ಕೋಲ್ಕತ್ತಾ: ಪ್ಲಾಗಾ ನದಿಯಲ್ಲಿ ತೇಲುತ್ತಿದ್ದ 38 ಲಕ್ಷ ರೂ. ಮೌಲ್ಯದ 317 ಮೊಬೈಲ್‌ಗಳನ್ನು ಬಂಗಾಳದ ಗಡಿಭಾಗದ ಬಿಎಸ್‌ಎಫ್ (BSF) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಗುಪ್ತಚರ ಇಲಾಖೆಗಳ ಖಚಿತ ಮಾಹಿತಿಯನ್ನು ಆಧರಿಸಿ ಬಿಎಸ್‌ಎಫ್ ಸಿಬ್ಬಂದಿ ಎಲ್ಲಾ ಮೊಬೈಲ್‌ಗಳನ್ನು (Mobile) ವಶಪಡಿಸಿಕೊಂಡರು. ದಕ್ಷಿಣ ಬಂಗಾಳದ ಗಡಿಭಾಗದಲ್ಲಿರುವ ಬಹಾರ್ಡರ್ ಔಟ್ ಪೋಸ್ಟ್ ಲೋಧಿಯಾದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಡೆಡ್ಲಿ ರಾಕೆಟ್ ದಾಳಿ- ಸೇತುವೆ ಉಡೀಸ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡ ರಷ್ಯಾ
Advertisement
Advertisement
ಪಾಗ್ಲಾ ನದಿಯಲ್ಲಿ ಬಾಳೆ ಕಾಂಡಗಳಿಗೆ ಕಟ್ಟಿದ ಕೆಲವು ಪ್ಲಾಸ್ಟಿಕ್ ಪಾತ್ರೆಗಳು ಬಾಂಗ್ಲಾದೇಶದ ಕಡೆಗೆ ತೇಲುತ್ತಿರುವುದನ್ನು ಬಿಎಸ್‌ಎಫ್ ತಂಡಗಳು ಗಮನಿಸಿದ್ದವು. ಈ ಹಿನ್ನೆಲೆಯಲ್ಲಿ ತಕ್ಷಣ ಜಾಗ್ರತರಾದ ಯೋಧರು ಕಂಟೇನರ್‌ಗಳನ್ನು ಹೊರತೆಗೆದರು. ಹಾಗೂ ಅದರಲ್ಲಿದ್ದ ವಿವಿಧ ಕಂಪನಿಯ 317 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ‘ಗೋವನ್ನು’ ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಮನವಿ – ಅರ್ಜಿ ತಿರಸ್ಕರಿಸಿದ ಸುಪ್ರೀಂಕೋರ್ಟ್