ಮದುವೆಯ ಆರತಕ್ಷತೆಯ ವೆಚ್ಚವನ್ನು ಭರಿಸಲು ಆಗದೇ ವಧು ತನ್ನ ಅತಿಥಿಗಳಿಗೆ ಅಂದಾಜು 7,370ರೂ. (ಅಮೇರಿಕನ್ ಡಾಲರ್ 99)ಗಳನ್ನು ಪಾವತಿಸುವಂತೆ ಕೇಳಿದ್ದಾರೆ.
ಈ ವಿಚಿತ್ರ ಘಟನೆ ಕುರಿತಂತೆ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನು ಕೆಲ ದಿನಗಳ ಹಿಂದೆ ಮದುವೆಯೊಂದಕ್ಕೆ ಹೋಗಿದ್ದೆ. ಈ ವೇಳೆ ಆರತಕ್ಷತೆಗೆ ಆಗಮಿಸಿದ ಅತಿಥಿಗಳಿಗೆಲ್ಲಾ ವಧು 7,300 ರೂಪಾಯಿಯನ್ನು ಪಾವತಿಸಿ ಊಟ ಮಾಡುವಂತೆ ಹೇಳಿದಳು. ಕಾರಣ ವಧು ಮತ್ತು ವರ ಮದುವೆಗೆ ಹಣ ಖರ್ಚು ಮಾಡಲು ಶಕ್ತರಾಗಿರಲಿಲ್ಲ.
Advertisement
Advertisement
ಆಹ್ವಾನ ಪತ್ರಿಕೆಯಲ್ಲಿ ವಧು, ತನಗೆ ಊಟದ ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲ. ಹಾಗಾಗಿ ಮದುವೆಗೆ ಆಗಮಿಸುವ ಅತಿಥಿಗಳು ತಮ್ಮ ಊಟದ ಬಿಲ್ ಪಾವತಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು, ಮದುವೆಗೆ ಆಗಮಿಸುವ ಅತಿಥಿಗಳಿಗೆ 7,300 ರೂಪಾಯಿ ಕೇಳಿದ್ದರು. ಇದನ್ನೂ ಓದಿ: ಕೇರಳದಲ್ಲಿ 13 ನೊರೊವೈರಸ್ ಪ್ರಕರಣ ಪತ್ತೆ – ನೀರಿನಿಂದ ಹರಡುವ ಹೊಸ ಕಾಯಿಲೆ
Advertisement
Advertisement
ಮದುವೆ ಸಮಾರಂಭ ಮನೆಯಿಂದ ದೂರದಲ್ಲಿದ್ದು, 4 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಯಿತು. ಹೆಚ್ಚು ಸಮಯದ ಜೊತೆಗೆ ಪೆಟ್ರೋಲ್ ಹಾಗೂ ಹಣ ಕೂಡ ವ್ಯಯ ಮಾಡಲಾಯಿತು. ಅಲ್ಲದೇ ಮದುವೆಯಲ್ಲಿ ಊಟ ಮಾಡಲು ನಮ್ಮ ಹಣವನ್ನೇ ಪಾವತಿಸಬೇಕಾಯಿತು. ಮದುವೆ ದಿನ ವೇದಿಕೆ ಮುಂಭಾಗ ಬಾಕ್ಸ್ ಇಟ್ಟು ಡಬ್ಬದ ಮೇಲೆ ಅತಿಥಿಗಳಿಗೆ ಹಣ ಹಾಕುವಂತೆ ಮನವಿ ಮಾಡಲಾಗಿತ್ತು. ಜೋಡಿಯ ಹನಿಮೂನ್ ಮತ್ತು ಒಳ್ಳೆಯ ಭವಿಷ್ಯ ಹಾಗೂ ಹೊಸ ಮನೆಗಾಗಿ ಹಣ ನೀಡಬೇಕೆಂದು ಡಬ್ಬದ ಮೇಲೆ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್‍ಗೆ ಹೊಸ ಟ್ವಿಸ್ಟ್ – ಸೀಜೇ ಮಾಡಿಲ್ಲವೆಂದು ಕೋರ್ಟಿಗೆ ಸಿಸಿಬಿ ರಿಪೋರ್ಟ್
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಹಲವಾರು ಮಂದಿ ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ತಾವು ಅಂತಹ ಮದುವೆಗೆ ಹೋಗುವುದಿಲ್ಲ ಎಂದರೆ ಮತ್ತೆ ಕೆಲವರು ಅದ್ದೂರಿಯಾಗಿ ಮದುವೆಯಾಗಲು ಸಾಧ್ಯವಾಗದಿದ್ದರೆ ಸರಳವಾಗಿ ವಿವಾಹವಾಗಬಹುದಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.