– ಪುರೋಹಿತರು, ಕುಟುಂಬಸ್ಥರು ಕಕ್ಕಾಬಿಕ್ಕಿ
ಮಂಡ್ಯ: ಜೀವನದಲ್ಲಿ ಕೆಲವೊಮ್ಮೆ ಗೊಂದಲಗಳು ಹೆಚ್ಚಾಗುತ್ತದೆ. ಹೀಗೆ ಗೊಂದಲಕ್ಕೀಡಾಗಿ ಮದುವೆ ಮನೆಯಲ್ಲಿ ವಧು, ವರನ ಕೊರಳಿಗೆ ತಾಳಿ ಕಟ್ಟಿದ ಘಟನೆ ಮಂಡ್ಯದಲ್ಲಿ ನಡೆದಿದ್ದು, ಈ ವಿಡಿಯೋ ಫುಲ್ ವೈರಲ್ ಆಗಿದೆ.
ಮಂಡ್ಯದ ಮದುವೆಯಲ್ಲಿ ಪುರೋಹಿತರು ತಾಳಿಯನ್ನು ಹಿಡಿದು ಮಂತ್ರ ಪಠಿಸಿ ಹೆಣ್ಣಿನ ಕೈಗೆ ಕೊಡುತ್ತಾರೆ. ಅದನ್ನು ಆಕೆ ಪತಿಯ ಕೈಗೆ ಕೊಡಬೇಕಿತ್ತು. ಆದರೆ ಆಕೆ ಕನ್‍ಫ್ಯೂಸ್ ಆಗಿ ಅರಶಿಣದ ತಾಳಿಯನ್ನು ವರನಿಗೆ ನೀಡದೆ ತಾನೇ ಆತನ ಕೊರಳಿಗೆ ಕಟ್ಟಿದ್ದಾಳೆ.
ಕೊನೆಗೆ ಎಚ್ಚೆತ್ತ ಪುರೋಹಿತರು “ನೀನಲ್ಲಮ್ಮ ತಾಳಿ ಕಟ್ಟೋದು” ಎಂದು ಹೇಳಿ ವರನ ಕೊರಳಿನ ತಾಳಿ ಬಿಚ್ಚಿಸಿ ವಧುವಿನ ಕೊರಳಿಗೆ ಕಟ್ಟೋದಕ್ಕೆ ವರನಿಗೆ ಹೇಳಿದ್ದಾರೆ. ಈ ದೃಶ್ಯ ಕಂಡು ನೆರೆದಿದ್ದ ಇಡೀ ಕುಟುಂಬ ಒಂದು ಕ್ಷಣ ನಗೆಗಡಲಲ್ಲಿ ತೇಲಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.