ಇತ್ತೀಚೆಗಷ್ಟೇ ಟೆಕ್ಕಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಟಾಲಿವುಡ್ (Tollywood) ನಟ ಶರ್ವಾನಂದ್ (Sharwanand), ಕೆಲವೇ ದಿನಗಳಲ್ಲಿ ಎಂಗೇಜ್ ಮೆಂಟ್ ಮುರಿದುಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಟಾಲಿವುಡ್ ಅಂಗಳದಲ್ಲಿ ಈ ಸುದ್ದಿ ಭಾರೀ ಸದ್ದು ಮಾಡುತ್ತಿದ್ದರೂ, ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಶರ್ವಾನಂದ್. ಇದೇ ಮೊದಲ ಬಾರಿಗೆ ಅವರ ಆತ್ಮೀಯರು ಈ ಕುರಿತು ಮಾತನಾಡಿದ್ದಾರೆ. ಅವರು ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರಿಂದ ಮದುವೆಯನ್ನು ಮುಂದೂಡಲಾಗಿದೆ. ಅದರ ಹೊರತು ನಿಶ್ಚಿತಾರ್ಥ ಮುರಿದು ಬಿದ್ದಿಲ್ಲ ಎಂದಿದ್ದಾರೆ.
ತೆಲುಗಿನ ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟ ಶರ್ವಾನಂದ್, ಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಇತ್ತೀಚಿಗಷ್ಟೇ ರಕ್ಷಿತಾ (Rakshitha Reddy) ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಸಿಹಿಸುದ್ದಿ ನೀಡಿದ್ದರು. ಇದನ್ನೂ ಓದಿ:ಹಣಕ್ಕಾಗಿ ನಾನು ಯಾರ ಹಿಂದೆಯೂ ಹೋಗಿಲ್ಲ : ನಟಿ ಪವಿತ್ರಾ ಲೋಕೇಶ್
ಈ ವರ್ಷದ ಆರಂಭ ಜನವರಿಯಲ್ಲಿ ಗುರುಹಿರಿಯರು ಸಮ್ಮತಿಸಿದ ಹುಡುಗಿ ರಕ್ಷಿತಾ ಶರ್ವಾನಂದ್ ಎಂಗೇಜ್ ಆಗಿದ್ದರು. ಆದರೆ ಈಗ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆ ಈ ನಿಶ್ಚಿತಾರ್ಥ ಮುರಿದು ಬಿದ್ದಿದೆ (Break Up) ಎಂದು ಹೇಳಲಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು.
ಈ ಸುದ್ದಿಯನ್ನ ಶರ್ವಾನಂದ್ ಟೀಂ ನಿರಾಕರಿಸಿದೆ. ಶರ್ವಾನಂದ್- ರಕ್ಷಿತಾ ನಡುವೆ ಸಂಬಂಧ ಚೆನ್ನಾಗಿದೆ. ಸದ್ಯ ನಟ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಷ್ಟೇ, ಲಂಡನ್‌ನಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ಸದ್ಯ ಒಪ್ಪಿಕೊಂಡಿರುವ ಸಿನಿಮಾಗಳನ್ನ ಮುಗಿಸಿ, ಮದುವೆ ಆಗ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನಿಶ್ಚಿತಾರ್ಥ ಮುರಿದಿರುವ ಸುದ್ದಿ ಬಗ್ಗೆ ನೇರವಾಗಿ ಶರ್ವಾನಂದ್- ರಕ್ಷಿತಾ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.