ಲಂಡನ್: ಹುಟ್ಟುಹಬ್ಬದ (Birthday) ಸಲುವಾಗಿ 102 ವರ್ಷ ವಯಸ್ಸಿನ ಇಂಗ್ಲೆಂಡ್‍ನ ಬೆನ್‍ಹಾಲ್ ಗ್ರೀನ್‍ನ ವೃದ್ಧೆಯೊಬ್ಬರು 7,000 ಅಡಿಗಳ ಎತ್ತರದಿಂದ ಸ್ಕೈಡೈವಿಂಗ್ (Skydiver) ಮಾಡಿ ವಿಶೇಷ ದಾಖಲೆ ಮಾಡಿದ್ದಾರೆ. ಈ ಮೂಲಕ ವಯಸ್ಸು ಕೇವಲ ಒಂದು ಸಂಖ್ಯೆ ಎಂಬ ಮಾತನ್ನು ಮತ್ತೆ ಸಾಬೀತು ಮಾಡಿದ್ದಾರೆ.
ವಿಮಾನದ ಮೇಲಿಂದ ಇಷ್ಟು ಎತ್ತರದಿಂದ ಹೊರಗೆ ನಿರ್ಭೀತಿಯಿಂದ ಜಿಗಿದಿರುವ ಶತಾಯುಷಿ ಮ್ಯಾನೆಟ್ ಬೈಲಿಯವರು (Manette Baillie) 6,900 ಅಡಿಗಳನ್ನು ಪೂರ್ಣಗೊಳಿಸಿದ ಬ್ರಿಟನ್‍ನ ಅತ್ಯಂತ ಹಳೆಯ ಸ್ಕೈಡೈವರ್ ಎಂವ ಹೆಗ್ಗಳಿಕೆಗೆ ಪಾತ್ರರಾದರು.
Britain’s 102-Year-Old Woman Becomes Country’s Oldest Skydiver with Birthday Jump
Video Credits: Sky News pic.twitter.com/pvJ6YxJ1uS
— BreezyScroll (@BreezyScroll) August 26, 2024
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೃದ್ಧೆಯ ಸ್ಕೈಡೈವಿಂಗ್ ವೀಡಿಯೋದಲ್ಲಿ, ವೃದ್ಧೆ, ತರಬೇತಿದಾರನೊಂದಿಗೆ ವಿಮಾನದಿಂದ ಜಿಗಿಯುವುದನ್ನು ನೋಡಬಹುದಾಗಿದೆ. ಸ್ವಲ್ಪ ಸಮಯದ ನಂತರ, ಅವರು ಸುರಕ್ಷಿತವಾಗಿ ಇಳಿದು ಜನರೊಂದಿಗೆ ಸಂಭ್ರಮಿಸಿದ್ದಾರೆ. ತಮ್ಮ ಅನುಭವ ಅದ್ಭುತವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಆಕಾಶದಲ್ಲಿ ತೇಲುವಾಗ ಉತ್ಸಾಹ ಮತ್ತು ಭಯ ಎರಡನ್ನೂ ಅಅನುಭವಿಸಿದೆ. ಈ ವೇಳೆ ನಾನು ನನ್ನ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿದ್ದೆ. ಇದನ್ನು ನಾನು ಒಪ್ಪಿಕೊಳ್ಳುತ್ತೇನೆ. ಈ ಮುಲಕ ಬಹು ದಿನಗಳ ಕನಸನ್ನು ನಾನು ಈಡೇರಿಸಕೊಂಡಿದ್ದೇನೆ ಎಂದಿದ್ದಾರೆ.
ಜನರು ವಯಸ್ಸಾದ ಬಳಿಕ ಸಹ ತಮ್ಮ ಕನಸುಗಳನ್ನು ಮುಂದುವರಿಸಬಹುದು ಎಂದು ಬೈಲ್ಲಿ ಹೇಳಿದ್ದಾರೆ. ಈ ಮೂಲಕ ಯುವ ಜನತೆಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದ್ದಾರೆ.