– ಅಂಬುಲೆನ್ಸ್ ಚಾಲಕ ಗಂಭೀರ
ವಿಜಯಪುರ: ಲಾರಿ, ಬೈಕ್ ಹಾಗೂ ಅಂಬುಲೆನ್ಸ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿದ್ದ ಬಿಎಸ್‌ಎಫ್ ಯೋಧ (BSF soldier) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿ (Nidagundi) ಪಟ್ಟಣದ ಎನ್‌ಎಚ್ 50ರಲ್ಲಿ ನಡೆದಿದೆ.
ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದ ಮೌನೇಶ ರಾಠೋಡ್(35) ಮೃತ ಯೋಧ. ಲಾರಿ ಬೈಕ್‌ಗೆ ಡಿಕ್ಕಿಯಾದ ಬಳಿಕ ಬೈಕ್ ಸಮೇತ ಎಳೆದುಕೊಂಡು ಎದುರಿಗೆ ಬರುತ್ತಿದ್ದ ಅಂಬುಲೆನ್ಸ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಅಂಬುಲೆನ್ಸ್ ಚಾಲಕ ಕೇರಳ ಮೂಲದ ರಿತೇಶ್ ಎಂಬಾತನ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ
ಕ್ರೇನ್ ಮೂಲಕ ಲಾರಿ ಹಾಗೂ ಅಂಬುಲೆನ್ಸ್ ಅನ್ನು ಬೇರ್ಪಡಿಸಿ ಚಾಲಕ ರಿತೇಶ್‌ನನ್ನ ಪೊಲೀಸರು ಹೊರ ತೆಗೆದಿದ್ದಾರೆ. ಗಾಯಾಳು ರಿತೇಶ್‌ನನ್ನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: 3.5 ಕೆಜಿ ಚಿನ್ನಾಭರಣ ದರೋಡೆ ಕೇಸ್ – ಐವರು ಅರೆಸ್ಟ್, ಓರ್ವ ಆರೋಪಿ ನೇಣಿಗೆ ಶರಣು
ಅಪಘಾತದ ಕಾರಣ ಎನ್‌ಎಚ್ 50ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಪಘಾತಕ್ಕೀಡಾದ ಲಾರಿ, ಅಂಬುಲೆನ್ಸ್ ಹಾಗೂ ಬೈಕ್ ತೆರವು ಮಾಡಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಂಬುಲೆನ್ಸ್‌ನಲ್ಲಿದ್ದ ಸಹಾಯಕನಿಗೆ ಹಾಗೂ ಲಾರಿ ಚಾಲಕ, ಕ್ಲೀನರ್‌ಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ: ಏಪ್ರಿಲ್ 10ರಂದು ತೆರೆಗಾಣಲು ಸಜ್ಜಾದ ‘ವಿದ್ಯಾಪತಿ’!
ಘಟನಾ ಸ್ಥಳಕ್ಕೆ ನಿಡಗುಂದಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.