ಪಾಕಿಸ್ತಾನದಿಂದ ಭಾರತಕ್ಕೆ ಡ್ರಗ್ಸ್ ಸಾಗಾಟ – ಎರಡು ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

Public TV
1 Min Read
DRONE 1

ಚಂಡೀಗಢ: ಡ್ರೋನ್ ಮೂಲಕ ಕಳ್ಳಸಾಗಾಣಿಕೆ (Smuggling) ಮಾಡುತ್ತಿದ್ದ ಪಾಕಿಸ್ತಾನದ (Pakistan) ಎರಡು ಡ್ರೋನ್‌ಗಳನ್ನು (Drone) ಪಂಜಾಬ್‌ನ (Punjab) ಭಾರತ-ಪಾಕಿಸ್ತಾನ ಗಡಿಯಲ್ಲಿ ಗಡಿ ಭದ್ರತಾ ಪಡೆಯು ಹೊಡೆದುರುಳಿಸಿದೆ.

ಮೇ 19ರಂದು ರಾತ್ರಿ 8:55ರ ಸುಮಾರಿಗೆ ಜಿಲ್ಲೆಯ ಅಮೃತಸರದ ಉದಾರ್ ಧರಿವಾಲ್ ಗ್ರಾಮದ ಬಳಿಯಿರುವ ಪ್ರದೇಶವೊಂದರಲ್ಲಿ ಡ್ರೋನ್ ಶಬ್ದ ಕೇಳಿಬರುತ್ತಿತ್ತು. ಅಲ್ಲಿದ್ದ ಗಡಿ ಭದ್ರತಾ ಪಡೆ (BSF) ತಕ್ಷಣವೇ ಗುಂಡುಗಳನ್ನು ಹಾರಿಸಿ ಡ್ರೋನ್ ಅನ್ನು ಹೊಡೆದುರುಳಿಸಿದರು. ಬಳಿಕ ಶೋಧ ನಡೆಸಿದ ಅವರು, ಮುರಿದ ಸ್ಥಿತಿಯಲ್ಲಿ ಪತ್ತೆಯಾದ ಕಪ್ಪು ಬಣ್ಣದ ಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿವಿ ಕ್ಯಾಂಪಸ್‌ನಲ್ಲೇ ಸ್ನೇಹಿತೆಯನ್ನು ಶೂಟ್ ಮಾಡಿ ಕೊಂದ ವಿದ್ಯಾರ್ಥಿ – ಬಳಿಕ ತಾನೂ ಆತ್ಮಹತ್ಯೆ

ವಶಪಡಿಸಿಕೊಂಡ ಡ್ರೋನ್‌ನಲ್ಲಿ ಕಬ್ಬಿಣದ ಉಂಗುರದ ಜೊತೆಗೆ ಎರಡು ಪ್ಯಾಕೆಟ್ ಮಾದಕವಸ್ತುಗಳು (Drugs) ಪತ್ತೆಯಾಗಿವೆ. ಪತ್ತೆಯಾದ ಮಾದಕವಸ್ತುಗಳು ಸುಮಾರು 2.6 ಕೆಜಿ ತೂಕವನ್ನು ಹೊಂದಿತ್ತು. ವಶಪಡಿಸಿಕೊಂಡ ಮತ್ತೊಂದು ಡ್ರೋನ್‌ನಲ್ಲಿಯೂ ಸಹ ಮಾದಕ ವಸ್ತುಗಳಿರುವ ಬ್ಯಾಗ್ ಪತ್ತೆಯಾಗಿದ್ದು, ಭದ್ರತಾ ಪಡೆ ಜಪ್ತಿ ಮಾಡಿಕೊಂಡಿದೆ. ಇದನ್ನೂ ಓದಿ: ಮಗನನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಿದ ಪೋಷಕರು ಅರೆಸ್ಟ್

ಭದ್ರತಾ ಪಡೆ ಹೊಡೆದುರುಳಿಸಿದ ಎರಡನೇ ಡ್ರೋನ್ ಇದಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬಿಎಸ್‌ಎಫ್ ಹೇಳಿದೆ. ಇದನ್ನೂ ಓದಿ: ಮಸ್ಕತ್‌ನಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – 2.28 ಕೋಟಿ ರೂ. ಮೌಲ್ಯದ ಚಿನ್ನದ ಧೂಳು ವಶ

Share This Article