ಚಿತ್ರದುರ್ಗ: ಕಾರಿನ (Car) ಗ್ಲಾಸ್ ಒಡೆದು ಅದರಲ್ಲಿದ್ದ 10 ಲಕ್ಷ ರೂ. ಹಣವನ್ನು ಕಳ್ಳರು ದೋಚಿದ ಘಟನೆ ಹೊಸದುರ್ಗದಲ್ಲಿ ನಡೆದಿದೆ.
ಲಕ್ಕಿಹಳ್ಳಿ ಗ್ರಾಮದ ರೈತ ಮುದ್ದಪ್ಪ ಎಂಬವರು ಬ್ಯಾಂಕ್‍ನಿಂದ ಹಣ ಡ್ರಾ ಮಾಡಿಕೊಂಡು ಬಂದು ಕಾರಲ್ಲಿಟ್ಟಿದ್ದರು. ಬಳಿಕ ರಸ್ತೆ ಬದಿಯಲ್ಲಿನ ಅಂಗಡಿಯೊಂದಕ್ಕೆ ತೆರಳಿದ್ದರು. ವಾಪಸ್ ಬರುವಷ್ಟರಲ್ಲಿ ಬೈಕಲ್ಲಿ ಬಂದ ಇಬ್ಬರು ಚಾಲಕಿ ಕಳ್ಳರು ಹಣದ ಬ್ಯಾಗ್ ಕಳವು ಮಾಡಿಕೊಂಡು ಪಾರಾರಿಯಾಗಿದ್ದಾರೆ. ಇದನ್ನೂ ಓದಿ: ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗ್ಳೂರಲ್ಲಿ ನ. 25, 26ರಂದು ಕಂಬಳ
ಕಳ್ಳರು ರೈತನ ಚಲನವಲನ ಗಮನಿಸಿಕೊಂಡು ಬಂದಿದ್ದು, ಈ ಕೃತ್ಯ ಎಸಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಹಾಡಹಗಲೇ ಕಳ್ಳತನ ಆಗಿರುವುದರಿಂದ ನಗರದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಸಂಬಂಧ ಹೊಸದುರ್ಗ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದವರ ಹೊರತರಲು ಕ್ಷಣಗಣನೆ – ಆರೈಕೆಗೆ ಆಸ್ಪತ್ರೆ ರೆಡಿ