Connect with us

Bengaluru City

ಬಿಜೆಪಿಯಲ್ಲಿ ನಿಲ್ಲದ ಕಚ್ಚಾಟ- ಸಮಾವೇಶದ ಸಿಡಿ ಸಮೇತ ಇಂದು ಬಿಎಸ್‍ವೈ ದೆಹಲಿಗೆ

Published

on

ಬೆಂಗಳೂರು: ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬಿಕ್ಕಟ್ಟು ಜೋರಾಗಿದೆ. ಈ ಮಧ್ಯೆ, ಸಮಾವೇಶದ ಸಿಡಿ ಸಮೇತ ಇವತ್ತು ಬಿಎಸ್‍ವೈ ದೆಹಲಿಗೆ ತೆರಳಲಿದ್ದಾರೆ. ಈಗಾಗಲೇ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್‍ಗೆ ಮಾಹಿತಿ ಕೊಟ್ಟಿದ್ದು, ಇವತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ದೂರು ನೀಡಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ್ ಬಗ್ಗೆ ಮಾತನಾಡಿರುವ ಯಡಿಯೂರಪ್ಪನವರು ಕ್ಷಮೆ ಯಾಚಿಸಬೇಕು ಅಂತಾ ಈಶ್ವರಪ್ಪ ಆಗ್ರಹಿಸಿದ್ದಾರೆ. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಸಂತೋಷ್ ಬಗ್ಗೆ ಮಾತನಾಡಲು ಯಡಿಯೂರಪ್ಪನವರಿಗೆ ಅಧಿಕಾರ ಕೊಟ್ಟವರು ಯಾರು ಅಂತಾ ಕಿಡಿಕಾರಿದ್ರು. ಹೈಕಮಾಂಡ್‍ನ ಮಾತು ಕೇಳದ, ಸಂತೋಷ್ ವಿರುದ್ಧ ಮಾತನಾಡಿರುವ ಯಡಿಯೂರಪ್ಪ ವಿರುದ್ಧ ಶಿಸ್ತು ಕ್ರಮವಾಗಬೇಕು. ನನ್ನ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳುತ್ತಾರೆ ಅಂತಾ ಯಡಿಯೂರಪ್ಪಗೆ ಮತ್ತೆ ಟಾಂಗ್ ಕೊಟ್ರು.

ಇದನ್ನೂ ಓದಿ: ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ

ನನ್ನ ತಂದೆ ತಾಯಿ ಮೇಲಾಣೆ ನಾನು ಕಾಂಗ್ರೆಸ್ ಸಹವಾಸ ಮಾಡಿಲ್ಲ. ನನ್ನ ಕಡಿದರೂ ನಾನು ಪಕ್ಷ ವಿರೋಧಿ ಚಟುವಟಿಕೆ ಮಾಡಲ್ಲ ಅಂತಾ ಯಡಿಯೂರಪ್ಪಗೆ ತಿರುಗೇಟು ನೀಡಿದ್ರು. ನಾವ್ಯಾರೂ ಇನ್ನು ಹೈಕಮಾಂಡ್ ಬಳಿ ಹೋಗಲ್ಲ, ಮೇ 10 ರೊಳಗೆ ಎಲ್ಲವನ್ನು ಸರಿಪಡಿಸಬೇಕು. ಹೈಕಮಾಂಡ್ ಮತ್ತೆ ಯಡಿಯೂರಪ್ಪ ಇಬ್ಬರಿಗೂ ಇದು ಡೆಡ್ ಲೈನ್ ಅಂದ್ರು.

https://www.youtube.com/watch?v=Z61LNlYeEl8

https://www.youtube.com/watch?v=WKL1FcLuAyM

https://www.youtube.com/watch?v=FnDvcFgKDoQ

Click to comment

Leave a Reply

Your email address will not be published. Required fields are marked *