ನವದೆಹಲಿ: 3 ವರ್ಷದ ಕಂದಮ್ಮ ಅಳುತ್ತಿದೆ ಅಂತಾ ಭಾರತೀಯ ಪೋಷಕರಿಗೆ ಬ್ಲಡಿ ಇಂಡಿಯನ್ಸ್ ಎಂದು ಅವಾಚ್ಯವಾಗಿ ಬೈದು, ಬಲವಂತವಾಗಿ ಲಂಡನ್‍ನಲ್ಲಿ ವಿಮಾನದಿಂದ ಕೆಳಗಿಸಲಾಗಿದೆ.
ಜುಲೈ 23 ರಂದು ಲಂಡನ್- ಬರ್ಲಿನ್‍ಗೆ ಪ್ರಯಾಣ ಬೆಳೆಸಿದ್ದ (ಬಿಎ 8495) ಬ್ರಿಟಿಷ್ ಏರ್‍ವೇಸ್‍ನ ವಿಮಾನ ಸಿಬ್ಬಂದಿಯೇ ಹೀಗೆ ಅಮಾನವೀಯವಾಗಿ ನಡೆದುಕೊಂಡಿದೆ. ಈಗ ಜನಾಂಗೀಯ ನಿಂದನೆ ಮೂಲಕ ನಮ್ಮನ್ನು ಅವಮಾನಿಸಿ, ವಿಮಾನದಿಂದ ಕೆಳಗೆ ಇಳಿಸಲಾಗಿದೆ. ವಿಮಾನ ಸಂಸ್ಥೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದಾರೆ.
Advertisement
ನಡೆದದ್ದು ಏನು?
ಜುಲೈ 23ರಂದು ಭಾರತೀಯ ದಂಪತಿ ತಮ್ಮ 3 ತಿಂಗಳ ಮಗುವಿನ ಜೊತೆಗೆ ವಿಮಾನದಲ್ಲಿ ಲಂಡನ್‍ನಿಂದ ಪ್ರಯಾಣ ಬೆಳೆಸುತ್ತಿದ್ದರು. ಆದರೆ ಟೇಕ್ ಆಫ್ ಆಗುವಾಗ ಸಮಾಧಾನವಾಗಿದ್ದ ಮಗು, ನಂತರ ಅಳಲು ಪ್ರಾರಂಭಿಸಿದೆ. ತಕ್ಷಣವೇ ತಾಯಿ ಮಗುವನ್ನು ಸಮಾಧಾನ ಪಡಿಸುತ್ತಿದ್ದರು. ವಿಮಾನ ಸಿಬ್ಬಂದಿಯೊಬ್ಬರು ಬಂದು, ಮಗುವಿಗೆ ಸೀಟ್ ಬೆಲ್ಟ್ ಕಟ್ಟಿ ಎಂದು ಬೆದರಿಸಿದರು. ಆಗ ಮಗು ಮತ್ತಷ್ಟು ಜೋರಾಗಿ ಅಳಲು ಪ್ರಾರಂಭಿಸಿತ್ತು.
Advertisement
ಮಗುವಿನ ಅಳು ನಿಲ್ಲಿಸಲು ದಂಪತಿಯ ಹಿಂದಿನ ಸೀಟ್‍ನಲ್ಲಿ ಕುಳಿತ್ತಿದ್ದ ಭಾರತೀಯ ಕುಟುಂಬವೊಂದು ಬಿಸ್ಕೇಟ್ ಗಳನ್ನು ನೀಡಿತ್ತು. ಬಳಿಕ ಮಗುವಿನ ತಾಯಿನ್ನು ಆಸನದಲ್ಲಿ ಕೂರಿಸಿದ್ದಲ್ಲದೆ, ಮಗು ಅಳುತ್ತಿದ್ದಾಗಲೇ ಸೀಟ್ ಬೆಲ್ಟ್ ಹಾಕಿದ್ದರು. ವಿಮಾನ ಸಿಬ್ಬಂದಿ ದಂಪತಿಯ ಬಳಿ ಬಂದು ಸಮ್ಮನೆ ಇರಿ ಇಲ್ಲ ಅಂದರೆ ವಿಮಾನದ ಕಿಟಕಿಯಿಂದ ಹೊರಗೆ ತಳ್ಳಬೇಕಾಗುತ್ತದೆ, ‘ಬ್ಲಡಿ ಇಂಡಿಯನ್ಸ್’ ಎಂದೂ ಅವಾಚ್ಯವಾಗಿ ನಿಂದಿಸಿದ್ದರು. ಮಗು ಅಳು ನಿಲ್ಲಿಸಲಿಲ್ಲ ಅಂತಾ ವಿಮಾನವನ್ನು ಟರ್ಮಿನಲ್‍ಗೆ ತಂದು ದಂಪತಿ, ಅವರ ಮಗು ಹಾಗೂ ಬಿಸ್ಕೇಟ್ ನೀಡಿದ್ದ ಕುಟುಂಬವನ್ನು ಕೆಳಗೆ ಇಳಿಸಿ ಸಿಬ್ಬಂದಿ ಹೋಗಿದ್ದಾರೆ.
Advertisement
ಪ್ರಕರಣದ ಕುರಿತು ತನಿಖೆ ಕೈಗೊಂಡು, ಬ್ರಿಟಿಷ್ ಏರ್‍ವೇಸ್ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ತಂದೆ ಪತ್ರದ ಮೂಲಕ ಸಚಿವ ಸುರೇಶ್ ಪ್ರಭು ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews