ಚಿತ್ರದುರ್ಗ: ಹಿರಿಯೂರು ಬಿಜೆಪಿ ಶಾಸಕಿ (BJP MLA) ಪೂರ್ಣಿಮಾ ಶ್ರೀನಿವಾಸ್ (Purnima Srinivas) ಕಾಂಗ್ರೆಸ್ (Congress) ಸೇರುತ್ತಾರೆ ಎಂಬ ವದಂತಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ತೆರೆ ಎಳೆದಿದ್ದಾರೆ.
ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರಿನಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೂರ್ಣಿಮಾ ನಮ್ಮ ಜೊತೆಯಲ್ಲೇ ಇದ್ದಾರಲ್ಲಾ ಎಂದು ಪೂರ್ಣಿಮಾ ಹೆಗಲ ಮೇಲೆ ಕೈ ಇಟ್ಟು ಸ್ಪಷ್ಟನೆ ನೀಡಿದರು.
ಈ ವೇಳೆ ಪೂರ್ಣಿಮಾ ಟಿವಿಯವರಿಗೆ ಬುದ್ಧಿ ಇಲ್ಲ. ಪದೇ ಪದೇ ನನ್ನ ಹೆಸರು ತೋರಿಸುತ್ತಿದ್ದಾರೆ ಎಂದು ಕಾಲೆಳೆದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಬಿಎಸ್‌ವೈ, ಹಾಗಾದರೂ ಪ್ರಚಾರ ಸಿಗುತ್ತಲ್ಲಾ ಎಂದು ನಸುನಕ್ಕರು. ಇದನ್ನೂ ಓದಿ: ಮೋದಿ ಯುವಜನರನ್ನ ಸ್ವಾವಲಂಬಿಗಳಾಗಿ ಮಾಡಿದ್ರೆ, ಕಾಂಗ್ರೆಸ್ 3 ಸಾವಿರ ಕೊಡ್ತೀನಿ ಅಂತಿದೆ – ತೇಜಸ್ವಿ ಸೂರ್ಯ
ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹಿರಿಯೂರಿಗೆ ಆಗಮಿಸಿದ ಬಿಎಸ್ ಯಡಿಯೂರಪ್ಪ ಅವರನ್ನು ಸ್ವಾಗತಿಸಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಯಡಿಯೂರಪ್ಪ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.
ಇದೇ ವೇಳೆ ಬಿಜೆಪಿಯಿಂದ ಮುಂದಿನ ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ, ಅದನ್ನು ಪಕ್ಷ ನಿರ್ಧರಿಸಲಿದೆ ಎಂದರು. ಈ ವೇಳೆ ಶಾಸಕಿ ಪೂರ್ಣಿಮಾ ಹಾಗೂ ಅವರ ಬೆಂಬಲಿಗರು ಇದ್ದರು. ಇದನ್ನೂ ಓದಿ: 2 ತಿಂಗಳಿಂದ ನನ್ನನ್ನು ಉಜ್ಜುತ್ತಾ ಇದ್ದೀರಿ, ಎಷ್ಟು ಉಜ್ಜಬೇಕೋ ಉಜ್ಜಿಕೊಳ್ಳಿ: ಸೋಮಣ್ಣ