ನವದೆಹಲಿ: ಮದುವೆ ಮಂಟಪಕ್ಕೆ ವರ ಬರುವುದನ್ನು ನೋಡಿದ ವಧು ಫುಲ್ ಜೋಶ್ ನಲ್ಲಿ ಕುಣಿದು ಕುಪ್ಪಳಿಸಿದ್ದಾಳೆ.
Advertisement
ಮದುವೆ ಎಂದರೆ ಎಲ್ಲ ವಧು-ವರರಿಗೂ ವಿಶೇಷದ ಸಂಗತಿಯಾಗಿರುತ್ತೆ. ಮದುವೆ ದಿನ ಹತ್ತಿರವಾಗುತ್ತಿದಂತೆ ವಧು-ವರರ ಸಂಭ್ರಮ ಮನೆ ಮಾಡಿರುತ್ತೆ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಮನೆಗೆ ವರನ ದಿಬ್ಬಣ ಬರುತ್ತಿರುವುದನ್ನು ನೋಡಿ ವಧು ಸ್ಟೆಪ್ ಹಾಕಿರುವ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ: ಗಡಿಯೊಳಗೆ ನುಸುಳಿದ ಪಾಕ್ ಯೋಧನ ಹತ್ಯೆ – ಶವವನ್ನ ಹಿಂದಕ್ಕೆ ತೆಗೆದುಕೊಳ್ಳಿ ಎಂದ ಭಾರತೀಯ ಸೇನೆ
Advertisement
Advertisement
ಇನ್‍ಸ್ಟಾಗ್ರಾಮ್ ನ ವಿಟ್ಟಿ_ವೆಡ್ಡಿಂಗ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ನೆಟ್ಟಿಗರು ವೀಡಿಯೋವನ್ನು ಫುಲ್ ಎಂಜಯ್ ಮಾಡುತ್ತಿದ್ದಾರೆ. ವೀಡಿಯೋದಲ್ಲಿ ಕೆಂಪು ಲೆಹೆಂಗಾವನ್ನು ಧರಿಸಿರುವ ವಧು ಕಿಟಕಿಯ ಬಳಿ ನಿಂತಿಕೊಂಡು ತನ್ನ ಭಾವಿ ಪತಿಗಾಗಿ ಕಾಯುತ್ತಿರುತ್ತಾಳೆ. ನಂತರ ಮದುವೆ ಮನೆಗೆ ವರನ ದಿಬ್ಬಣ ಬರುತ್ತಿದ್ದಂತೆ ಆತನನ್ನು ನೋಡುತ್ತಾ ವಧು ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಅಂಥ ವರನು ಸಹ ಶೆರ್ವಾನಿ ಧರಿಸಿದ್ದು, ಕುದುರೆಯ ಮೇಲೆ ಕುಳಿತು ತನ್ನ ಭಾವಿ ಹೆಂಡತಿಯನ್ನು ಪ್ರೀತಿಯಿಂದ ನೋಡುತ್ತಾ ನೃತ್ಯ ಮಾಡುತ್ತಿರುತ್ತಾನೆ.
Advertisement
View this post on Instagram
ಈ ವೇಳೆ ಸೋನು ನಿಗಮ್ ಮತ್ತು ಅಲ್ಕಾ ಯಾಗ್ನಿಕ್ ಅವರು ಹಾಡಿದ ‘ಚಲ್ ಪ್ಯಾರ್ ಕರೇಗಿ’ ಸಾಂಗ್ ಪ್ಲೇ ಆಗುತ್ತಿದ್ದು, ನಂತರ ವಧು-ವರ ಒಬ್ಬರನೊಬ್ಬರು ನೋಡಿಕೊಂಡು ಕೊಟ್ಟ ರಿಯಾಕ್ಷನ್ ನೋಡಿ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ಕೊರಗರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇನೆ: ಸುನಿಲ್ ಕುಮಾರ್
ಈ ವೀಡಿಯೋ ನೋಡಿದ ನೆಟ್ಟಿಗರು ತಮ್ಮ ಮದುವೆಯ ದಿನಗಳನ್ನು ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಈ ವೀಡಿಯೋ ನೋಡಿದರೆ ಅವರಿಬ್ಬರು ಎಷ್ಟು ಪ್ರೀತಿಸುತ್ತಾರೆ ಎಂಬುದು ಅರ್ಥವಾಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.