ಸಿದ್ದರಾಮೋತ್ಸವಕ್ಕೆ 10 ಲಕ್ಷಕ್ಕೂ ಹೆಚ್ಚಿನ ಜನಸಾಗರ- ಹೈಕಮಾಂಡ್‍ಗೆ ಬಿಎಸ್‍ವೈ ರಿಪೋರ್ಟ್

Public TV
1 Min Read
BSY AMITSHAH

ಬೆಂಗಳೂರು: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದುಬಂದಿದ್ದು, ಬಿಜೆಪಿ ನಾಯಕರಿಗೆ ಶಾಕ್ ನೀಡಿದೆ. ನಿರೀಕ್ಷೆಗೂ ಮೀರಿ 10 ಲಕ್ಷ ಜನ ಸೇರಿದ್ದಕ್ಕೆ ರಾಜ್ಯ ಬಿಜೆಪಿ ನಾಯಕರು ಆತಂಕ್ಕೀಡಾಗಿದ್ದಾರೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗಿಂತಲೂ ಮೊದಲೇ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್‍ಗೆ ರಿಪೋರ್ಟ್ ಕೊಟ್ಟಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

bs yediyurappa 1

ಸಿದ್ದರಾಮೋತ್ಸವ ಮಾಸ್ ಸಮಾವೇಶ ಚುನಾವಣಾ ಪ್ರಚಾರದ ದಿಕ್ಕು ಬದಲಿಸಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಹೊಂದಾಣಿಕೆಯಾದ್ರೆ ಬಿಜೆಪಿಗೆ ಮುಂದೆ ಕಷ್ಟವಾಗಲಿದೆ. ನಿನ್ನೆಯ 10 ಲಕ್ಷಕ್ಕೂ ಹೆಚ್ಚು ಜನಸಾಗರ ಸೇರಿದೆ. ಕಾಂಗ್ರೆಸ್ ಕೂಡ ಇಷ್ಟು ಜನಸ್ತೋಮವನ್ನು ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಪರಿಣಾಮಕಾರಿ ತಂತ್ರಗಾರಿಕೆ ಅಗತ್ಯವೆಂದು ಬಿಎಸ್‍ವೈ ಹೇಳಿದ್ದಾರೆ. ಇದನ್ನೂ ಓದಿ: ಕೊನೆಗೂ ನನಸಾಯ್ತು ಅಮ್ಮ, ಮಗಳ ಕನಸು – ಒಂದೇ ವಿಮಾನಕ್ಕೆ ಇಬ್ಬರೂ ಪೈಲಟ್

ಪಕ್ಷ ಸಂಘಟನೆಯಲ್ಲಿ ಕೆಲ ಬದಲಾವಣೆ ತನ್ನಿ. ಸರ್ಕಾರ, ಪಕ್ಷ ವೇಗವಾಗಿ ಹೋಗಬೇಕು, ಇಲ್ಲ ಅಂದ್ರೆ 2023 ನಮಗೆ ಕಷ್ಟ ಕಟ್ಟಿಟ್ಟಬುತ್ತಿ. ಸಿದ್ದರಾಮೋತ್ಸವದಲ್ಲಿನ ಜನ ವೋಟ್ ಆಗಿ ಕನ್ವರ್ಟ್ ಆದ್ರೆ ಬಿಜೆಪಿಗೆ ದೊಡ್ಡ ಲಾಸ್ ಆಗಲಿದೆ. ನಿನ್ನೆಯ ಜನರನ್ನ ನಾನು ನಿರೀಕ್ಷೆ ಮಾಡಿರಲಿಲ್ಲ, ಸಿದ್ದರಾಮಯ್ಯ ಕೂಡ ನಿರೀಕ್ಷೆ ಮಾಡಿರಲಿಲ್ಲ. ಹಾಗಾಗಿ ಇದು ನಮಗೆ ಆಲರಾಂ ಆಗಬೇಕು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಬಳಿಕ ಈ ಕಡೆ ಗಮನ ಹರಿಸಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಹೀಗೆ ಸುಮಾರು 15 ನಿಮಿಷಗಳ ಕಾಲ ಚರ್ಚೆ ನಡೆಸಿ ಯಡಿಯೂರಪ್ಪ ಅವರು ಅಮಿತ್ ಶಾಗೆ ಮಾಹಿತಿ ಕೊಟ್ಟಿದ್ದಾರೆ. ಖಾಸಗಿ ಹೊಟೇಲಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಾಗೂ ಶಾಸಕ ರಾಮದಾಸ್ ಮತ್ತಿತರರು ಅಮಿತ್ ಶಾರನ್ನು ಭೇಟಿಯಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *