ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬ ಸಮೇತ ದುಬೈ ಪ್ರವಾಸ ಹೊರಟಿದ್ದಾರೆ.
ದುಬೈ ಕನ್ನಡ ಸಂಘದ ಆಹ್ವಾನದ ಹಿನ್ನೆಲೆಯಲ್ಲಿ ದುಬೈನಲ್ಲಿರುವ ಕನ್ನಡ ಶಾಲೆಯೊಂದನ್ನು ಯಡಿಯೂರಪ್ಪನವರು ಉದ್ಘಾಟಿಸಲಿದ್ದು, 5 ದಿನಗಳ ಕಾಲ ಕುಟುಂಬದೊಂದಿಗೆ ದುಬೈನಲ್ಲಿ ಕಾಲ ಕಳೆಯಲಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಪ್ರವಾಸ ಬೆಳೆಸಲಿದ್ದಾರೆ. ಇದನ್ನೂ ಓದಿ: ಫುಡ್ ಡೆಲಿವರಿ ಬಾಯ್ ಮೇಲೆ ಮಹಿಳಾ ಸಿಬ್ಬಂದಿ ದರ್ಪ
ದುಬೈ ಪ್ರವಾಸದ ಬಗ್ಗೆ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಯಡಿಯೂರಪ್ಪ, ದುಬೈಗೆ ಫ್ಯಾಮಿಲಿ ಜೊತೆ ಹೋಗುತ್ತಿದ್ದೇನೆ. ಒಂದಷ್ಟು ಕಾರ್ಯಕ್ರಮಗಳಿವೆ. 3-4 ದಿನ ಇದ್ದು ಬರುತ್ತೇನೆ. ಇನ್ನೂ 15 ದಿನ ಆದರೂ ಪರವಾಗಿಲ್ಲ. ನಂತರ ಪ್ರತಿಯೊಂದು ಜಿಲ್ಲೆಗೂ ಸಂಘಟನೆ ಬಲಪಡಿಸಲು ಒಂದೊಂದು ದಿನ ಪ್ರವಾಸ ಕೈಗೊಳ್ಳುತ್ತೇನೆ. 140 ಸೀಟು ಗೆದ್ದು ಮುಂದೆ ಅಧಿಕಾರಕ್ಕೆ ಬರಲು ಏನೆಲ್ಲಾ ಪ್ರಯತ್ನ ಬೇಕೋ ಅದನ್ನು ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಡೆಗೋಡೆ ಇಲ್ಲದ ಕೆರೆಗೆ ಉರುಳಿದ ಕಾರು – ವ್ಯಕ್ತಿ ಸಾವು