ಚಂಡೀಗಢ: ಸಂಬಂಧದಲ್ಲಿ ಅಣ್ಣನಾಗಬೇಕಿದ್ದವನ ಜೊತೆ ಮದ್ವೆಯಾಗಿದೆ ಎಂದು ನಕಲಿ ದಾಖಲೆ ಸೃಷ್ಠಿಸಿ ತನ್ನ ಆಸೆ ಪೂರೈಸಿಕೊಂಡಿದ್ದು, ಈಗ ಯುವತಿ ಸಿಕ್ಕಿಬಿದ್ದ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ಯುವತಿಯ ಸೋದರ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದನು. ಹೀಗಾಗಿ ತಾನೂ ಆಸ್ಟ್ರೇಲಿಯಾಗೆ ತೆರಳಬೇಕೆಂಬ ಬಯಕೆ ಹೊಂದಿದ್ದ ಯುವತಿ, ಸಹೋದರನೊಂದಿಗೆ ಮದುವೆಯಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾಳೆ.
Advertisement
Advertisement
ಅದರಂತೆಯೇ ಆಕೆ ತಮ್ಮ ಮದುವೆಯನ್ನು ನೋಂದಾಯಿಸಲು ಪಂಜಾಬ್ ನ ನ್ಯಾಯಾಲಯಕ್ಕೆ ಆಸ್ಟ್ರೇಲಿಯಾದ ವೀಸಾವನ್ನು ಹೊಂದಿದ್ದ ಅಣ್ಣನ ದಾಖಲೆಗಳನ್ನು ಉಪಯೋಗಿಸಿಕೊಂಡಿದ್ದಾಳೆ. ಬಳಿಕ ಪಾಸ್‍ಪೋರ್ಟ್ ಮಾಡಿಸಿಕೊಂಡು ಆಸ್ಟ್ರೇಲಿಯಾಕ್ಕೆ ತೆರಳಿದ್ದಾಳೆ.
Advertisement
ಯುವತಿಯ ಮೋಸದ ಬಗ್ಗೆ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿ ಸಾಮಾಜಿಕ, ಕಾನೂನು ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾಳೆ. ವಿದೇಶಕ್ಕೆ ಹೋಗಬೇಕೆಂಬ ಹುಚ್ಚು ಹಠದಿಂದ ಈ ರೀತಿ ಮಾಡಿದ್ದಾಳೆ. ಸದ್ಯಕ್ಕೆ ನಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.
Advertisement
ಜೋಡಿಯು ನೀಡಿದ್ದ ಎಲ್ಲ ದಾಖಲೆಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಕಳೆದ 4 ವರ್ಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಭೇಟಿ ನೀಡುತ್ತಿರುವ 1500 ಕ್ಕಿಂತ ಹೆಚ್ಚು ವಿದೇಶಿಯರು ತಮ್ಮ ವಿದೇಶಿ ವೀಸಾಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾದ ಗೃಹ ವ್ಯವಹಾರಗಳ ಇಲಾಖೆ ತಿಳಿಸಿದೆ.
ಈ ಕುರಿತು ಆರು ಮಂದಿಯ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಈವರೆಗೂ ಯಾರೊಬ್ಬರನ್ನು ಬಂಧಿಸಲು ಸಾಧ್ಯವಾಗಲಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv