ತಮ್ಮನನ್ನು ಕೊಲೆಗೈದ ಆರೋಪಿ ಮನೆ ಮುಂದೆ ಶವವಿಟ್ಟು ಪ್ರತಿಭಟನೆ – ಗಲ್ಲು ಶಿಕ್ಷೆ ನೀಡಿ ಎಂದ ಅಣ್ಣ

Public TV
1 Min Read
brother bidar

ಬೀದರ್: ಕೊಲೆ ಮಾಡಿದ ಆರೋಪಿಯ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುವ ವೇಳೆ ಸಹೋದರನ ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆ ಕೊಡಬೇಕು ಎಂದು ಹಿರಿಯ ಸಹೋದರ ಆಕ್ರೋಶಗೊಂಡ ಘಟನೆ ಬೀದರ್‌ನಲ್ಲಿ ನಡೆದಿದೆ.

brother bidar 3

ಕೊಲೆಯಾದ ಅಂತೇಷ್ ಅಣ್ಣ ಸಂತೋಷ್ ನ್ಯಾಯಕ್ಕಾಗಿ ಕೈಮುಗಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ನಿಜವಾಗಲೂ ಆತ್ಮಹತ್ಯೆ ನಡೆದಿದ್ಯಾ?: ಅನುಮಾನ ಹೊರಹಾಕಿದ ಸಿ.ಟಿ.ರವಿ

brother bidar 2

ನಡೆದಿದ್ದೇನು?
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಸಂತಪುರ್‌ನ ರಾಜಾ ಡಾಬಾ ಬಳಿ ಅಂತೇಷ್ ಇರುವುದನ್ನು ಆರೋಪಿಗಳು ಗಮನಿಸಿದರು. ಹಳೆಯ ವೈಷಮ್ಯ ಹಿನ್ನೆಲೆ ಕಟ್ಟಿಗೆಯಿಂದ ಹೊಡೆದು ಅಂತೇಷ್‍ನನ್ನು ಕೊಲೆ ಮಾಡಲಾಗಿದೆ. ಸುದ್ದಿ ತಿಳಿದ ತಕ್ಷಣ ಅಂತೇಷ್ ಕುಟುಂಬ ಮತ್ತು ಸ್ಥಳೀಯರು ಕೊಲೆ ನಡೆದ ಜಾಗಕ್ಕೆ ಬಂದಿದ್ದಾರೆ. ಪರಿಣಾಮ ಗ್ರಾಮದ ಯುವಕ ಪ್ರವೀಣ್ ಕುಮಾರ್ ಮನೆಯ ಮುಂದೆ ಶವವಿಟ್ಟು ಕುಟುಂಬಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ವೇಳೆ ಸಂತೋಷ್ ಆಕ್ರೋಶಗೊಂಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಇಡಿ ಸಂಕಷ್ಟ

brother bidar 1

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತಪೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಪ್ರವೀಣ್ ಕುಮಾರ್ ಹಾಗೂ ಅವರ ಸ್ನೇಹಿತರ ಬಂಧನಕ್ಕೆ ಸಂತಪೂರ್ ಪೊಲೀಸರು ಬಲೆ ಬಿಸಿದ್ದಾರೆ.

Share This Article