ಬೆಂಗಳೂರು: ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ವಿಚಾರದಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದ್ದಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಡವಟ್ಟು ಮಾಡಿಕೊಂಡಿದ್ದಾರೆ.
ತಾಜ್ ವೆಸ್ಟ್ ಹೋಟೆಲ್ ನಲ್ಲಿ ಬಿಎಸ್ ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಕಾಂಗ್ರೆಸ್ ವಿರುದ್ಧ ಬಿಜೆಪಿ ಸರಣಿ ಪ್ರತಿಭಟನೆಗೆ ಸಜ್ಜಾಗಿದೆ. ಐಟಿ ದಾಳಿಗೆ ಒಳಗಾದ ಡಿ ಕೆ ಶಿವಕುಮಾರ್, ರಮೇಶ್ ಜಾರಕಿಹೋಳಿ ಹಾಗು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಶುಕ್ರವಾರದಿಂದ ಒಂದು ವಾರ ನಿರಂತರ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.
Advertisement
ಈ ಸಂದರ್ಭದಲ್ಲಿ ರಾಜ್ಯ ಎಂದು ಉಚ್ಚರಿಸುವ ಬದಲು ದೇಶದಲ್ಲಿ ಕಾನೂನು ಹದೆಗೆಟ್ಟಿದೆ ಎಂದು ಹೇಳಿದರು. ಕೂಡಲೇ ಎಚ್ಚೆತ್ತುಕೊಂಡ ಬಿಎಸ್‍ವೈ ರಾಜ್ಯದಲ್ಲಿ ಕಾನೂನು ಹದೆಗೆಟ್ಟಿದೆ ಎಂದು ಹೇಳಿ ವಾಗ್ದಾಳಿ ಮುಂದುವರಿಸಿದರು.
Advertisement
ಮಧ್ಯಾಹ್ನದ ಬಳಿಕ ಅಮಿತ್ ಶಾ ಸುದ್ದಿಗೋಷ್ಠಿ ನಡೆಸಿ ಕೇಂದ್ರದ ಹಣವನ್ನು ಬಳಕೆ ಮಾಡುವ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಸಿದ್ದರಾಮಯ್ಯ ಅವರನ್ನು ತರಾಟೆ ತೆಗೆದುಕೊಳ್ಳುವ ಬರದಲ್ಲಿ ಯಡಿಯೂರಪ್ಪ ಹೆಸರು ಪ್ರಸ್ತಾಪಿಸಿದ ಅಮಿತ್ ಶಾ, ಯಡಿಯೂರಪ್ಪ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
Advertisement
ಕೂಡಲೇ ಬಿಜೆಪಿ ನಾಯಕರು ಅಮಿತ್ ಶಾ ಅವರನ್ನು ಎಚ್ಚರಿಸಿದರು. ನಂತರ ಕ್ಷಮೆ ಕೋರಿದ ಅಮಿತ್ ಶಾ, ಮೂರು ದಿನದಿಂದ ಯಡಿಯೂರಪ್ಪ ಜೊತೆಗೆ ಇದ್ದೆ. ಹೀಗಾಗಿ ಯಡಿಯೂರಪ್ಪ ಹೆಸರು ಬಂದಿದೆ ಕ್ಷಮಿಸಿ ಎಂದರು.
Advertisement
ಇದನ್ನೂ ಓದಿ: ಅಮಿತ್ ಶಾ ಮುಂದೆ ಆರ್‍ಎಸ್‍ಎಸ್ ಮುಖಂಡರ ದೂರಿನ ಸುರಿಮಳೆ
LIVE: Press Conference by Shri @AmitShah in Bengaluru, Karnataka. https://t.co/YA6sguuzhY
— BJP (@BJP4India) August 14, 2017
Will @CMofKarnataka answer to the people of backward castes why Congress stalled the historic OBC bill in Rajya Sabha? : Shri @AmitShah pic.twitter.com/C7HjI07V3S
— BJP (@BJP4India) August 14, 2017
In pictures: Meeting of Vibhaag and Prakalp of @BJP4Karnataka chaired BJP National President Shri @AmitShah in Bengaluru. pic.twitter.com/HE7xHxwkr7
— Office of Amit Shah (@AmitShahOffice) August 14, 2017