-ಇಬ್ಬರ ಹೆಜ್ಜೆಗೆ ನೆಟ್ಟಿಗರು ಕ್ಲೀನ್ಬೋಲ್ಡ್
ಚಂಡೀಗಢ: ಪಂಜಾಬಿನ ವಧು ಮತ್ತು ವರ ಡ್ಯಾನ್ಸ್ ಮಾಡಿರುವ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ನೆಟ್ಟಗರ ಮನ ಕದ್ದಿದೆ. ಉತ್ತರ ಭಾರತದ ಮದುವೆಗಳಲ್ಲಿ ವಧು-ವರ ಸೇರಿದಂತೆ ಎಲ್ಲರೂ ಸಂತೋಷದಿಂದ ಹೆಜ್ಜೆ ಹಾಕುತ್ತಾರೆ. ಇಂತಹ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ.
ಪಂಜಾಬ್ ಮದುವೆ ಅಂದ್ರೆ ಅಲ್ಲಿ ಗಾನಾ-ಬಜಾನಾ ಫಿಕ್ಸ್. ಅದರಲ್ಲಿ ಸಂಗೀತ್ ಎಂದು ಮನರಂಜನೆಗಾಗಿ ಒಂದು ದಿನವನ್ನು ಮೀಸಲಿರಿಸಲಾಗುತ್ತದೆ. ಈ ಸಂಗೀತ್ ನಲ್ಲಿ ವರ-ವಧು ಸಂಬಂಧಿಕರು ಒಬ್ಬರಿಗೊಬ್ಬರು ಸವಾಲ್ ಹಾಕಿ ತಮ್ಮ ತಂಡದೊಂದಿಗೆ ಹೆಜ್ಜೆ ಹಾಕುತ್ತಾರೆ. ಡ್ಯಾನ್ಸ್ ಮಾಡುವ ವೇಳೆ ವಧು-ವರನನ್ನು ಕರೆತರುತ್ತಾರೆ. ಇದೀಗ ಅಂತಹುದೇ ಒಂದು ಡ್ಯಾನ್ಸ್ ವಿಡಿಯೋ ಮೆಚ್ಚುಗೆಗೆ ಪಾತ್ರವಾಗಿದೆ.
Advertisement
ಪ್ರತಿಷ್ಠಾ ಅರೋರಾ ಎಂಬವರು ತಮ್ಮ ಮದುವೆಯ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವಧು ಪ್ರತಿಷ್ಠಾ ಬಿಂದಾಸ್ ಅಗಿ ಹೆಜ್ಜೆ ಹಾಕುತ್ತಿದ್ದರೆ, ವರ ಸಾಹಿಲ್ ಮಾತ್ರ ಕ್ಯೂಟ್ ಕ್ಯೂಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಮಾತ್ರ ವರನ ಡ್ಯಾನ್ಸ್ ನೋಡಿ ಫಿದಾ ಆಗಿದ್ದಾರೆ.