ಬೆಂಗಳೂರು: ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ (Siddaramaiah) ನಂತರ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yediyurappa) ಅವರು ಮಂಗಳವಾರ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (HD Deve Gowda) ಅವರನ್ನು ಭೇಟಿ ಮಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
Advertisement
ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ಇಂದು ಯಡಿಯೂರಪ್ಪ ಅವರು ಭೇಟಿ ನೀಡಿದ್ದರು. ಅವರೊಂದಿಗೆ ಶಾಸಕ ಎಂ ಕೃಷ್ಣಪ್ಪ, ಎಸ್.ಆರ್ ವಿಶ್ವನಾಥ್ ಹಾಗೂ ಮಾಜಿ ಶಾಸಕ ಡಿ.ಎನ್ ಜೀವರಾಜ್ ಸಾಥ್ ನೀಡಿದ್ದರು.
Advertisement
ದೇವೇಗೌಡರನ್ನು ಭೇಟಿಯಾಗುತ್ತಿದ್ದಂತೆಯೇ ಯಡಿಯೂರಪ್ಪ ಅವರು ಮಾಜಿ ಪ್ರಧಾನಿಯ ಕಾಲು ಮುಟ್ಟಿ ನಮಸ್ಕರಿಸಿದರು. ತಕ್ಷಣ ಹೆಚ್‌ಡಿಡಿ ಅವರ ಕೈಗಳನ್ನು ಹಿಡಿದರು. ಬಳಿಕ ಬಿಎಸ್‌ವೈ ದೇವೇಗೌಡರನ್ನು ಆತ್ಮೀಯವಾಗಿ ಮಾತನಾಡಿಸಿ, ತಮ್ಮ ಆರೋಗ್ಯದ ಬಗ್ಗೆ ವಿಚಾರಿಸಿದರು. ಇದನ್ನೂ ಓದಿ: ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ರು ಸಿದ್ದರಾಮಯ್ಯ
Advertisement
ಇಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ದೇವೇಗೌಡರ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಲಾಯಿತು.
ಅವರು ಶೀಘ್ರದಲ್ಲಿ ಸಂಪೂರ್ಣ ಗುಣಮುಖರಾಗಲಿ, ದೇಶ ಮತ್ತು ರಾಜ್ಯಕ್ಕೆ ಅವರ ಸೇವೆ ಇನ್ನೂ ಹೆಚ್ಚಿನ ಕಾಲ ಮುಂದುವರಿಯಲಿ ಎಂದು ಹಾರೈಸಲಾಯಿತು.@H_D_Devegowda pic.twitter.com/ZsKgpOVRN1
— B.S.Yediyurappa (@BSYBJP) September 20, 2022
Advertisement
ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, ದೇವೇಗೌಡರ ಜ್ಞಾಪಕ ಶಕ್ತಿ ದೊಡ್ಡದು. ಇಡೀ ರಾಜ್ಯದ ಉದ್ದಗಲಕ್ಕೂ ಅವರು ಸುತ್ತಿದ್ದಾರೆ, ಈಗಲೂ ರಾಜ್ಯಾದ್ಯಂತ ಸುತ್ತಬೇಕು ಎನ್ನುತ್ತಾರೆ. ಅವರು ಅನೇಕ ಹಳೆಯ ಸಂಗತಿಗಳನ್ನು ಇನ್ನೂ ಮರೆತಿಲ್ಲ. ನಾವು ಇಂದು ಅವರೊಂದಿಗೆ ಹಳೆಯ ಸಂಗತಿಗಳನ್ನು ಸ್ಮರಿಸಿಕೊಂಡೆವು. ಅವರು ಇನ್ನೂ ಹತ್ತಾರು ವರ್ಷ ಆರೋಗ್ಯವಾಗಿರುತ್ತಾರೆ ಎಂದು ನುಡಿದರು. ಇದನ್ನೂ ಓದಿ: ಉತ್ತರಕನ್ನಡ ಜನರ ದಶಕಗಳ ಬೇಡಿಕೆಗೆ ಕೊನೆಗೂ ಅಸ್ತು- ಸೂಪರ್ ಸ್ಷೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಒಪ್ಪಿಗೆ
ದೇವರ ಆಶೀರ್ವಾದದಿಂದ ಅವರು ಇನ್ನೂ ಹತ್ತಾರು ವರ್ಷ ಓಡಾಡುವಂತಾಗಲಿ. ಕುಮಾರಸ್ವಾಮಿ ಅವರನ್ನು ಕೇಳಿದೆ, ಅವರಿಗೆ ಮಂಡಿ ನೋವಿದೆ ಅಂತ ಹೇಳಿದ್ರು. ದೇವೇಗೌಡರು ನಮಗೆಲ್ಲರಿಗೂ ಮಾರ್ಗದರ್ಶಕರು, ಅವರು ಧೀಮಂತ ನಾಯಕರು ಎಂದರು.