ಲಂಡನ್: ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಯುವ ಆಟಗಾರ ರಿಷಭ್ ಪಂತ್‍ರನ್ನು ಆನ್‍ಫೀಲ್ಡ್ ನಲ್ಲಿ ನಿಂದಿಸಿದ ಕಾರಣ ಐಸಿಸಿ ಇಂಗ್ಲೆಂಡ್ ಬೌಲರ್ ಬ್ರಾಡ್‍ಗೆ ದಂಡ ವಿಧಿಸಿದೆ.
ನಾಟಿಂಗ್ ಹ್ಯಾಮ್ ಟೆಸ್ಟ್ ನ ಭಾರತದ ಮೊದಲ ಇನ್ನಿಂಗ್ಸ್ 92 ನೇ ಓವರ್ ವೇಳೆ ಸ್ಟುವರ್ಟ್ ಬ್ರಾಡ್ ಅನುಚಿತವಾಗಿ ಅನುಚಿತವಾಗಿ ವರ್ತಿಸಿ ನಿಂದನೆ ಮಾಡಿದ್ದರು. ಬ್ರಾಡ್ ವರ್ತನೆ ಐಸಿಸಿ ನಿಯಮ 2.2.7 ರ ನಿಯಮ ಉಲ್ಲಂಘನೆ ಎಂದು ತೀರ್ಮಾನಿಸಿದ ಪಂದ್ಯದ ರೆಫರಿ ಪಂದ್ಯದ ಸಂಭಾವನೆಯ 15% ಮೊತ್ತವನ್ನು ದಂಡವಾಗಿ ವಿಧಿಸಿದ್ದಾರೆ.
Advertisement
BREAKING: England's @StuartBroad8 has been fined 15 percent of his match fee and received one demerit point after being found guilty of using aggressive language towards Rishabh Pant on day two of the third #ENGvIND Test.
➡️ https://t.co/TTgdG0vHTN pic.twitter.com/BWTT8aMine
— ICC (@ICC) August 21, 2018
Advertisement
ಬ್ರಾಡ್ ವರ್ತನೆ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಸಹ ಗರಂ ಆಗಿದ್ದು, ಈ ಹಿಂದೆ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಗಳ ಘಟನೆಯನ್ನು ನೆನಪು ಮಾಡಿ ಕಾಲೆಳೆದಿದ್ದಾರೆ.
Advertisement
ಸಂಭಾವಿತರ ಕ್ರೀಡೆ ಎಂದು ಹೆಸರು ಪಡೆದಿರುವ ಕ್ರಿಕೆಟ್‍ಗೆ ಕೆಲ ದಿನಗಳ ಹಿಂದೆಯಷ್ಟೇ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಹೊಸ ತಿದ್ದುಪಡಿ ತಂದು ಮತ್ತಷ್ಟು ಕಠಿಣ ಶಿಕ್ಷೆ ನೀಡಲು ಮುಂದಾಗಿತ್ತು. ಇದರ ಅನ್ವಯ ಹೊಸ ತಿದ್ದುಪಡಿಗಳನ್ನು ಜಾರಿಗೆ ಮಾಡಿ ಮೋಸದಾಟ, ಬಾಲ್ ಟ್ಯಾಂಪರಿಂಗ್, ವೈಯಕ್ತಿಕ ನಿಂದನೆ ಕೃತ್ಯಗಳನ್ನು ಲೆವೆಲ್ 2 ಮತ್ತು 3 ಅಪರಾಧಗಳ ಅಡಿ ಎಂದು ಪರಿಗಣಿಸಿತ್ತು. ಅಲ್ಲದೇ ಅಶ್ಲೀಲ ಪದ ಬಳಕೆ, ಅಂಪೈರ್ ತೀರ್ಮಾನಕ್ಕೆ ವಿರೋಧ ಕೃತ್ಯಗಳನ್ನು ಲೆವೆಲ್ 1 ಅಪರಾಧ ಅಡಿ ಹಾಗೂ ವಿಶೇಷವಾಗಿ ಬಾಲ್ ಟ್ಯಾಂಪರಿಂಗ್ ಮಾಡಿದರೆ ಲೆವೆಲ್ 3 ಅಡಿ ಶಿಕ್ಷೆ ವಿಧಿಸುವ ಅವಕಾಶ ನೀಡಿತ್ತು. ತಿದ್ದುಪಡಿ ನಿಯಮಗಳ ಅನ್ವಯ ಲೆವೆಲ್ 3ರ ಕೃತ್ಯಗಳಿಗೆ 8 ಋಣಾತ್ಮಕ ಅಂಕಗಳಿಂದ 12 ಅಂಕಗಳಿಗೆ ಹೆಚ್ಚಿಸಿತ್ತು. ಅಲ್ಲದೇ 6 ಟೆಸ್ಟ್ ಅಥವಾ 12 ಏಕದಿನ ಪಂದ್ಯಗಳ ನಿಷೇಧಕ್ಕೆ ಸಮಾನಾಗಿರುವಂತೆ ಮಾಡಿತ್ತು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://twitter.com/rocktheworld62/status/1032146978619027456
Stuart Broad mouthing off Rishabh Pant on the latter's debut Test. Cute. Waiting for another Yuvraj Singh to emerge. #ENGvIND
— Aishu ???? (@imaishu_) August 19, 2018