ಡೆಹ್ರಾಡೂನ್: ವರನ (Groom) ಮನೆಯವರು ಉಡುಗೊರೆಯಾಗಿ ನೀಡಿದ್ದ ಲೆಹೆಂಗಾ (Lehenga) ಇಷ್ಟವಾಗದ್ದಕ್ಕೆ ವಧುವೊಬ್ಬಳು (Bride) ಮದುವೆಯನ್ನು (Wedding) ರದ್ದುಗೊಳಿಸಿದ ವಿಲಕ್ಷಣ ಘಟನೆ ಉತ್ತರಾಖಂಡದ ಹಲ್ದ್ವಾನಿಯಲ್ಲಿ ನಡೆದಿದೆ.
ಉತ್ತರಾಖಂಡದ ಹಲ್ದ್ವಾನಿಯ ಹೆಲ್ತ್ ಕೇರ್ ವೃತ್ತಿಯಲ್ಲಿ ಕೆಲಸ ಮಾಡುವ ರಾಣಿಖೇತ್ ಮೂಲದ ಹುಡುಗನೊಂದಿಗೆ ಹುಡುಗಿಯ ಮದುವೆಯನ್ನು ನಿಶ್ಚಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮದುವೆಗೂ ಮೊದಲು ವರನ ತಂದೆ ಲಕ್ನೋದಿಂದ 10,000 ರೂ. ಮೌಲ್ಯದ ಲೆಹಂಗಾವನ್ನು ಸೊಸೆಯಾಗಿ ಬರುವವಳಿಗೆ ಎಂದು ಆರ್ಡರ್ ಮಾಡಿದ್ದರು. ಈ ಆರ್ಡರ್ ಅನ್ನು ನೇರವಾಗಿ ವಧು ಮನೆಗೆ ಕಳುಸಿದ್ದರು.
Advertisement
Advertisement
ಆ ಲೇಹಂಗಾವನ್ನು ನೋಡಿದ ವಧುಗೆ ಇಷ್ಟವಾಗಿರಲಿಲ್ಲ. ಈ ಬಗ್ಗೆ ವಧು ಕಡಿಮೆ ಕ್ವಾಲಿಟಿಯ ಲೆಹಂಗಾ ಎಂದು ಜಗಳ ತೆಗೆದಿದ್ದಾಳೆ. ಈ ಜಗಳವೇ ಉಲ್ಬಣಗೊಂಡಿದ್ದು, ವಧು ತನ್ನ ನಿಶ್ಚಿತ ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಹಲ್ದ್ವಾನಿ ಪೊಲೀಸರ ಗಮನಕ್ಕೂ ತರಲಾಯಿತು. ಹಲ್ದ್ವಾನಿ ಪೊಲೀಸರು ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಿದರೂ ಎಲ್ಲ ಪ್ರಯತ್ನಗಳು ವಿಫಲವಾದವು. ಅದಾದ ಬಳಿಕ 2 ಕುಟುಂಬಗಳ ಸಮ್ಮತಿ ಮೇರೆಗೆ ಮದುವೆಯನ್ನು ರದ್ದುಗೊಳಿಸಲಾಯಿತು. ಇದನ್ನೂ ಓದಿ: ವೇದಿಕೆಯಲ್ಲಿಯೇ ಅನಾರೋಗ್ಯಕ್ಕೀಡಾದ ಸಚಿವ ನಿತಿನ್ ಗಡ್ಕರಿ
Advertisement
ಈ ವರ್ಷ ಜೂನ್‌ನಲ್ಲಿ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೇ ತಿಂಗಳು ಮದುವೆಯನ್ನು ನಿಗದಿಪಡಿಸಲಾಗಿತ್ತು, ಇದಕ್ಕಾಗಿ ವರನ ಕುಟುಂಬವು ಈಗಾಗಲೇ ಕಾರ್ಡ್‌ಗಳನ್ನು ಮುದ್ರಿಸಿದ್ದರು. ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ ಹಗರಣದಲ್ಲಿ CM ಸೇರಿ ಬಿಜೆಪಿಯ ಹಿರಿಯ ಸಚಿವರೆಲ್ಲರೂ ಭಾಗಿಯಾಗಿದ್ದಾರೆ: ಸಿದ್ದರಾಮಯ್ಯ