ಲಂಡನ್: ಬ್ರಿಟನ್‍ನ (Britain) ರಾಣಿಯಾಗಿದ್ದ ಎಲಿಜಬೆತ್ 2 (Queen Elizabeth II) ಅವರು ತಮ್ಮ ಜೀವನದ ಕೊನೆಯ ಕೆಲವು ವರ್ಷಗಳಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ವರದಿಯೊಂದು ತಿಳಿಸಿದೆ.
ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್‍ನಲ್ಲಿ ಇಹಲೋಕ ತ್ಯಜಿಸಿದ್ದ 96 ವರ್ಷದ ರಾಣಿ ಎಲಿಜಬೆತ್ 2 ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು ಎಂದು ತಿಳಿಸಲಾಗಿತ್ತು. ಆದರೆ ಈಗ ಪ್ರಿನ್ಸ್ ಫಿಲಿಪ್ ಅವರ ಸ್ನೇಹಿತ ಗೈಲ್ಸ್ ಬ್ರಾಂಡ್ರೆತ್ ಬರೆದಿರುವ ರಾಣಿಯ ಹೊಸ ಜೀವನ ಚರಿತ್ರೆಯಲ್ಲಿ, ಎಲಿಜಬೆತ್ ಅವರು ಅಸ್ಥಿ ಮಜ್ಜೆಯ ಕ್ಯಾನ್ಸರ್‌ನೊಂದಿಗೆ (Bone Marrow Cancer) ಹೋರಾಟ ನಡೆಸುತ್ತಿದ್ದರು ಎಂದು ಉಲ್ಲೇಖವಾಗಿದೆ.
Advertisement
Advertisement
ರಾಣಿ ಎಲಿಜಬೆತ್‍ಗೆ ಅಸ್ಥಿ ಮಜ್ಜೆಯ ಕ್ಯಾನ್ಸರ್ ಇತ್ತು. ಇದರಿಂದಾಗಿ ಅವರಿಗೆ ತುಂಬಾ ಆಯಾಸವಾಗುತ್ತಿತ್ತು. ಜೊತೆಗೆ ತೂಕವೂ ಬಹುಬೇಗ ಕಡಿಮೆ ಆಗಿತ್ತು, ಅವರ ಜೀವನದ ಕೊನೆಯ ವರ್ಷಗಳಲ್ಲಿ ಅವರು ಓಡಾಡಲು ಹೆಚ್ಚು ಸಮಸ್ಯೆಯನ್ನು ಪಡುತ್ತಿದ್ದರು ಎಂದು ಬ್ರಾಂಡ್ರೆತ್ ತಮ್ಮ ಪುಸ್ತಕದಲ್ಲಿ ತಿಳಿಸಿದ್ದಾರೆ. ಈ ರೋಗವು ಸಾಮಾನ್ಯವಾಗಿ ವಯಸ್ಸಾದವರ ಮೇಲೆ ಬೀರುವ ಪರಿಣಾಮವಾಗಿದೆ.
Advertisement
ರಾಣಿ ಎಲಿಜಬೆತ್ ಓಡಾಡಲು ಕಷ್ಟಪಡುತ್ತಿದ್ದರು. ಇಷ್ಟೇ ಅಲ್ಲದೇ ಅನೇಕ ಅಧಿಕೃತ ಕರ್ತವ್ಯಗಳಿಂದಲೂ ಹಿಂದೆ ಸರಿಯುತ್ತಿದ್ದರು. ಕಳೆದ ವರ್ಷ ಏಪ್ರಿಲ್‍ನಲ್ಲಿ ರಾಣಿಯ ಪತಿ, ಪ್ರಿನ್ಸ್ ಫಿಲಿಪ್‍ನ ಮರಣ ನಂತರ ಎಲಿಜಬೆತ್ ಇನ್ನೂ ಕುಗ್ಗಿ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್
Advertisement
ರಾಣಿ ಎಲಿಜಬೆತ್ ಕಳೆದ ವರ್ಷ ಅಕ್ಟೋಬರ್‌ನಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ವರ್ಷದ ಸೆ. 8ರಂದು ಸ್ಕಾಟ್ಲೆಂಡ್ ಅರಮನೆಯಲ್ಲಿ ಕೊನೆಯುಸಿರೆಳೆದರು. 1923ರಿಂದ ಬ್ರಿಟನ್‍ನ ರಾಣಿಯಾಗಿದ್ದರು. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ