Bengaluru CityDistrictsKarnatakaLatestLeading NewsMain Post

ದೇವೇಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ರು ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ (H D Devegowda) ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿ ಇಂದು ಆರೋಗ್ಯ ವಿಚಾರಿಸಿದರು.

ಬಳಿಕ ಮಾತನಾಡಿದ ಸಿದ್ದರಾಮಯ್ಯ (Siddaramaiah), ನಾನು ಸಿಎಂ ಆಗಿದ್ದಾಗ ದೇವೇಗೌಡರನ್ನ ಭೇಟಿಯಾಗಿದ್ದೆ. ಇದೀಗ ಅವರ ಅನಾರೋಗ್ಯ ಹಿನ್ನೆಲೆ ಭೇಟಿಯಾಗಿದ್ದೇನೆ. ಆರೋಗ್ಯ (Health) ವಿಚಾರಿಸಿಕೊಂಡು ಹೋಗಲು ಬಂದಿದ್ದೆ. ಸ್ವಲ್ಪ ಮಂಡಿ ನೋವು ಇದೆ ಅಂತಾ ಹೇಳಿದ್ದಾರೆ. ವಿಧಾನಸಭೆ (Vidhanasabha) ಯಲ್ಲಿ ಏನ್ ಮಾತನಾಡ್ತಿರಿ ಅಂತಾ ನೋಡುತ್ತೇನೆ ಅಂದಿದ್ದಾರೆ. ಮನುಷ್ಯತ್ವ ಬಹಳ ಮುಖ್ಯಲ್ವ ಅದಕ್ಕೆ ಅವರ ಆರೋಗ್ಯ ವಿಚಾರಿಸಲು ಬಂದಿದ್ದೇನೆ ಎಂದರು. ಇದನ್ನೂ ಓದಿ: ಭಾರತಕ್ಕೆ ಬಂದ ಚೀತಾ ತಂಡದಲ್ಲಿದ್ರು ಪುತ್ತೂರಿನ ಡಾ.ಸನತ್ ಕೃಷ್ಣ ಭಟ್

ದೇವೆಗೌಡರ ಜೊತೆ ರಾಜಕೀಯ ಚರ್ಚೆ ಮಾಡಿಲ್ಲ. ನಮಸ್ಕಾರ ಅಂದೆ. ಅವರೂ ನಮಸ್ಕಾರ ಅಂದ್ರು. ಕಾಲು ನೋವು ಅಂತ ಹೇಳಿದ್ರು. ರಾಜಕೀಯವೇ ಬೇರೆ, ಮನುಷ್ಯತ್ವ ಮುಖ್ಯ. ದೇವೆಗೌಡರು ದೇಶ ಕಂಡ ಹಿರಿಯ ರಾಜಕಾರಣಿ. ಲಾಸ್ಟ್ ಟೈಮ್ ಕಾವೇರಿ ವಿಚಾರಕ್ಕೆ ಭೇಟಿ ಮಾಡಿದ್ದೆ. ದೇವೆಗೌಡರಿಗೆ ಕಾಲು ನೋವು ವಾಕರ್ ಹಿಡಿದು ಓಡಾಡುತ್ತಾರೆ. ಅವರ ಸ್ಮರಣ ಶಕ್ತಿ ಚೆನ್ನಾಗಿ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

2006ರಲ್ಲಿ ಜೆಡಿಎಸ್ (JDS) ತೊರೆದ ಬಳಿಕ 2016 ರಲ್ಲಿ ದೇವೇಗೌಡರ ನಿವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ ನಂತರ ಕಾವೇರಿ ವಿಚಾರವಾಗಿ ಭೇಟಿಯಾಗಿದ್ದರು. ಇದೀಗ ಇಂದು ಸೆಷನ್ ಮುಗಿದ ಬಳಿಕ ಪದ್ಮನಾಭ ನಗರಕ್ಕೆ ತೆರಳಿರುವ ಸಿದ್ದರಾಮಯ್ಯ ಅವರು ದೇವೇಗೌಡರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಸಿದ್ದರಾಮಯ್ಯ ಅವರಿಗೆ ಶಾಸಕ ಜಮೀರ್ ಅಹಮ್ಮದ್ ಹಾಗೂ ಆರ್.ವಿ.ದೇಶಪಾಂಡೆ ಸಾಥ್ ನೀಡಿದರು.

Live Tv

Leave a Reply

Your email address will not be published.

Back to top button