LatestMain PostTechTelecom

ಬಿಎಸ್‌ಎನ್‌ಎಲ್‌ನಿಂದ 465 ದಿನಗಳವರೆಗೆ ವ್ಯಾಲಿಡಿಟಿ ಆಫರ್ ರಿಲೀಸ್

ನವದೆಹಲಿ: ಬಿಎಸ್‌ಎನ್‌ಎಲ್‌ನ 2399 ರೂ.ಯ ವಾರ್ಷಿಕ ಪ್ಲಾನ್ 365 ದಿನಗಳ ವರೆಗೆ ಸಾಮಾನ್ಯವಾಗಿ ಮಾನ್ಯತೆ ಹೊಂದಿರುತ್ತದೆ. ಆದರೆ ಇದೀಗ ಬಿಎಸ್‌ಎನ್‌ಎಲ್ ಡಿಸೆಂಬರ್ 31ರ ಒಳಗಾಗಿ ಈ ಪ್ರಿಪೇಯ್ಡ್ ಯೋಜನೆಯನ್ನು ಹಾಕಿಸಿದರೆ 60 ದಿನಗಳವರೆಗೆ ಉಚಿತ ವ್ಯಾಲಿಡಿಟಿಯನ್ನು ಪಡೆಯಬಹುದು.

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ತನ್ನ ದೀರ್ಘಾವಧಿ ಪ್ರಿಪೇಯ್ಡ್ ಪ್ಲಾನ್‌ನಲ್ಲಿ 425 ದಿನಗಳ ವರೆಗೆ ಮಾನ್ಯತೆ ಹೊಂದಿದ ಆಫರ್ ನೀಡಿದೆ. ಆದರೆ ಈ ಕೊಡುಗೆ ಗ್ರಾಹಕರಿಗೆ ಡಿಸೆಂಬರ್ 31ರ ವರೆಗೆ ಮಾತ್ರವೇ ಲಭ್ಯವಿರುತ್ತದೆ. ಇದನ್ನೂ ಓದಿ: ಆಪಲ್ ಉದ್ಯೋಗಿಗಳು ಆಫಿಸ್‌ಗೆ ಮರಳುವ ಪ್ಲ್ಯಾನ್ ಕ್ಯಾನ್ಸಲ್ – WFH ಮುಂದುವರಿಕೆ

ಭಾರತದಲ್ಲಿ ಬೇರೆ ಯಾವುದೇ ಟೆಲಿಕಾಂ ಕಂಪನಿ ಗ್ರಾಹಕರಿಗೆ 365 ದಿನಗಳನ್ನು ಮೀರಿ ಮಾನ್ಯತೆ ಹೊಂದಿರುವ ಯಾವುದೇ ಪ್ಲಾನ್‌ಗಳನ್ನು ನೀಡುವುದಿಲ್ಲ. ಬಿಎಸ್‌ಎನ್‌ಎಲ್‌ನ ಈ ಯೋಜನೆಯೂ ಹಿಂದೆ 365 ದಿನಗಳ ವರೆಗೆ ಮಾತ್ರವೇ ಮಾನ್ಯತೆ ಹೊಂದಿತ್ತು. ಆದರೆ ಬಿಎಸ್‌ಎನ್‌ಎಲ್ 60 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ನೀಡುತ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೋಹಿತ್, ಜಡೇಜಾ ಪ್ರಾಕ್ಟೀಸ್

2399 ರೂ.ಯ ಪ್ಲಾನ್ ದಿನಕ್ಕೆ 3ಜಿಬಿ ಡೇಟಾವನ್ನು ನೀಡುತ್ತಿದ್ದು, ಅದು ಮುಗಿದ ಬಳಿಕ 80ಕೆಬಿಪಿಎಸ್‌ಗೆ ವೇಗದಲ್ಲಿ ಅನ್‌ಲಿಮಿಟೆಡ್ ಡೇಟಾವನ್ನು ನೀಡುತ್ತದೆ. ಇದರೊಂದಿಗೆ 100 ಉಚಿತ ಎಸ್‌ಎಂಎಸ್ ಸಿಗಲಿದೆ

Leave a Reply

Your email address will not be published.

Back to top button