ಮದುವೆಗೆ ಹೇಳಿ ಮಾಡಿಸಿದೆ ಈ ಮೂರು ವಿಧದ ಸೀರೆಗಳು

Public TV
3 Min Read
silk saree

ದುವೆಯ ಸಂದರ್ಭದಲ್ಲಿ ಯಾವ ರೀತಿಯ ಉಡುಗೆ ತೊಡಬೇಕೆಂಬುವುದು ಪ್ರತಿಯೊರ್ವ ಮಹಿಳೆಯ ಆಯ್ಕೆಯಾಗಿರುತ್ತದೆ. ನಮ್ಮ ದೇಶದಲ್ಲಿ ಲೆಹೆಂಗಾ ಮತ್ತು ಸೀರೆಗಳು ಮದುವೆ ಸಮಾರಂಭಗಳಲ್ಲಿ ಹೆಚ್ಚಾಗಿ ಧರಿಸುವ ಜನಪ್ರಿಯ ಉಡುಗೆಗಳಾಗಿದೆ. ಕೆಲವು ಮಹಿಳೆಯರು ಮದುವೆ ವೇಳೆ ಲೆಹೆಂಗಾ ಆಯ್ಕೆ ಮಾಡಿಕೊಂಡರೆ, ಮತ್ತೆ ಕೆಲವರು ಸೀರೆಗೆ ಹೆಚ್ಚಾಗಿ ಆದ್ಯತೆ ನೀಡುತ್ತಾರೆ.

silk saree

ಅದರಲ್ಲಿಯೂ ರೇಷ್ಮೆ ಸೀರೆ ನಮ್ಮ ದೇಶದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ರೇಷ್ಮೆ ಸೀರೆಗಳು ಪ್ರತಿಯೊಂದು ಭಾಗದ ವೈವಿಧ್ಯಮಯತೆಯನ್ನು ಮತ್ತು ಅನೇಕ ಸಂಸ್ಕೃತಿಯನ್ನು ಸೂಚಿಸುತ್ತದೆ. ಆದರೆ ಮದುವೆಯ ಸಮಯದಲ್ಲಿ ವಧುವಿಗೆ ಎಂತಹ ರೇಷ್ಮೆ ಸೀರೆ ಸೂಟ್ ಆಗುತ್ತದೆ, ಯಾವ ರೀತಿ ಡಿಸೈನ್ ರೇಷ್ಮೆ ಸೀರೆಯನ್ನು ಖರೀದಿಸಬೇಕು ಎಂಬ ಬಗ್ಗೆ ಅನೇಕ ಮಂದಿಯಲ್ಲಿ ಗೊಂದಲವಿರುತ್ತದೆ. ಅಂತವರಿಗೆ ಒಂದಷ್ಟು ಜನಪ್ರಿಯ ರೇಷ್ಮೆ ಸೀರೆಗಳ ಕುರಿತಂತೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

silk saree

ಕಾಂಚೀಪುರಂ ರೇಷ್ಮೆ ಸೀರೆಗಳು:
ಕಂಚಿ ದಕ್ಷಿಣ ಭಾರತದ ಫೇಮಸ್ ಹಳ್ಳಿಯಾಗಿದ್ದು, ಇದು ರೇಷ್ಮೆ ಸೀರೆಗಳಿಗೆ ಹೆಸರುವಾಸಿಯಾಗಿದೆ. ಕಾಂಚೀಪುರಂ ರೇಷ್ಮೆ ಸೀರೆಯನ್ನು ಹಿಪ್ಪು ನೇರಳೆ ರೇಷ್ಮೆಯಿಂದ ತಯಾರಿಸಲಾಗಿದ್ದು, ಬೆಳ್ಳಿ ಮತ್ತು ಚಿನ್ನದ ಜರಿಯಿಂದ ನೇಯ್ಯಲಾಗುತ್ತದೆ. ಕಂಚಿಯಲ್ಲಿ ಮಾತ್ರ ಈ ರೀತಿಯ ವಿಶಿಷ್ಟವಾದ ಸೀರೆಯನ್ನು ನೇಯ್ಯಲಾಗುತ್ತದೆ. ಇದರಲ್ಲಿ ಹಲವಾರು ವೆರೈಟಿ ಡಿಸೈನ್‍ಗಳಿದ್ದು, ಸಖತ್ ರಿಚ್ ಆಗಿ ಕಾಣಿಸುತ್ತದೆ ಮತ್ತು ಕೈಗೆಟಕುವ ಬೆಲೆಯಲ್ಲಿ ಸಹ ದೊರೆಯುತ್ತದೆ.

Silk Sarees

ಕಾಂಚೀಪುರಂ ಸೀರೆಯಲ್ಲಿ ಸಾಮಾನ್ಯವಾಗಿ ಭಾರತದ ಪ್ರಾಚೀನ ದೇವಾಲಯಗಳ ಡಿಸೈನ್, ನಾಣ್ಯ, ಹೂವು ಮತ್ತು ಪಟ್ಟೆಗಳಂತಹ ಹಲವಾರು ಡಿಸೈನ್‍ಗಳಿರುವುದನ್ನು ಕಾಣಬಹುದಾಗಿದೆ. ಅದರಲ್ಲಿ ವಿಶೇಷವೆಂದರೆ ಈ ಸೀರೆಗಳಲ್ಲಿರುವ ಪಲ್ಲು ಹೈಲೆಟ್ ಆಗಿ ಕಾಣಿಸುತ್ತದೆ. ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲುವವರೆಗೂ ರಾಜ್ಯ ವಿಧಾನಸಭೆಗೆ ಕಾಲಿಡಲ್ಲ: ಎನ್.ಚಂದ್ರಬಾಬು ನಾಯ್ಡು ಪ್ರತಿಜ್ಞೆ

Silk Sarees

ಬನಾರಸಿ ರೇಷ್ಮೆ ಸೀರೆಗಳು:
ಬನಾರಸಿ ಸೀರೆಗಳು ಉತ್ತರ ಪ್ರದೇಶದ ವಾರಣಾಸಿಯಲ್ಲಿ ದೊರೆಯುತ್ತದೆ. ಈ ಹಿಂದೆ ವಾರಣಾಸಿಯನ್ನು ಬನಾರಸಿ ಎಂದು ಕರೆಯಲಾಗುತ್ತಿತ್ತು. ಬನಾರಸಿ ಸೀರೆಗಳಿಗೆ ಅದರದೇ ಆದ ಇತಿಹಾಸವಿದೆ ಎಂದು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ರೇಷ್ಮೆಯಿಂದ ತಯಾರಿಸಿರುವ ಬನರಾಸಿ ಸೀರೆಯಲ್ಲಿ ವೆರೈಟಿ ಕಲೆಕ್ಷನ್, ಆಕರ್ಷಕವಾದ ಬಣ್ಣ, ಹೈಲೆಟ್ ಆಗಿ ಕಾಣಿಸುವಂತಹ ಜರಿಗಳಿಂದ ತಯಾರಿಸಲಾಗಿದೆ.

Silk Sarees 2

ಬನಾರಸಿ ಸೀರೆಗಳ ಮುಖ್ಯಾಂಶಗಳೆಂದರೆ ಅವುಗಳನ್ನು ಚಿನ್ನ ಮತ್ತು ಬೆಳ್ಳಿಯ ಜರಿಯಿಂದ ನೇಯ್ಯಲಾಗಿದೆ. ಇವುಗಳನ್ನು ಮೊಘಲರಿಂದ ಪ್ರೇರಿತಗೊಂಡು ವಿನ್ಯಾಸಗೊಳಿಸಿರುವ ಸೀರೆಗಳಾಗಿದೆ. ಈ ಸೀರೆಗಳನ್ನು ನಿಜವಾದ ಚಿನ್ನ ಮತ್ತು ಬೆಳ್ಳಿಯ ಎಳೆಗಳಿಂದ ಕೂಡ ತಯಾರಿಸಲಾಗುತ್ತದೆ. ಈ ರೀತಿಯ ಸೀರೆಯನ್ನು ದೇಶಾದ್ಯಂತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಕೂಡ ಮಾರಾಟ ಮಾಡಲಾಗುತ್ತದೆ.

Silk Sarees

ಬನಾರಸಿ ಸೀರೆಗಳು ರಾಯಲ್ ಲುಕ್ ನೀಡುವುದರ ಜೊತೆಗೆ ವಧುವಿಗೆ ಪರ್ಫೆಕ್ಟ್ ಲುಕ್ ನೀಡುತ್ತದೆ ಜೊತೆಗೆ ಗ್ರ್ಯಾಂಡ್ ಆಗಿ ಕಾಣಿಸುತ್ತದೆ. ಇದನ್ನೂ ಓದಿ: ಹೆಸರುವಾಸಿಯಾಗಿದ್ದ ಕೇರಳದ ಟೀ ಮಾರಾಟಗಾರ ನಿಧನ

Silk Sarees

ಮದುವೆ ಸಮಾರಂಭಕ್ಕೆ ಎಂದೇ ಹಲವಾರು ಬನಾರಸಿ ಸೀರೆಗಳಿದ್ದು, ಅವುಗಳಲ್ಲಿ ರೇಷ್ಮೆ ಸೀರೆ, ಕಟಾನ್ ಸೀರೆ, ಜರಿ ಬ್ರೊಕೇಡ್‍ನೊಂದಿಗೆ ಆರ್ಗನ್ಜಾ ಬನಾರಸಿ ಸೀರೆ, ಎರಡು-ಟೋನ್ ಬ್ರೋಕೇಡ್ ಅನ್ನು ಒಳಗೊಂಡಿರುವ ಬ್ಯುಟಿದಾರ್ ಬನಾರಸಿ ಸೀರೆಗಳು, ಹಗುರವಾದ ಜಾರ್ಜೆಟ್ ಬನಾರಸಿ ಸೀರೆಗಳು ಮತ್ತು ಜಂಗ್ಲಾ ಬನಾರಸಿ ಸೀರೆ ಹೀಗೆ ಹಲವಾರು ಫೇಮಸ್ ಸೀರೆಗಳಿದೆ.

Silk Sarees

ಮಾಡ್ರೆನ್ ಕಾಕ್‍ಟೈಲ್ ಮದುವೆಯ ಸೀರೆ:
ಹಿಂದೆ ಆರತಕ್ಷತೆ ಕಾರ್ಯಕ್ರಮದ ವೇಳೆ ಕೂಡ ಸಂಪ್ರದಾಯಿಕ ರೇಷ್ಮೆ ಸೀರೆಗಳನ್ನು ವಧು ಧರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಆರತಕ್ಷತೆ ಕಾರ್ಯಕ್ರಮದಲ್ಲಿ ಧರಿಸಲು ವಧು ಕಾಕ್‍ಟೈಲ್ ಸೇರೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಾಡ್ರೆನ್ ಸೀರೆಗಳಲ್ಲಿ ಹಲವಾರು ಶೈಲಿಯ ಸೀರೆಗಳನ್ನು ಭಾರತೀಯ ವಿನ್ಯಾಸಕರು ವಿನ್ಯಾಸಗೊಳಿಸಿದ್ದಾರೆ.

silk saree

ಮೆಟಾಲಿಕ್ ಸುಕ್ಕುಗಟ್ಟಿದ ಲುರೆಕ್ಸ್ ಫ್ಯಾಬ್ರಿಕ್‍ನಂತಹ ಸೀರೆ ಮಾದರಿ ಗೌನ್‍ಗಳಿದ್ದು, ಇವುಗಳನ್ನು ಉಡುಪಿನಂತೆ ಸುಲಭವಾಗಿ ಧರಿಸಬಹುದು ಮತ್ತು ಜಿಪ್ ಮೂಲಕ ಫಿಟ್‍ಗೊಳಿಸಬಹುದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *