ಅಲ್ಬನಿ: Better.com ಸಿಇಒ ಜೂಮ್ ಮೀಟಿಂಗ್ ನಲ್ಲಿ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಆಘಾತಕಾರಿ ಘಟನೆ ಈಗ ಎಲ್ಲ ಕಡೆ ಸುದ್ದಿಯಾಗಿದೆ.
ನ್ಯೂಯಾರ್ಕ್ ಮೂಲದ Better.com ನ ಸಿಇಒ ವಿಶಾಲ್ ಗಾರ್ಗ್ ಅವರು ತಮ್ಮ ಕಂಪನಿಯ ಸುಮಾರು 9% ಉದ್ಯೋಗಿಗಳನ್ನು ಜೂಮ್ ಮೀಟಿಂಗ್ ಕರೆದು ವಜಾಗೊಳಿಸಿದ್ದಾರೆ. ವರದಿಗಳ ಪ್ರಕಾರ, ಯುಎಸ್ ಮತ್ತು ಭಾರತದಲ್ಲಿನ 900ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಿಇಒ ಮೂರು ನಿಮಿಷಗಳ ಜೂಮ್ ಮೀಟಿಂಗ್ ಸಮಯದಲ್ಲಿ ಹಠಾತ್ತನೆ ವಜಾ ಮಾಡಿದ್ದಾರೆ. ಈ ಕುರಿತು ಯಾವ ಉದ್ಯೋಗಿಗಳಿಗೂ ಮಾಹಿತಿ ಎಲ್ಲದ ಕಾರಣ ಎಲ್ಲರೂ ಶಾಕ್ ಆಗಿದ್ದಾರೆ.
Advertisement
ಹಠಾತ್ತನೆ ವಜಾ ಮಾಡಲು ಕಾರಣವೇನು? ಎಂದು ಕೇಳಿದಾಗ, ಮಾರುಕಟ್ಟೆಯ ದಕ್ಷತೆ, ಕಾರ್ಯಕ್ಷಮತೆ ಮತ್ತು ಉತ್ಪಾದಕತೆಯಲ್ಲಿ ಬದಲಾವಣೆಯಿಂದ ಅವರನ್ನು ವಜಾಗೊಳಿಸಲಾಗಿದೆ ಎಂದು ಭಾರತೀಯ-ಅಮೆರಿಕನ್ ಸಿಇಒ ಹೇಳಿದರು. ತಾವು ಎರಡನೇ ಬಾರಿ ಈ ರೀತಿ ಮಾಡುತ್ತಿರುವುದಾಗಿ ಅವರೇ ಹೇಳಿದರು. ಇದನ್ನೂ ಓದಿ: ಅಫ್ಘಾನ್ ಹುಡುಗಿಯರ ಪರ ನಿಂತ ಮಲಾಲಾ ಯೂಸುಫ್ ಝಾಯಿ
Advertisement
Vishal Garg: “I wish I didn’t have to lay off 900 of you over a zoom call but I’m gonna lay y’all off right before the holidays lmfaooo”pic.twitter.com/6bxPGTemEG
— litquidity (@litcapital) December 5, 2021
Advertisement
ವಿಶಾಲ್ ಗಾರ್ಗ್ ಅವರು ಜೂಮ್ ಮೀಟಿಂಗ್ ನಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ನಾನು ಇಂದು ನಿಮಗೆ ಒಳ್ಳೆಯ ಸುದ್ದಿಯನ್ನು ಹೇಳಲು ಬಂದಿಲ್ಲ. ಮಾರುಕಟ್ಟೆ ಬದಲಾಗಿದೆ, ನಾವು ಬದುಕಲು ಮುಂದೆ ಸಾಗಬೇಕು. ಆಶಾದಾಯಕವಾಗಿ, ಧೈರ್ಯದಿಂದ ನಮ್ಮನ್ನು ನಾವು ಅಭಿವೃದ್ಧಿಪಡಿಸಲು ಮುಂದಾಗಬೇಕು. ಇದು ನೀವು ಕೇಳಲು ಬಯಸುವ ಸುದ್ದಿಯಲ್ಲ. ಆದರೆ ಕೊನೆಯದಾಗಿ ಇದು ನನ್ನ ನಿರ್ಧಾರವಾಗಿತ್ತು. ನೀವು ಅದನ್ನು ನನ್ನಿಂದಲ್ಲೇ ಕೇಳಬೇಕೆಂದು ನಾನು ಬಯಸುತ್ತೇನೆ. ಇದು ನಿಜವಾಗಿಯೂ ಸವಾಲಿನ ನಿರ್ಧಾರವಾಗಿದೆ. ನನ್ನ ವೃತ್ತಿಜೀವನದಲ್ಲಿ ಇದು ಎರಡನೇ ಬಾರಿಗೆ ಈ ರೀತಿಯ ನಿರ್ಧಾರವನ್ನು ಮಾಡುತ್ತಿದ್ದೇನೆ ಎಂದರು.
Advertisement
ನಾನು ಇದನ್ನು ಮಾಡಲು ಬಯಸುವುದಿಲ್ಲ. ಹಿಂದೆ ಈ ರೀತಿ ನಾನು ಮಾಡಿದ್ದಕ್ಕೆ ನಾನು ಅತ್ತಿದ್ದೆ. ಈ ಬಾರಿ ನನಗೆ ಸ್ವಲ್ಪ ಧೈರ್ಯವಿದೆ ಎಂದು ನಾನು ಭಾವಿಸುತ್ತೇನೆ. ನಾವು ಕಂಪನಿಯ ಸುಮಾರು 15% ಉದ್ಯೋಗಿಗಳನ್ನು ವಜಾಗೊಳಿಸಿದ್ದೆವು. ಇಂದು ದುರದೃಷ್ಟಕರವಾಗಿ ನೀವು ಈ ಗುಂಪಿನ ಭಾಗವಾಗಿದ್ದೀರಿ. ಇಲ್ಲಿಗೆ ನಿಮ್ಮ ಉದ್ಯೋಗವನ್ನು ತಕ್ಷಣವೇ ಕೊನೆಗೊಳಿಸಲಾಗಿದೆ ಎಂದು ಶಾಕಿಂಗ್ ಹೇಳಿಕೆಯನ್ನು ನೀಡಿದರು.
ಈ ವೀಡಿಯೋ ಕಾಲ್ ಅನ್ನು ಉದ್ಯೋಗಿಯೊಬ್ಬರು ರೆಕಾರ್ಡ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋವನ್ನು ನೋಡಿದ ನೆಟ್ಟಿಗರು ಫುಲ್ ಶಾಕ್ ಆಗಿ, ಕಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್
ರಜೆಯ ಮೊದಲೇ ಉದ್ಯೋಗಿಗಳನ್ನು ವಜಾ ಮಾಡಿದ್ದಕ್ಕಾಗಿ ಸಿಇಒ ಅನ್ನು ಅನೇಕರು ಟೀಕಿಸಿದ್ದಾರೆ. ಇನ್ನೂ ಕೆಲವರು ಕಾರ್ಪೊರೇಟ್ ಸಂಸ್ಕøತಿಯನ್ನು ದೂಷಿಸಿದ್ದು, ವಜಾ ಮಾಡಿದ ಉದ್ಯೋಗಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.