USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ

Public TV
3 Min Read
modi 3

ನವದೆಹಲಿ: ಹಿಂದೆ ಕಳವಾಗಿದ್ದ ವಿಗ್ರಹಗಳೆಲ್ಲವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯುಎಸ್‍ನಿಂದ 157 ಪುರಾತನ ಕಲಾಕೃತಿಗಳನ್ನು ಭಾರತಕ್ಕೆ ತಂದಿದ್ದಾರೆ.

ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಕಲಾಕೃತಿಗಳೆಲ್ಲ ಹಿಂದೆ ಕಳವಾಗಿ, ಯುಎಸ್‍ಗೆ ಸಾಗಿಸಲ್ಪಟ್ಟಿದ್ದವು. ಅದನ್ನೀಗ ಪ್ರಧಾನಿ ಮೋದಿಯವರಿಗೆ ಅಮೆರಿಕ ಹಸ್ತಾಂತರ ಮಾಡಿದೆ. ಈ ಬಗ್ಗೆ ಪ್ರಧಾನಿ ಮೋದಿ (Narendra Modi)ಯವರೂ ಕೂಡ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ.

ಇದೀಗ ಪ್ರಧಾನಿ ಮೋದಿಯವರು ಭಾರತಕ್ಕೆ ತರಲಿರುವ ಪುರಾತನ ವಸ್ತುಗಳಲ್ಲಿ 12ನೇ ಶತಮಾನದ ಕಂಚಿನ ನಟರಾಜ ವಿಗ್ರಹ, 10ನೇ ಶತಮಾನದ ರೇವಂತ ದೇವರ ಮೂರ್ತಿಗಳು ಇವೆ. ಹೀಗೆ ವಾಪಸ್ ತರಲಾದ 45 ಕಲಾಕೃತಿಗಳು ಸಾಮಾನ್ಯ ಯುಗಕ್ಕಿಂತಲೂ ಮುಂಚಿನವು. 71 ಸಾಂಸ್ಕೃತಿಕ ಕಲಾಕೃತಿಗಳಾಗಿದ್ದು, 60 ಹಿಂದೂ ಧರ್ಮ ಬಿಂಬಕ ಕಲಾಕೃತಿಗಳಾಗಿವೆ. ಇನ್ನು 16 ಕಲಾಕೃತಿಗಳು ಬೌದ್ಧಧರ್ಮಕ್ಕೆ ಸೇರಿದ್ದಾಗಿದ್ದು, 9 ಜೈನಧರ್ಮದ್ದಾಗಿವೆ. ಇದನ್ನೂ ಓದಿ:  ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

ಕಂಚಿನಿಂದ ಮಾಡಲಾದ ಲಕ್ಷ್ಮೀ ನಾರಾಯಣ ಅಲಂಕೃತ ಮೂರ್ತಿಗಳು, ಬುದ್ಧ, ವಿಷ್ಣು, ಶಿವ-ಪಾರ್ವತಿ ಮತ್ತು 24 ಜೈನ ತೀರ್ಥಂಕರ ಮೂರ್ತಿಗಳ ವಿಗ್ರಹ ಇದೆ. ದೇವರ ವಿಗ್ರಹಗಳ ಹೊರತಾಗಿಯೂ ಕೆಲವು ಸಾಂಸ್ಕೃತಿ ಪ್ರತಿಬಿಂಬಕ ಕಲಾಕೃತಿಗಳಿವೆ. ಮೂರು ತಲೆಯ ಬ್ರಹ್ಮ, ರಥ ಚಾಲನೆ ಮಾಡುತ್ತಿರುವ ಸೂರ್ಯ, ವಿಷ್ಣು, ದಕ್ಷಿಣಾಮೂರ್ತಿಯಾಗಿರುವ ಶಿವ, ನೃತ್ಯ ಮಾಡುತ್ತಿರುವ ಗಣೇಶನ ವಿಗ್ರಹಗಳು, ತಾರ, ಜೈನ ತೀರ್ಥಂಕರ , ಪದ್ಮಾಸನ ತೀರ್ಥಂಕರ ಮತ್ತು ಜೈನ ಚೌಬಿಸಿ ಮೂರ್ತಿಗಳೂ ಇವೆ. ಇದನ್ನೂ ಓದಿ:  ಹುಟ್ಟುಹಬ್ಬದ ಪಾರ್ಟಿಗೆ ಆಗಮಿಸಿದ ಟೆಕ್ಕಿ ಸಾವು

ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಯುಎಸ್ ಪ್ರವಾಸ ಮುಗಿಸಿ, ಅಲ್ಲಿಂದ ಹೊರಟಿದ್ದಾರೆ. ನಿನ್ನೆ ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿದ್ದರು. ಸೆಪ್ಟೆಂಬರ್ 24ರಂದು ಕ್ವಾಡ್ ಶೃಂಗಸಭೆ (Quad Summit)ಯಲ್ಲಿ ಮಾತನಾಡಿದ್ದರು. ನಿನ್ನೆ (ಸೆಪ್ಟೆಂಬರ್ 25) ಅವರ ಅಮೆರಿಕ ಪ್ರವಾಸ ಮುಕ್ತಾಯಗೊಂಡಿದ್ದು, ಈಗಾಗಲೇ ಅಲ್ಲಿಂದ ಹೊರಟಿದ್ದಾರೆ. ಆದರೆ ಹೀಗೆ ಭಾರತಕ್ಕೆ ಬರುವಾಗ, ನಮ್ಮ ದೇಶಕ್ಕೆ ಸಂಬಂಧಪಟ್ಟ ಸುಮಾರು 157 ಪುರಾತನ ಕಲಾಕೃತಿಗಳು, ದೇವರ ವಿಗ್ರಹಗಳನ್ನು ವಾಪಸ್ ತರುತ್ತಿದ್ದಾರೆ ಎಂದು ಹೇಳಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *