ಕೋಲ್ಕತ್ತಾ: ಪಶ್ಚಿಮಬಂಗಾಳದ ಡಾರ್ಜಲಿಂಗ್ ಜಿಲ್ಲೆಯ ಸಿಲಿಗುರಿ ಸಮೀಪ ಸೇತುವೆಯೊಂದು ಏಕಾಏಕಿ ಕುಸಿದು ಬಿದ್ದಿದೆ.
ಈ ಘಟನೆ ಇಂದು ಬೆಳಗ್ಗೆ ನಡೆದಿದೆ. ಸೇತುವೆ ಮೇಲೆ ಟ್ರಕ್ ಚಲಿಸುತ್ತಿದ್ದಂತೆಯೇ ಕುಸಿದು ಬಿದ್ದಿದೆ. ಪರಿಣಾಮ ಇಬ್ಭಾಗವಾದ ಸೇತುವೆಯ ಮಧ್ಯೆಯೇ ಟ್ರಕ್ ಸಿಲುಕಿ ನೇತಾಡಿಕೊಂಡಿದೆ. ಘಟನೆಯಲ್ಲಿ ಟ್ರಕ್ ಚಾಲಕ ಗಾಯಗೊಂಡಿದ್ದಾನೆ.
Advertisement
Advertisement
ಉತ್ತರ ಬಂಗಾಳದ ದೊಡ್ಡ ನಗರವಾದ ಸಿಲಿಗುರಿಯಿಂದ ಮಂಗಾಂಜ್ ಪ್ರದೇಶಕ್ಕೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ. ಸದ್ಯ ಘಟನೆಯಿಂದ ಗಾಯಗೊಂಡಿರುವ ಟ್ರಕ್ ಚಾಲಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ.
Advertisement
A canal bridge in Siliguri's Phansidewa collapsed early morning today. More details awaited. #WestBengal pic.twitter.com/pb542LHdqj
— ANI (@ANI) September 7, 2018
Advertisement
ಪಶ್ಚಿಮ ಬಂಗಾಳದಲ್ಲಿ ಈ ವಾರದಲ್ಲಿ ನಡೆದ ಎಡರನೇಯ ಘಟನೆ ಇದಾಗಿದೆ. ಸೆಪ್ಟೆಂಬರ್ 4 ರಂದು ಇಂತದ್ದೇ ಘಟನೆಯೊಂದು ದಕ್ಷಿಣ ಕೋಲ್ಕತ್ತಾದಲ್ಲಿ ನಡೆದಿತ್ತು. ಈ ಘಟನೆಯಲ್ಲಿ ಓರ್ವ ಸಾವನ್ನಪ್ಪಿ, 25 ಮಂದಿ ಗಾಯಗೊಂಡಿದ್ದರು. ಇದೀಗ ಮತ್ತೊಂದು ಘಟನೆ ನಡೆದಿರುವುದರಿಂದ ರಾಜ್ಯದಲ್ಲಿರುವ ಸೇತುವೆಗಳ ಪರಿಸ್ಥಿತಿ ಹೇಗಿದೆಯೆಂಬುದು ಬೆಳಕಿಗೆ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv