ಮಡಿಕೇರಿ: ಶಾಸಕ ಅಪ್ಪಚ್ಚು ರಂಜನ್ ಅವರನ್ನು ಬಿಜೆಪಿ ಕಾರ್ಯಕರ್ತರೇ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.
ಕಡಗದಾಳ್ ಗ್ರಾಮಕ್ಕೆ ಅಪ್ಪಚ್ಚುರಂಜನ್ ಚುನಾವಣಾ ಪ್ರಚಾರಕ್ಕೆ ಹೋಗಿದ್ರು. ಈ ವೇಳೆ ಆರ್‍ಎಸ್‍ಎಸ್ ಬಗ್ಗೆ ಅಪ್ಪಚ್ಚುರಂಜನ್ ಉಡಾಫೆ ವರ್ತನೆ ತೋರುತ್ತಿರುವುದಕ್ಕೆ ಬಿಜೆಪಿ ಕಾರ್ಯಕರ್ತರೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಸೀದಿಯ ಕೆಲ್ಸ ಮಾಡಿದ್ರಿ, ದೇವಸ್ಥಾನದ ಅಭಿವೃದ್ಧಿ ಯಾಕ್ ಮಾಡಿಲ್ಲವೆಂದ ಯುವಕನಿಗೆ ಆನಂದ್ ಸಿಂಗ್ ಅವಾಜ್
Advertisement
Advertisement
ನೀವು ಮಾಡ್ತಿರೋದ ಸರೀನಾ ಅಂತಾ ಪ್ರಶ್ನಿಸಿದ್ರು. ಇದ್ರಿಂದ ಕೋಪಗೊಂಡ ಶಾಸಕ ಅಪ್ಪಚ್ಚು ರಂಜನ್, ಕುಳಿತ ಸ್ಥಳದಿಂದ ಎದ್ದು ಬಂದು ಕಾರ್ಯಕರ್ತನಿಗೆ ಅವಾಜ್ ಹಾಕಿದ್ದಾರೆ. ಬಾಯಿಗೆ ಬಂದಂಗೆ ಮಾತಾಡಬೇಡ, ನನ್ನನ್ನ ಕೆರಳಿಸಬೇಡ. ನಾನು ಗಂಡು ಮಗನೇ ಅಂತಾ ಕೈ ತಟ್ಟಿ ಅಪ್ಪಚ್ಚುರಂಜನ್ ಅಬ್ಬರಿಸಿದ್ದಾರೆ. ಇದನ್ನೂ ಓದಿ: ಜಗ್ಗೇಶ್ ಗೆದ್ದರೆ ಹಿಂದು ಗೆದ್ದಂತೆ ಟ್ವೀಟ್ – ವಿಡಿಯೋ ಮೂಲಕ ಯುವತಿಯಿಂದ ಜಗ್ಗೇಶ್‍ಗೆ ತರಾಟೆ
Advertisement
ಶಾಸಕರ ಈ ನಡೆಗೆ ಬಿಜೆಪಿ ವಲಯದಲ್ಲಿಯೇ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.