ಲಕ್ನೋ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ತಿಳಿಸಿದರು.
ಬುಡಕಟ್ಟು ಸಮುದಾಯವನ್ನು ನಮ್ಮ ಚಳವಳಿಯ ಪ್ರಮುಖ ಭಾಗವಾಗಿದೆ. ಇದರಿಂದಾಗಿ ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಅವರನ್ನು ಬಿಎಸ್‍ಪಿ ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲವು ಆಯ್ದ ಪಕ್ಷಗಳನ್ನು ಮಾತ್ರ ಕರೆದಿದ್ದರು. ಶರದ್ ಪವಾರ್ ಆಗಲಿ ಮಮತಾ ಬ್ಯಾನರ್ಜಿ ಅವರಾಗಲಿ ಬಿಎಸ್‍ಪಿಯನ್ನು ಚರ್ಚೆಗೆ ಆಹ್ವಾನಿಸಿರಲಿಲ್ಲ. ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳು ಒಮ್ಮತವನ್ನು ರೂಪಿಸಲು ಪ್ರಯತ್ನವು ನೆಪ ಮಾತ್ರ ಆಗಿತ್ತು ಎಂದು ಕಿಡಿಕಾರಿದ ಅವರು, ಯಶವಂತ್ ಸಿನ್ಹಾ ಅವರು ನಮ್ಮ ಪಕ್ಷವನ್ನು ಈವರೆಗೂ ಸಂಪರ್ಕಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರತಿಪಕ್ಷಗಳು ತಮ್ಮ ಪಕ್ಷದ ವಿರುದ್ಧ ಜಾತಿವಾದಿ ಮನಸ್ಥಿತಿಯನ್ನು ಮುಂದುವರೆಸುತ್ತಿರುವುದರಿಂದ, ಬಿಎಸ್ಪಿ ಅಧ್ಯಕ್ಷೀಯ ಚುನಾವಣೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿದೆ ಎಂದರು. ಇದನ್ನೂ ಓದಿ: ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಕೆದಕಿ, ಬರೆ ಹಾಕಿಸಿಕೊಂಡ ರಾಮ್ ಗೋಪಾಲ್ ವರ್ಮಾ
ಬಿಎಸ್‍ಪಿ ಮಾತ್ರ ದಲಿತರ ನಾಯಕತ್ವ ಹೊಂದಿರುವ ರಾಷ್ಟ್ರೀಯ ಪಕ್ಷವಾಗಿದೆ. ಬಿಎಸ್‍ಪಿಯು ಬಿಜೆಪಿ, ಕಾಂಗ್ರೆಸ್ ಹಾಗೂ ಕೈಗಾರಿಕೋದ್ಯಮಿಗಳೊಂದಿಗೆ ಶಾಮೀಲಾಗಿರುವ ಪಕ್ಷವಲ್ಲ. ನಾವು ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ವರ್ಗಗಳ ಪರ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ಮೋದಿ, ರಾಜನಾಥ್ ಸಿಂಗ್‍ಗೆ ಕರೆ ಮಾಡಿ ಬೆಂಬಲ ಕೋರಿದ ಯಶವಂತ್ ಸಿನ್ಹಾ