ಮೈಸೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಾರ್ಯರ್ತರ ಮೇಲೆ ಗರಂ ಆಗಿದ್ದಾರೆ. ಸೋಮವಾರ ಕೆ.ಆರ್.ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ವೇಳೆ ಹಾರ ಹಾಕಲು ಬಂದ ಕಾರ್ಯಕರ್ತರ ಮೇಲೆ ಯಡಿಯೂರಪ್ಪ ಹರಿಹಾಯ್ದರು.
ಹಾರ ಹಾಕಲು ಬಂದವರನ್ನು ಬೈದು ಕಳುಹಿಸಿದ್ರು. ಬಿಎಸ್‍ವೈ ರುದ್ರಾವತಾರ ಕಂಡು ಕಮಲ ಕಾರ್ಯಕರ್ತರು ತೆಪ್ಪಗಾದ್ರು. ಹಾರ ಹಾಕುವ ಗೋಜಿಗೆ ಹೋಗ್ಲಿಲ್ಲ.
ಬಳಿಕ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ದುರಹಂಕಾರಿ. ಚಾಮುಂಡೇಶ್ವರಿಯಲ್ಲಿ ಸೋಲಿನ ಭಯದಿಂದ ಬದಾಮಿಗೆ ಬಂದಿದ್ದಾರೆ. ಅಲ್ಲಿಯೂ ನಮ್ಮ ಶ್ರೀರಾಮುಲು ಅವರು ಸಿದ್ದರಾಮಯ್ಯರನ್ನು ಸೋಲಿಸಿ ಮನೆಗೆ ಕಳುಹಿಸುತ್ತಾರೆ. ಇಂದಿರಾಗಾಂಧಿ ಇದ್ದಾಗ ಕಾಂಗ್ರೆಸ್ 16 ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಆದ್ರೆ ಇಂದು ಬಿಜೆಪಿ 22 ರಾಜ್ಯದಲ್ಲಿ ಅಧಿಕಾರದಲ್ಲಿದೆ. ಕಾಂಗ್ರೆಸ್ ಉಳಿದಿರುವ ಏಕೈಕ ದೊಡ್ಡ ರಾಜ್ಯ ಕರ್ನಾಟಕ. ಅದೂ ಕೂಡ ಮೇ 15 ಕ್ಕೆ ಇವರ ಕೈ ತಪ್ಪಿ ಹೋಗುತ್ತೆ. ಸಂದೇಶ್‍ಸ್ವಾಮಿ 15 ಸಾವಿರ ಮತಗಳ ಅಂತರದಲ್ಲಿ ಗೆಲ್ತಾರೆ. ನೀವು ಅವರನ್ನ ಗೆಲ್ಲಿಸಿ ಅಭಿವೃದ್ಧಿಯ ಜವಾಬ್ದಾರಿ ನಮಗೆ ಬಿಡಿ ಅಂತ ಹೇಳಿದ್ರು. ಇದನ್ನೂ ಓದಿ: ನನ್ನ ಅಭಿಮಾನಿಗಳು ಅಂತ ಹೇಳಿಕೊಂಡು ಧಕ್ಕೆ ತರಲು ಸಂಚು ರೂಪಿಸಿದ್ದಾರೆ: ವಿಜಯೇಂದ್ರ
ನರಸಿಂಹರಾಜ ಕ್ಷೇತ್ರದಲ್ಲಿ ಪ್ರಚಾರದ ವೇಳೆ ಬಿಜೆಪಿ ಜೊತೆಗೆ ಮೈತ್ರಿಗೆ ಮುಂದಾದ್ರೆ, ಕುಮಾರಸ್ವಾಮಿಯನ್ನ ಮನೆಯಿಂದ ಹೊರಹಾಕ್ತಿನಿ ಎಂಬ ದೇವೆಗೌಡ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಮಗೆ ಸಂಪೂರ್ಣ ಬಹುಮತ ಸಿಗುವುದು ಶತ ಸಿದ್ಧ. ನಾನೂ ಮೇ.18 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತೇನೆ. ಇದರಲ್ಲಿ ಯಾವುದೇ ಗೊಂದಲ, ಅನುಮಾನ ಬೇಡ ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಅಂತ ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಪ್ರಧಾನಿ ಮಾಡೋದಕ್ಕೂ ಮುಂಚೆ ನೀವೇ ನೆಗೆದು ಬಿದ್ದು ಹೋಗುತ್ತೀರಿ. ಸಿದ್ದರಾಮಯ್ಯ ಅವರೇ ನೀವೇ ಇರೋದಿಲ್ಲ ಅಂತ ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಬಾಯಿಗೆ ಬಂದಂಗೆ ಮಾತಾಡಿ ಕೆರಳಿಸ್ಬೇಡ, ನಾನು ಗಂಡು ಮಗನೇ- ಕಾರ್ಯಕರ್ತನಿಗೆ ಅಪ್ಪಚ್ಚುರಂಜನ್ ಅವಾಜ್
ನಾವು ಇಡೀ ದೇಶದಲ್ಲಿ ಅಧಿಕಾರದಲ್ಲಿದ್ದೇವೆ. ಕೇಂದ್ರದಲ್ಲಿ ಮೋದಿ ಸರ್ಕಾರ, ರಾಜ್ಯದಲ್ಲಿ ನಮ್ಮ ಸರ್ಕಾರ. ಬಿಜೆಪಿಗೆ ಬಹುಮತ ಬರೋದು ನಿಶ್ಚಿತ. ನರಸಿಂಹರಾಜ ಕ್ಷೇತ್ರದಲ್ಲಿ ಅಧಿಕಾರದಿಂದ ಮದದಿಂದ ಮೆರೆಯುತ್ತಿರುವ ತನ್ವೀರ್ ಸೇಠ್ ನನ್ನು ಹೊರಗಟ್ಟಿ ಅಂತ ಸಚಿವ ತನ್ವೀರ್ ಸೇಠ್ ವಿರುದ್ಧ ಏಕವಚನದಲ್ಲಿ ಬಿಎಸ್ ವೈ ವಾಗ್ದಾಳಿ ನಡೆಸಿದ್ದಾರೆ.