ಚಾಮರಾಜನಗರ: ಮದುವೆಗೆ ಆಗಮಿಸದೇ ತಾವು ಇರುವ ಸ್ಥಳದಿಂದಲೇ ಆಶೀರ್ವದಿಸಿ ಹೀಗೊಂದು ವಿಶಿಷ್ಟವಾದ ಕರೆಯೋಲೆಯನ್ನು ವಧು ವರನ ಕುಟುಂಬದವರು ತಮ್ಮ ಬಂಧು ಬಳಗದವರಿಗೆ, ನೆಂಟರಿಷ್ಟರಿಗೆ, ಗ್ರಾಮಸ್ಥರಿಗೆ ಕಳುಹಿಸಿದ್ದಾರೆ.
Advertisement
ಹೌದು ಕೊರೊನಾ ಹರಡುವ ಹಾಗೂ ಸರ್ಕಾರದ ಮಾರ್ಗ ಸೂಚಿಗಳನ್ನು ಪಾಲಿಸುವ ಹಿನ್ನಲೆಯಲ್ಲಿ ಈಗಾಗಲೇ ಮದುವೆಗೆ ಆಮಂತ್ರಿತರಾದವರು ಬರುವುದು ಬೇಡ, ನೀವು ಇರುವ ಸ್ಥಳದಿಂದಲೇ ನೂತನ ವಧುವರರನ್ನು ಹಾರೈಸಿ ಎಂದು ಹೊಸ ಆಮಂತ್ರಣ ಪತ್ರ ಕಳುಹಿದ್ದಾರೆ. ಚಾಮರಾಜನಗರ ತಾಲೂಕಿನ ವಿ.ಸಿ.ಹೊಸೂರು ಗ್ರಾಮದ ಸುಷ್ಮಾ ಹಾಗೂ ಇದೇ ತಾಲೂಕಿನ ಚನ್ನಪ್ಪನಪುರದ ಶ್ರೇಯಸ್ ಅವರ ಮದುವೆ ಜನವರಿ 22 ಹಾಗೂ 23 ರಂದು ನಿಗದಿಯಾಗಿದೆ. ಇದನ್ನೂ ಓದಿ: ಬ್ಯಾಟ್ ಔಟ್ ಆಫ್ ಹೆಲ್ ಆಲ್ಬಂ’ನ ಯುಎಸ್ ರಾಕ್ ಸ್ಟಾರ್ ಮೀಟ್ ಲೋಫ್ ಇನ್ನಿಲ್ಲ
Advertisement
Advertisement
ಈ ಮದುವೆಗೆ ಆಗಮಿಸುವಂತೆ ನೆಂಟರಿಷ್ಟರಿಗೆ, ಬಂಧು, ಬಳಗಕ್ಕೆ, ಗ್ರಾಮಸ್ಥರಿಗೆ ಎರಡು ಕಡೆಯವರು ಮೂರು ಸಾವಿರಕ್ಕೂ ಹೆಚ್ಚು ಲಗ್ನಪತ್ರಿಕೆ ಹಂಚಿದ್ದರು. ಆದರೆ ಇತ್ತೀಚೆಗೆ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಎರಡೂ ಕುಟುಂಬಗಳು ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಈಗ ಮತ್ತೊಂದು ಆಮಂತ್ರಣ ಪತ್ರ ಕಳುಹಿಸಿ ಮದುವೆಗೆ ಆಗಮಿಸದೆ ತಾವು ಇರುವ ಸ್ಥಳದಿಂದಲೇ ವಧುವರರನ್ನು ಆಶೀರ್ವದಿಸಿ ಎಂದು ಮನವಿ ಮಾಡಿವೆ. ಫೇಸ್ ಬುಕ್, ವಾಟ್ಸ್‌ಪ್ ಬಳಸದ ನೆಂಟರಿಷ್ಟರು ಹಾಗೂ ಬಂಧು, ಬಳಗದವರಿಗೆ ನೇರವಾಗಿ ಫೋನ್‍ನಲ್ಲಿ ಕರೆ ಮಾಡಿ ಮನವಿ ಮಾಡುತ್ತಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಎದುರೇ ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಯತ್ನ