LatestMain PostNational

ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಬ್ರಿಟಿಷ್ ಮಹಿಳೆಗೆ ಮುಂಬೈ ಕ್ಲಬ್‌ನಲ್ಲಿ ಕಿರುಕುಳ

ಮುಂಬೈ: ಮುಂಬೈನ ಸಬರ್ಬನ್ ಬಾಂದ್ರಾ ಕ್ಲಬ್‌ನಲ್ಲಿ ಬ್ರಿಟನ್ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವುದಾಗಿ ಶುಕ್ರವಾರ ತಿಳಿಸಿದ್ದಾರೆ.

ಬ್ರಿಟನ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮಂಗಳವಾರ ರಾತ್ರಿ ತನ್ನ ಪತಿ ಹಾಗೂ ಸ್ನೇಹಿತರೊಂದಿಗೆ ಕ್ಲಬ್‌ಗೆ ತೆರಳಿದ್ದರು. ಈ ವೇಳೆ ಘಟನೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಶೌಚಾಲಯಕ್ಕೆ ತೆರಳಿದ್ದಾಗ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದು, ಈ ಬಗ್ಗೆ ತಕ್ಷಣ ತನ್ನ ಪತಿ ಹಾಗೂ ಸ್ನೇಹಿತರಿಗೆ ತಿಳಿಸಿದ್ದಾರೆ. ಬಳಿಕ ಆರೋಪಿಯನ್ನು ಆಕೆಯ ಪತಿ ಹಾಗೂ ಸ್ನೇಹಿತರು ಹಿಡಿದ್ದಾರೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್

ಘಟನೆ ಕುರಿತು ಪೊಲೀಸರಿಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದಾರೆ. ಮಹಿಳೆಯ ಪತಿ ಹಾಗೂ ಆಕೆಯ ಸ್ನೇಹಿತರು ಆರೋಪಿಯನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಆಸ್ತಿಯಲ್ಲಿ ಪಾಲು ಕೊಡದಿದ್ದಕ್ಕೆ ಮೂವರು ಮಕ್ಕಳೊಂದಿಗೆ ಬೆಂಕಿಹಚ್ಚಿಕೊಂಡ ತಾಯಿ

ಆರೋಪಿಯನ್ನು ಘನಶ್ಯಾಮ್ ಲಾಲ್‌ಚಂದ್ ಯಾದವ್ ಎಂದು ಗುರುತಿಸಲಾಗಿದ್ದು, ಆತ ಎಂಬಿಎ ಪದವೀಧರ ಎಂದು ತಿಳಿದುಬಂದಿದೆ. ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 354, 354ಎ ಹಾಗೂ 509 ಆರೋಪಗಳ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published.

Back to top button