ಲೈಂಗಿಕವಾಗಿ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದಾರೆ – ನಾದಿನಿಗಾಗಿ ಬಾವನ ನೌಟಂಕಿ ಆಟ!

Public TV
2 Min Read
tmk fake marriage

ತುಮಕೂರು: ಅಪ್ರಾಪ್ತೆ ನಾದಿನಿಯನ್ನು ಮದುವೆ ಆಗಲು ಬಾವನೊಬ್ಬ ನೌಟಂಕಿ ಆಟ ಆಡಿರುವ ಘಟನೆ ತುಮಕೂರಿನ ಗುಬ್ಬಿ ತಾಲೂಕಿನ ಹಾಗಲವಾಡಿಯಲ್ಲಿ ನಡೆದಿದೆ.

ರಾಜಶೇಖರ್ ನಾದಿನಿಗಾಗಿ ನಾಟಕ ಮಾಡಿದ ಬಾವ. ರಾಜಶೇಖರ್ ತನ್ನ ಅಪ್ರಾಪ್ತ ನಾದಿನಿಯನ್ನು ಮದುವೆಯಾಗಲು ಸುಳ್ಳು ಆರೋಪವನ್ನು ಮಾಡಿದ್ದನು. ನಾದಿನಿಯ ಪೋಷಕರು ಆಕೆಯನ್ನು 10 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಲೈಂಗಿಕವಾಗಿ ಬಳಸಿಕೊಳ್ಳಲು ಅನುಮತಿ ಕೊಟ್ಟು ಬಾಂಡ್ ಪೇಪರಲ್ಲಿ ಸಹಿ ಹಾಕಿದ್ದಾರೆ ಎಂದು ರಾಜಶೇಖರ್ ಕೆಲ ದಾಖಲೆ ಸಹಿತ ಆರೋಪ ಮಾಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಾಲಕಿ ಹಾಗೂ ಆಕೆಯ ಪೋಷಕರು, ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಬಾಲಕಿಯನ್ನು ತಮ್ಮ ಅಳಿಯನೇ ಇನ್ನೊಂದು ಮದುವೆಯಾಗುವಂತೆ ಪೀಡಿಸುತ್ತಿದ್ದ. ಅಲ್ಲದೆ ಆಸ್ತಿ ಮೇಲೆ ಕಣ್ಣಿಟ್ಟಿದ್ದ. ಹಾಗಾಗಿ ಸುಳ್ಳು ದಾಖಲೆ ಸೃಷ್ಟಿಸಿ ಆರೋಪ ಮಾಡಿದ್ದಾನೆ ಎಂದು ಹೇಳುತ್ತಿದ್ದಾರೆ.

tmk fake marriage 1

ತನ್ನ ಅಪ್ರಾಪ್ತೆ ನಾದಿನಿಯನ್ನು ಮಾವ ಹಾಗೂ ಅತ್ತೆ ಸೇರಿಕೊಂಡು ವಯಸ್ಸಾದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದಾರೆ. ಅಲ್ಲದೆ ಬೇರೆ ಯಾರು ಕೂಡ ಲೈಂಗಿಕವಾಗಿ ಬಳಸಿಕೊಳ್ಳಬಹುದು ಎಂದು ಅಗ್ರಿಮೆಂಟ್ ಗೆ ಸಹಿ ಹಾಕಿದ್ದಾರೆ. ಸಂಕಷ್ಟದಿಂದ ಬಾಲಕಿಯನ್ನು ಪಾರು ಮಾಡಬೇಕು ಎಂದು ರಾಜಶೇಖರ್, ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡುತ್ತಾರೆ. ಈ ದೂರಿನ ಜಾಡು ಹಿಡಿದು ಹೋದಾಗ ಸೀನ್ ಫುಲ್ ಉಲ್ಟಾ ಆಗಿದೆ.

ತನಗೆ ಯಾರೂ ಮಾರಾಟ ಮಾಡಿಲ್ಲ. ನಾನು ಯಾರ ಜೊತೆನೂ ಹೋಗಿಲ್ಲ. ಬದಲಾಗಿ ನನ್ನ ಅಕ್ಕನ ಗಂಡ ರಾಜೇಶ್ ನನ್ನನ್ನು ಮದುವೆಯಾಗುವಂತೆ ಪೀಡಿಸ್ತಾ ಇದ್ದರು. ನಮ್ಮ ಅಪ್ಪ- ಅಮ್ಮಗೆ ಗಂಡು ಮಕ್ಕಳು ಇಲ್ಲದೆ ಇದ್ದುದರಿಂದ ಆಸ್ತಿ ಎಲ್ಲವೂ ತನ್ನೊಬ್ಬನಿಗೆ ಸಿಗುತ್ತದೆ ಎಂಬ ದುರಾಸೆಯಿಂದ ಸುಳ್ಳು ದಾಖಲೆ ಸೃಷ್ಟಿಸಿ ಸುಳ್ಳು ಆರೋಪ ಮಾಡಿದ್ದಾನೆ. ಅಲ್ಲದೆ ನಾನು 8ನೇ ತರಗತಿಯಿಂದ 10ನೇ ತರಗತಿವರೆಗೂ ಬಾವ ರಾಜೇಶೇಖರನ ಮನೆಯಲ್ಲೇ ಇದ್ದುಕೊಂಡು ಓದಿದ್ದು ಆ ಸಂದರ್ಭದಲ್ಲಿ ಲೈಂಗಿಕ ಕಿರುಕುಳ ಕೊಟ್ಟಿದ್ದನು. ಮದುವೆಯಾಗುವಂತೆ ಪೀಡಿಸುತ್ತಿದ್ದನು. ಅದಕ್ಕಾಗಿ ಅವರ ಮನೆ ಬಿಟ್ಟು ಬಂದಿದ್ದೆ ಎಂದು ಬಾಲಕಿ ಪ್ರತ್ಯಾರೋಪ ಮಾಡಿದ್ದಾಳೆ.

ಈ ಸುಳ್ಳು ಆರೋಪದ ಹಿನ್ನೆಲೆಯಲ್ಲಿ ರಾಜಶೇಖರನ ವಿರುದ್ಧ ಚೇಳೂರು ಪೊಲೀಸರಿಗೆ ದೂರು ನೀಡಿದ್ದಾಳೆ. ಯಾವುದು ಸತ್ಯ. ಯಾವುದು ಸುಳ್ಳು ಎನ್ನುವುದನ್ನು ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *