ಲಕ್ನೋ: ಮದುವೆಯಾಗುವ ವೇಳೆ ವರ ಕುದುರೆ, ಬೈಕ್ ಅಥವಾ ಐಶಾರಾಮಿ ಕಾರುಗಳಲ್ಲಿ ಬರುವುನ್ನು ನೋಡಿರುತ್ತಿರಿ ಆದರೆ ಇಲ್ಲೊಬ್ಬ ವರ ತನ್ನ ಮದುವೆ ನಡೆಯುವ ಕಲ್ಯಾಣ ಮಂಟಪಕ್ಕೆ ಹೆಲಿಕಾಪ್ಟರ್ ಏರಿ ಬಂದಿದ್ದಾರೆ.
ಮೂಲತಃ ರಾಜಸ್ಥಾನದ ಜೈಪುರದ ನಿವಾಸಿಯಾಗಿರುವ ಶಾರೂಖ್ ಖಾನ್ ಎಂಬ ಮದುಮಗನನೇ ತನ್ನ ಮದುವೆಗೆ ಹೆಲಿಪಾಪ್ಟರ್ ಏರಿ ಬಂದಿದ್ದು, ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ.
ಇದನ್ನೂ ಓದಿ: ಮದುವೆ ದಿನ ಲೆಹೆಂಗಾ ಬದಲು ಶಾರ್ಟ್ಸ್ ತೊಟ್ಟ ವಧು- ಫೋಟೋ ವೈರಲ್
ಈ ಕುರಿತು ಮಾತನಾಡಿರುವ ಶಾರುಕ್ ಖಾನ್ ತನಗೇ ಚಿಕ್ಕವನಿಂದಾಗಿನಿಂದಲೂ ಮದುವೆಯಾಗುವಾಗ ಹೆಲಿಕಾಪ್ಟರ್‍ನಲ್ಲಿ ಬರಬೇಕು ಎಂದು ಕನಸು ಕಂಡಿದ್ದೆ. ಆದರಂತೆ ಇಂದು ಹೆಲಿಪಾಪ್ಟರ್‍ನಲ್ಲಿ ಬಂದಿದ್ದೇನೆ, ನನ್ನ ಕನಸು ನನಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವರ ಶಾರುಕ್ ಖಾನ್ ಹಿರಿಯ ಸಹೋದರನ ಮದುವೆ ಸಮಾರಂಭದಲ್ಲಿ ಇದೇ ರೀತಿ ಬರಲು ಪ್ಲಾನ್ ಮಾಡಿದರಂತೆ, ಆದರೆ ಅಧಿಕಾರಿಗಳಿಂದ ಅನುಮತಿ ಪಡೆಯಲು ಸಾಧ್ಯವಾಗದೆ ಅದನ್ನು ಕೈಬಿಟ್ಟಿದ್ದೇವು ಎಂದು ಹೇಳಿದ್ದಾರೆ.
ಭಾವಿ ಪತಿ ಕನಸು ಕುರಿತು ಮಾತನಾಡಿದ ವಧು, ಗಂಡನ ಕನಸು ನನಸಾಗಿದ್ದು, ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.
https://www.youtube.com/watch?v=E6REmaOxs30