ಭೋಪಾಲ್: ಕೆಲವೊಮ್ಮೆ ಅದೃಷ್ಟ ಹೇಗೆ ಬದಲಾಗುತ್ತದೆ ಎಂದು ಊಹಿಸಲು ಅಸಾಧ್ಯ. ಇಲ್ಲೊಬ್ಬ ಗಣಿ ಕಾರ್ಮಿಕನಿಗೆ ಅಮೂಲ್ಯವಾದ ವಜ್ರ ಸಿಕ್ಕು ಆತನ ಅದೃಷ್ಟವೇ ಬದಲಾಗಿದೆ. ಸಣ್ಣ ಪ್ರಮಾಣದ ಇಟ್ಟಿಗೆ ವ್ಯವಹಾರ ನಡೆಸುತ್ತಿರುವ ವ್ಯಕ್ತಿಯೊಬ್ಬರು ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಗಣಿಯೊಂದರಲ್ಲಿ 26.11 ಕ್ಯಾರೆಟ್ ವಜ್ರ ಸಿಕ್ಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಜ್ರದ ಗಣಿಯಾಗಿರುವ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ಕಳೆದ ವರ್ಷ 30 ಲಕ್ಷದಿಂದ 35 ಲಕ್ಷ ಮೌಲ್ಯದ ಮೂರು ವಜ್ರಗಳನ್ನು ಹೊರ ತೆಗೆದ ಕಾರ್ಮಿಕರೊಬ್ಬರು ರಾತ್ರೋರಾತ್ರಿ ಕೋಟ್ಯಾಧಿಪತಿಯಾದರು. ಇದೀಗ ಪನ್ನಾದಲ್ಲಿ ಕಿಶೋರ್‌ಗಂಜ್‌ನ ನಿವಾಸಿ ಸುಶೀಲ್ ಶುಕ್ಲಾ ಅವರಿಗೆ ಕೃಷ್ಣ ಕಲ್ಯಾಣಪುರ ಪ್ರದೇಶದ ಬಳಿ ಇರುವ ಗಣಿಯಲ್ಲಿ ಅಮೂಲ್ಯವಾದ ಕಲ್ಲನ್ನು ಕಂಡುಕೊಂಡಿದ್ದಾರೆ. ಇಲ್ಲಿನ ವಜ್ರದ ಅಧಿಕಾರಿ ರವಿ ಪಟೇಲ್ ಇದರ ಬೆಲೆ 1.20 ಕೋಟಿ ರೂಪಾಯಿ ಎಂದಿದ್ದಾರೆ. ಇದನ್ನೂ ಓದಿ : ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು
Advertisement
Advertisement
ಸುಶಿಲ್ ಶುಕ್ಲಾ ಕಿಶೋರ್‌ಗಂಜ್‌ನಲ್ಲಿ ಸಣ್ಣ ಇಟ್ಟಿಗೆ ಗೂಡು ವ್ಯಾಪಾರವನ್ನು ನಡೆಸುತ್ತಿದ್ದರು. ಇನ್ನು ಗಣಿ ಕಾರ್ಮಿಕನಾಗಿಯೂ ಕೆಲಸ ಮಾಡುತ್ತಿದ್ದವನಿಗೆ ಅದೃಷ್ಟ ಲಕ್ಷ್ಮಿ ವಜ್ರದ ರೂಪದಲ್ಲಿ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದಂತಾಗಿದೆ. ಒಂದೆರಡು ದಿನಗಳಲ್ಲಿ ರತ್ನವನ್ನು ಹರಾಜಿಗೆ ಇಡಲಾಗುವುದು ಮತ್ತು ಸರ್ಕಾರದ ತೆರಿಗೆಯನ್ನು ಕಡಿತಗೊಳಿಸಿದ ನಂತರ ಗಣಿಗಾರರಿಗೆ ನೀಡಲಾಗುವುದು ಎಂದಿದ್ದಾರೆ. ಇದನ್ನೂ ಓದಿ : ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ
Advertisement
ಶುಕ್ಲಾ ಮಾತನಾಡಿ, ಬಾಡಿಗೆ ಜಮೀನಿನಲ್ಲಿ ಸಣ್ಣ ಪ್ರಮಾಣದ ಇಟ್ಟಿಗೆ ವ್ಯಾಪಾರ ನಡೆಸುತ್ತಿದ್ದೇನೆ. ಕಳೆದ 20 ವರ್ಷಗಳಿಂದ ವಜ್ರದ ಗಣಿಗಾರಿಕೆಯಲ್ಲಿ ತಾನು ಮತ್ತು ತನ್ನ ಕುಟುಂಬವೂ ತೊಡಗಿಸಿಕೊಂಡಿದೆ. ಇಷ್ಟು ದೊಡ್ಡ ರತ್ನವನ್ನು ನಾನು ಹೊರತೆಗೆಯುವುದು ಇದೇ ಮೊದಲು ಎಂದಿದ್ದಾರೆ.