಡ್ಡ ಪಿಂಚಣಿ ಯೋಜನೆ ಆಗಲಿದೆ.
ಉಳಿದಂತೆ ಸಾಲಮನ್ನಾ ಬದಲಾಗಿ ರೈತರ ಆರ್ಥಿಕ ಸ್ಥಿತಿ ಉತ್ತಮವಾಗಿಸುವತ್ತ ಕಾರ್ಯ ನಿರ್ವಹಿಸಲಾಗಿದ್ದು, ಪ್ರಕೃತಿ ವಿಕೋಪದ ಕಾರಣದಿಂದ ಬೆಳೆ ನಷ್ಟವಾದರೆ ಶೇ.2 ರಷ್ಟು ಬಡ್ಡಿ ಕಡಿತ ಹಾಗೂ ಸಕಲದಲ್ಲಿ ಸಾಲಪಾವತಿ ಮಾಡಿದರೆ ಹೆಚ್ಚುವರಿ ಶೇ.3 ರಷ್ಟು ಬಡ್ಡಿ ಕಡಿತ ಮಾಡಲಾಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv