LatestLeading NewsMain PostNational

ವೇದಿಕೆಯಲ್ಲಿಯೇ ಅನಾರೋಗ್ಯಕ್ಕೀಡಾದ ಸಚಿವ ನಿತಿನ್ ಗಡ್ಕರಿ

ಕೋಲ್ಕತ್ತಾ: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಯವರು ವೇದಿಕೆಯಲ್ಲಿಯೇ ಅನಾರೋಗ್ಯಕ್ಕೊಳಗಾದ ಘಟನೆ ಉತ್ತರ ಬಂಗಾಳದಲ್ಲಿ ನಡೆದಿದೆ.

ಶಿವಮಂದಿರದಿಂದ ಸೇವಕ್ ಕಂಟೋನ್ಮೆಂಟ್ ವರೆಗಿನ ರಸ್ತೆಯ ಶಂಕು ಸ್ಥಾಪನೆ ಮಾಡಲು ಕೇಂದ್ರ ಸಚಿವರು ಸಿಲಿಗುರಿಗೆ ಬಂದಿದ್ದರು. ಕಾರ್ಯಕ್ರಮವನ್ನು ಡಾರ್ಜಿಲಿಂಗ್ ಜಂಕ್ಷನ್ ಬಳಿ ದಗಾಪುರ್ ಮೈದಾನದಲ್ಲಿ ಆಯೋಜಿಸಲಾಗಿತ್ತು. ಹೀಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಚಿವರು ವೇದಿಕೆ ಮೇಲೆ ಕುಳಿತಿದ್ದರು.

ಆಗ ಏಕಾಏಕಿ ಅನಾರೋಗ್ಯ (Sick) ಕ್ಕೀಡಾದರು. ಕೂಡಲೇ ವೇದಿಕೆಯ ಹಿಂದಿನ ಗ್ರೀನ್ ರೂಮ್‍ಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಿಲಿಗುರಿಯಿಂದ ಗ್ರೀನ್ ಕಾರಿಡಾರ್ ಮೂಲಕ ಓರ್ವ ವೈದರನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಯಿತು. ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡ ಬಳಿಕ ಡಾರ್ಜಿಲಿಂಗ್ ಸಂಸದ ರಾಜು ಬಿಸ್ತಾ ಅವರು ಸಚಿವರನ್ನು ಮನೆಗೆ ಕರೆದುಕೊಂಡು ಹೋದರು.

ಗಡ್ಕರಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಇಳಿದಿದೆ. ಹೀಗಾಗಿ ವೈದ್ಯರ ಸೂಚನೆಯಂತೆ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಮನೆಯಲ್ಲಿಯೇ ಚಿಕಿತ್ಸೆ ನಡೆಯುತ್ತಿದ್ದು, ವೈದ್ಯರು ಕೂಡ ಅಲ್ಲಿಯೇ ಇದ್ದಾರೆ. ಇದನ್ನೂ ಓದಿ: ಮಾಜಿ ಸಂಸದನ ಮೇಲೆ ಅರ್ಚಕನ ವೇಷ ಧರಿಸಿದ್ದ ವ್ಯಕ್ತಿಯಿಂದ ಹಲ್ಲೆ

Live Tv

Leave a Reply

Your email address will not be published. Required fields are marked *

Back to top button