ಲಕ್ನೋ: ಮೆರವಣಿಗೆ ವೇಳೆ ಜನರೇಟರ್ ಆಫ್ ಆಗಿದಕ್ಕೆ ಮದುವೆ ಮನೆ ರಣರಂಗವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವಧು-ವರ ಕಡೆಯವರು ಪರಸ್ಪರ ಕಿತ್ತಾಟ ನಡೆಸಿದ್ದು, ಈ ವೇಳೆ ವರ ಮತ್ತು ಆತನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಕಾರಣಕ್ಕೆ ವಧು ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ವರ ಅಳಲು ತೊಡಿಕೊಂಡಿದ್ದಾನೆ.
पीलीभीत के मुड़िया बिलहरा में शादी के दौरान अचानक जनरेटर बंद होने जैसी बात पर घराती और बारातियों के बीच जमकर मारपीट हो गई. इस दौरान दूल्हा और उसके दोस्त गंभीर रूप से घायल हो गए. जिसके बाद लड़की ने शादी से इनकार करते हुए बारात को उल्टे पैर बापस लौटा दिया.#UttarPradesh #Pilibhit pic.twitter.com/yOGiDGanes
— Nitesh Ojha (@niteshojha786) July 11, 2022
Advertisement
ಶಹಜಾಪುರ ಠಾಣಾ ಪ್ರದೇಶದಿಂದ ಪಿಲಿಭಿತ್‍ನ ಠಾಣಾ ಬಿಲ್ಸಂದಾ ಪ್ರದೇಶದ ಮುದಿಯ ಬಿಲ್ಹಾರ ಗ್ರಾಮಕ್ಕೆ ಮದುವೆ ಮೆರವಣೆ ಉತ್ತಮವಾಗಿ ಸಾಗಿತು. ನಂತರ ಎಲ್ಲರೂ ಕೂಡ ಊಟ ಮಾಡಿದರು. ಕಾರ್ಯಕ್ರಮ ಚೆನ್ನಾಗಿಯೇ ನಡೆಯುತ್ತಿತ್ತು. ಅಷ್ಟರಲ್ಲಿ ಜನರೇಟರ್ ಇದ್ದಕ್ಕಿದ್ದಂತೆ ಆಫ್ ಆಗಿದೆ. ಆಗ ಎರಡು ಮನೆಯವರ ನಡುವೆ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ವಧುವಿನ ಮನೆಯವರು ವರ ಹಾಗೂ ಆತನ ಸ್ನೇಹಿತರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ವೇಳೆ ಗ್ರಾಮಸ್ಥರು ಎರಡು ಕಡೆಯವರ ಜಗಳ ಬಿಡಿಸಿ ಸಮಾಧಾನ ಪಡಿಸಿದರು. ಮತ್ತೊಂದೆಡೆ ವಧು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ ಎಂದು ವರ ಪೊಲೀಸರಿಗೆ ದೂರು ನೀಡಿದ್ದಾನೆ. ಇದನ್ನೂ ಓದಿ: ಆಫರ್ ಬೆನ್ನಲ್ಲೇ ದಾಖಲೆ ಪ್ರಮಾಣದಲ್ಲಿ ರಷ್ಯಾದಿಂದ ತೈಲ ಖರೀದಿಸಿದ ಭಾರತ
Advertisement
Advertisement
ನಂತರ ಪೊಲೀಸ್ ಠಾಣೆಗೆ ಕುಟುಂಬಸ್ಥರೊಂದಿಗೆ ಬಂದ ವಧು, ಮದುವೆ ಮೆರವಣಿಗೆ ನಂತರ ವರನ ಕಡೆಯವರು ತನ್ನ ಸಹೋದರನನ್ನು ಕೊಲ್ಲುವುದಾಗಿ ಮಾತನಾಡುತ್ತಿದ್ದರು. ಹೀಗಾಗಿ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾಳೆ. ಅಲ್ಲದೇ ಪೊಲೀಸರ ಸಮ್ಮುಖದಲ್ಲಿಯೇ ವಧು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಕೊನೆಗೆ ವರ ಮತ್ತು ಆತನ ಕಡೆಯವರು ತಮ್ಮ ಗ್ರಾಮಕ್ಕೆ ಹಿಂದಿರುಗಿದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಜೊತೆ ಡಿಕೆಶಿ ತಾಯಿ ಮಾತಾಡಿದ್ದ ವೀಡಿಯೋ ಶೇರ್ ಮಾಡ್ಕೊಂಡು ಸಿದ್ದುಗೆ ಬಿಜೆಪಿ ಟಾಂಗ್