– ಅಳಿಯ, ಪುತ್ರಿಯ ಜೊತೆ ಪೂಜೆ ಸಲ್ಲಿಸಿದ ಸುಧಾಮೂರ್ತಿ
ಬೆಂಗಳೂರು: ಬ್ರಿಟನ್ ಮಾಜಿ ಪ್ರಧಾನಿ ಹಾಗೂ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ (Sudha Murthy) ಅವರ ಅಳಿಯ ರಿಷಿ ಸುನಾಕ್ (Rishi Sunak) ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾರೆ.
ಮಂಗಳವಾರ ಬೆಂಗಳೂರಿಗೆ ಪತ್ನಿ ಜೊತೆ ಆಗಮಿಸಿದ್ದ ಸುನಾಕ್ ಅವರು ಬಳಿಕ ರಾಘವೇಂದ್ರ ಮಠಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಡ್ರೈ ಪೋರ್ಟ್ ಎಂದರೇನು? ಬಿಹಾರದಲ್ಲಿ ಅದರ ಅವಶ್ಯಕತೆ ಏನಿತ್ತು?
ಜಯನಗರದ ನಂಜನಗೂಡು ಶ್ರೀಗುರು ರಾಘವೇಂದ್ರ ಮಠಕ್ಕೆ ಕುಟುಂಬ ಸಮೇತ ಸುನಾಕ್ ಭೇಟಿ ಕೊಟ್ಟಿದ್ದಾರೆ. ಸುಧಾಮೂರ್ತಿ ದಂಪತಿ, ಅಳಿಯ ಋಷಿ ಸುನಾಕ್ ದಂಪತಿ ಮಠಕ್ಕೆ ಭೇಟಿ ಕೊಟ್ಟಿದ್ದಾರೆ.
ಕಾರ್ತಿಕ ಮಾಸದ ಪ್ರಯುಕ್ತ ರಾಯರ ಸನ್ನಿಧಿಯಲ್ಲಿ ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು. ಶ್ರೀಮಠದ ಹಿರಿಯ ವ್ಯವಸ್ಥಾಪಕ ಆರ್.ಕೆ.ವಾದಿಂದ್ರಾಚಾರ್ಯ ಅವರು ರಾಯರ ಶೇಷ ವಸ್ತ್ರ, ಫಲಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದರು. ಇದನ್ನೂ ಓದಿ: MUDA Case: ಇಂದು ಮೈಸೂರು ‘ಲೋಕಾ’ ಕಚೇರಿಯಲ್ಲಿ ಸಿಎಂ ವಿಚಾರಣೆ