Saturday, 21st July 2018

Recent News

ಪ್ರೀತಿಸಿ ಮದ್ವೆಯಾಗಿ ಪತಿ ಮನೆಗೆ ತೆರಳ್ತಿದ್ದಾಗ ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಓಡಿದ ವಧು!

ಪಾಟ್ನಾ: ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿ ಆತನ ಮನೆಗೆ ಹೋಗುವಾಗ ವಧು ಕಾರಿನಿಂದ ಜಿಗಿದು ವರನ ವಿರುದ್ಧ ಅತ್ಯಾಚಾರದ ದೂರನ್ನು ದಾಖಲಿಸಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.

ವರದಿಗಳ ಪ್ರಕಾರ ವಧು-ವರ ಇಬ್ಬರೂ ಬಾಲ್ಯ ಸ್ನೇಹಿತರಾಗಿದ್ದು, 2012ರಿಂದ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ನಂತರ ಫೆಬ್ರವರಿ 9ರಂದು ಸಂಪ್ರದಾಯದಂತೆ ಮದುವೆಯಾಗಿದ್ದರು. ಮದುವೆ ಆದ ಮಾರನೇ ದಿನ ವಧು ತನ್ನ ಪತಿ ಹಾಗೂ ಕುಟುಂಬದ ವಿರುದ್ಧ ಅತ್ಯಾಚಾರ ಹಾಗೂ ವರದಕ್ಷಿಣೆ ಕೇಸನ್ನು ದಾಖಲಿಸಿದ್ದಾಳೆ.

 ಫೆಬ್ರವರಿ 9ರ ರಾತ್ರಿ ಮದುವೆ ನಡೆದಿದ್ದು, ಮಾರನೇ ದಿನ ಪತಿ, ಪತ್ನಿಯ ತವರು ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ದಾರಿ ಮಧ್ಯೆದಲ್ಲಿ ವಧು ಕಾರಿನಿಂದ ಜಿಗಿದು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಪೊಲೀಸ್ ಠಾಣೆಗೆ ಹೋದ ನಂತರ ತನ್ನ ಪತಿ ವೈಭವ್, ಆತನ ಸಹೋದರ ಸೌರಬ್ ಆನಂದ್, ತಂದೆ ಅಲೋಕ್ ಕುಮಾರ್ ಹಾಗೂ ವರನ ಮಾವ ವಿರುದ್ಧ ದೂರು ನೀಡಿ ಕೇಸ್ ದಾಖಲಿಸಿದ್ದಾಳೆ.

ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿರುವಾಗ ಕಾರಿನಲ್ಲಿ ಪತಿ ಹಾಗೂ ನನ್ನ ನಡುವೆ ಜಗಳವಾಗಿತ್ತು. ಆಗ ವೈಭವ್‍ನನ್ನ ಕುತ್ತಿಗೆ ಬಿಗಿದು ಕೊಲ್ಲಲು ಯತ್ನಿಸಿದ್ದನು. ನಾನು ಜಿಗಿದು ಓಡಿ ಹೋಗಲು ಪ್ರಯತ್ನಿಸುವಾಗ ಕಾರು ಚಲಾಯಿಸುತ್ತಿದ್ದ ವೈಭವ್‍ನ ಮಾವ ಲಾಕ್ ಮಾಡಲು ಪ್ರಯತ್ನಿಸಿದ್ದ. ಅಷ್ಟೇ ಅಲ್ಲದೇ ನನ್ನ ಮೈಮೇಲೆ ಇರುವ ಚಿನ್ನಾಭರಣವನ್ನು ದೋಚಲು ಪ್ರಯತ್ನಿಸಿದ್ದರು ಎಂದು ವಧು ಆರೋಪಿಸಿದ್ದಾಳೆ.

ಮದುವೆಯ ವೇಳೆ ದುಬಾರಿ ಕಾರನ್ನು ವರದಕ್ಷಿಣೆಯಾಗಿ ನೀಡಲು ಹೇಳಿದ್ದರು. ಅಷ್ಟೇ ಅಲ್ಲದೇ ಜಾತಿಯ ಬಗ್ಗೆ ನಿಂದಿಸಿದ್ದರು. 25ಲಕ್ಷ ರೂ. ಗಿಫ್ಟ್ ಆಗಿ ನೀಡಲು ಹೇಳಿದ್ದರು. ಆದರೆ ನಾವು ವರದಕ್ಷಿಣೆ ನೀಡಲು ನಿರಾಕರಿಸಿದ್ವಿ. ಇದರಿಂದ ವರ ಹಸಮಣೆಯಿಂದ ಓಡಿ ಹೋಗಲು ಪ್ರಯತ್ನಿಸುತ್ತಿದ್ದ. ಹಾಗಾಗಿ ಆತನ ವಿರುದ್ಧ ಅತ್ಯಾಚಾರದ ಆರೋಪವನ್ನು ವದು ನೀಡಿದ್ದಾಳೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ವರ ಹಾಗೂ ವಧು ಇಬ್ಬರೂ ಒಪ್ಪಿಕೊಂಡು 2012ರಲ್ಲೇ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಹೀಗಿರುವಾಗ ಸುಳ್ಳು ಅತ್ಯಾಚಾರದ ಕೇಸ್ ದಾಖಲಿಸಿದ್ದಾಳೆ ಎಂದು ವೈಭವ್ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇಬ್ಬರೂ ಶಾಲಾ ದಿನಗಳಿಂದ ಸ್ನೇಹಿತರು. ವೈಭವ್ ಮಧ್ಯಮ ವರ್ಗದ ಕುಟುಂಬದವನಾಗಿದ್ದರೆ, ಹುಡುಗಿ ಹೈ ಪ್ರೊಫೈಲ್ ಕುಟುಂಬದವಳು ಎಂದು ವರದಿಯಾಗಿದೆ.

ವೈಭವ್ ದೆಹಲಿಯ ಏರ್ ಲೈನ್ಸ್ ಕಂಪನಿಯಲ್ಲಿ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದು, 2012ರಲ್ಲಿ ಇಬ್ಬರೂ ಒಪ್ಪಿಕೊಂಡು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ಫೆ. 09 ರಂದು ಇಬ್ಬರ ಕುಟುಂಬದವರ ಒಪ್ಪಿಗೆ ಪಡೆದು ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿದ್ದರು.

Leave a Reply

Your email address will not be published. Required fields are marked *